ವಿವಿಧ ಸಂಘಟನೆಗಳ ಸಂಪೂರ್ಣ ಬೆಂಬಲ
ಮಂಗಳೂರು: ಉಳ್ಳಾಲ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ, ವಿವಿಧ ಜನವಿಭಾಗಗಳ ಹಲವಾರು ಬೇಡಿಕೆಗಳನ್ನು ಮುಂದಿಟ್ಟು ಎಪ್ರಿಲ್ 29ರಂದು ಬೆಳಿಗ್ಗೆ 10.30ಕ್ಕೆ ದೇರಳಕಟ್ಟೆ ಮೈದಾನದಲ್ಲಿ ಬ್ರಹತ್ ಹಕ್ಕೊತ್ತಾಯ ಸಮಾವೇಶ ನಡೆಯಲಿದ್ದು,ಈಗಾಗಲೇ ಹಲವಾರು ಸಂಘಟನೆಗಳು ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿವೆ.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ಉಳ್ಳಾಲ ತಾಲೂಕು ರಚನೆಯಾಗಿ 5 ವರ್ಷಗಳು ಕಳೆದರೂ ಇನ್ನೂ ಕೂಡ ತಾಲೂಕು ಕಚೇರಿ ಇಲ್ಲ, ಸರಕಾರಿ ತಾಲೂಕು ಆಸ್ಪತ್ರೆ ಇಲ್ಲ,ನ್ಯಾಯಾಲಯ ಸಬ್ ರಿಜಿಸ್ಟಾರ್ ಕಚೇರಿ ಇಲ್ಲ, ಸರಕಾರಿ ಪದವಿ ಕಾಲೇಜ್, ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜ್, ಪಾಲಿಟೆಕ್ನಿಕ್ ಇಲ್ಲ, ಕ್ರೀಡಾಂಗಣ,ಸುಸಜ್ಜಿತ ಮಾರುಕಟ್ಟೆ, ಪುರಭವನ, ರಂಗಮಂದಿರ ಇಲ್ಲ, ದುಡಿಯುವ ಕೈಗಳಿಗೆ ಉದ್ಯೋಗವಿಲ್ಲ, ಭೂಮಿ, ಮನೆ ನಿವೇಶನ ಇಲ್ಲ, ಕುಡಿಯುವ ನೀರಿಲ್ಲ – ಹೀಗೆ ಇಲ್ಲಗಳ ಸರಮಾಲೆಯಲ್ಲಿ ಕುಖ್ಯಾತಿ ಪಡೆದ ಉಳ್ಳಾಲ ತಾಲೂಕು ಅಭಿವೃದ್ಧಿ ಪಥದತ್ತ ಮುನ್ನಡೆಯುತ್ತಿದೆ ಎಂದು ಗುಲ್ಲೆಬ್ಬಿಸಲಾಗಿದೆ ಎಂದು ಸಂಘಟನೆಗಳು ದೂರಿವೆ.
ಮತ್ತೊಂದು ಕಡೆ ಅಕ್ರಮ ಮರಳುಗಾರಿಕೆ, ಕೆಂಪು ಮಣ್ಣು ಮಾಫಿಯಾ,ಭೂ ಮಾಫಿಯಾ,ಗಾಂಜಾ ಡ್ರಗ್ಸ್ ದಂಧೆ, ಧೋ ನಂಬರ್ ವ್ಯವಹಾರದಿಂದಾಗಿ ಮಣ್ಣು,ಮರಳು,ಭೂಮಿ ಕಳ್ಳರ ಹಾಗೂ ಅಕ್ರಮ ದಂಧೆಕೋರರ ತಾಣವಾಗಿ ಉಳ್ಳಾಲ ತಾಲೂಕು ಪರಿವರ್ತನೆಯಾಗುತ್ತಿದೆ. ವಿಪರೀತ ತೆರಿಗೆ ಹೆಚ್ಚಳ, ಡ್ರೈನೇಜ್ ಅವ್ಯವಸ್ಥೆ,ತ್ಯಾಜ್ಯ ವಿಲೇವಾರಿ,ಒಳರಸ್ತೆಗಳ ಅವ್ಯವಸ್ಥೆಯಿಂದಾಗಿ ಉಳ್ಳಾಲ ನಗರಸಭೆ,ಸೋಮೇಶ್ವರ ಪುರಸಭೆ, ಕೋಟೆಕಾರ್ ಪಟ್ಟಣ ಪಂಚಾಯತ್ ಪ್ರದೇಶಗಳ ಜನತೆ ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ ಎಂದಿವೆ.
ಹೀಗೆ ವಿವಿಧ ಜನವಿಭಾಗಗಳ ಜನತೆ ಒಂದಾಗಿ ಉಳ್ಳಾಲ ತಾಲೂಕಿನ ಅಭಿವೃದ್ಧಿಗಾಗಿ ಹಕ್ಕೊತ್ತಾಯ ಸಮಾವೇಶವನ್ನು ಹಮ್ಮಿಕೊಂಡಿದ್ದು,ಈಗಾಗಲೇ ದ್ವೀಪಗಳ ಉಳಿಸಿ ಹೋರಾಟ ಸಮಿತಿ,ಕ್ರಷಿಭೂಮಿ ಸಂರಕ್ಷಣಾ ಹೋರಾಟ ಸಮಿತಿ ಅಂಬ್ಲಮೊಗರು,ಕಾನೆಕೆರೆ ನಾಗರಿಕರ ಹೋರಾಟ ಸಮಿತಿ, ಅಟೋರಿಕ್ಷಾ ಚಾಲಕರ ಸಂಘ, ಬೀದಿಬದಿ ವ್ಯಾಪಾರಸ್ಥರ ಸಂಘ,ಕಟ್ಟಡ ಕಾರ್ಮಿಕರ ಸಂಘಟನೆ, ಕೋಟೆಕಾರ್ ಸರ್ಕಲ್ ಬೀಡಿ ಕಾರ್ಮಿಕರ ಸಂಘ,ಬಿಸಿಯೂಟ ನೌಕರರ ಸಂಘ,DYFI,SFI,ಜನವಾದಿ ಮಹಿಳಾ ಸಂಘಟನೆ, ದಲಿತ ಹಕ್ಕುಗಳ ಸಮಿತಿ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಗಳು ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದ್ದು, ವ್ಯಾಪಕ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ ಎಂದಿವೆ.
ಉಳ್ಳಾಲ ತಾಲೂಕಿನ ಅಭಿವೃದ್ಧಿಗಾಗಿ ನಡೆಯಲಿರುವ ಈ ನ್ಯಾಯಪರ ಹೋರಾಟದಲ್ಲಿ ಉಳ್ಳಾಲ ತಾಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು CPIM ಉಳ್ಳಾಲ ವಲಯ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಹಾಗೂ ಮುಡಿಪು ವಲಯ ಕಾರ್ಯದರ್ಶಿ ರಫೀಕ್ ಹರೇಕಳ ತಿಳಿಸಿದ್ದಾರೆ.




