ಬೆಂಗಳೂರು: ಸರ್ಕಾರಿ ಕಿರಿಯ ಕಾಲೇಜು ಅಧ್ಯಾಪಕ (ಪದವಿ ಪೂರ್ವ ಕಾಲೇಜು), ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕ ಹಾಗೂ ವಿಶ್ವವಿದ್ಯಾಲಯಗಳ ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ಆಕಾಂಕ್ಷಿಗಳಿಗೆ ಕನ್ನಡ ಸಾಹಿತ್ಯ ವಿಷಯದ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರಶ್ನೆ ಪತ್ರಿಕೆ ಆಧಾರಿತ ರೆಸಿಡೆನ್ಷಿಯಲ್ ತರಬೇತಿಯನ್ನು ಆಯೋಜಿಸಲಾಗಿದೆ.
- ವ್ಯಕ್ತಿಯನ್ನು ಗುರುತಿಸಿದರೆ ಸಮಾಜವನ್ನೇ ಗುರುತಿಸಿದಂತೆ: ಡಾ. ಎ ಆರ್ ಗೋವಿಂದಸ್ವಾಮಿ
- ಸಂವಿಧಾನ ಪೀಠಿಕೆ ದೇಶದ ಆತ್ಮವಿದ್ದಂತೆ: ಆದಿತ್ಯ ಚಟರ್ಜಿ
- ಕುಸಿಯುತ್ತಿರುವ ಪ್ರಜಾಪ್ರಭುತ್ವದ ವ್ಯಾಪ್ತಿ ಮತ್ತು ದೀರ್ಘಾವಧಿ ಪ್ರಧಾನಿಯ ಸಾಧನೆಗಳು
- ಜೀರಾ ರೈಸ್, ಘೀ ರೈಸ್ ಮತ್ತು ಲೆಮನ್ ರೈಸ್ ಮಾಡುವ ಸರಳ ವಿಧಾನ
- ಸಮಾಧಾನ್ ಸಮಾರೋಹ್ ಯಶಸ್ವಿಗೊಳಿಸಿ: ಡಾ.ಶಾಲಿನಿ ರಜನೀಶ್
ನಾಡಿನ ಖ್ಯಾತ ಸಾಹಿತಿ, ಬಂಡಾಯ ಚಳುವಳಿಯ ಸಂಘಟಕ, ನಾಟಕಕಾರ, ನಿವೃತ್ತ ಪ್ರಾಧ್ಯಾಪಕ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತರಗತಿಯನ್ನು ನಡೆಸುವಲ್ಲಿ ಅನುಭವಿಗಳಾಗಿರುವ ಪ್ರೊ.ರಾಜಪ್ಪ ದಳವಾಯಿಯವರು ಕನ್ನಡ ವಿಷಯದ ತರಗತಿಗಳನ್ನು ನಡೆಸಲಿದ್ದಾರೆ.
ಈಗಾಗಲೇ ತುಮಕೂರು, ಬೆಂಗಳೂರು, ಹಂಪಿ, ದೊಡ್ಡಬಳ್ಳಾಪುರ, ಗುಲಬರ್ಗಾ, ಬೆಳಗಾವಿ, ಕೋಲಾರ ಸೇರಿದಂತೆ ಅನೇಕ ಕಡೆ ಪದವಿಪೂರ್ವ ಮತ್ತು ಪದವಿ ತರಗತಿಗಳ ಉಪನ್ಯಾಸಕ ಮತ್ತು ಸಹಾಯಕ ಪ್ರಾಧ್ಯಾಪಕರ ಪರೀಕ್ಷೆ ಮತ್ತು ನೆಟ್ / ಜೆ ಆರ್ ಎಫ್ ತರಗತಿಗಳನ್ನು ನಡೆಸುವ ಮೂಲಕ ವಿದ್ಯಾರ್ಥಿ/ಆಕಾಂಕ್ಷಿಗಳಿಗೆ ನೆರವಾಗಿರುವ ಡಾ.ರಾಜಪ್ಪ ದಳವಾಯಿಯವರು ಇದೀಗ 1 ತಿಂಗಳ ಕಾಲ ವಸತಿಸಹಿತ ತರಗತಿಗಳ ತರಬೇತಿಯನ್ನು ನೀಡಲಿದ್ದಾರೆ.

ತರಬೇತಿ ವಸತಿ ಸಹಿತವಾಗಿರುವುದರಿಂದ 1 ತಿಂಗಳ ಕಾಲ ತರಬೇತಿ ನಡೆಯುವ ಸ್ಥಳದಲ್ಲೇ ವಾಸವಾಗಿರಬೇಕು. ತರಬೇತಿಯನ್ನು “ಆದಿಮ ಸಾಂಸ್ಕೃತಿಕ ಕೇಂದ್ರ, ಕೋಲಾರ”ದಲ್ಲಿ ನಡೆಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಮೊಬೈಲ್ ನಂಬರ್ ಗೆ ಸಂಪರ್ಕಿಸಬಹುದು. ಮೊದಲು ಬಂದ 50 ಜನ ಆಸಕ್ತರಿಗೆ ಮಾತ್ರ ಅವಕಾಶವಿದೆ.
ಹೆಸರು: ಡಾ.ಶ್ರೀನಿವಾಸ ಎನ್
ಮೊಬೈಲ್: 8553552008


