ಆಕಾಶದಲ್ಲಿ ಹೆಲಿಕಾಪ್ಟರ್‌ನಲ್ಲಿ ಹಾರಾಡುವ ‘ಹೆಲಿಕಾಪ್ಟರ್ ಸಿಎಂ’ @DKShivakumar ಅವರಿಗೆ ಬಡ ಸರ್ಕಾರಿ ಶಾಲಾ ಮಕ್ಕಳ ಹರಿದಿರುವ ಶೂ-ಸಾಕ್ಸ್ ಎಲ್ಲಿ ಕಾಣಬೇಕು?
- ಕೋಟ್ಯಂತರ ರೂ. ಅಕ್ರಮದ ಸಮಗ್ರ ತನಿಖೆಗೆ ಅಪ್ಸರ್ ಕೊಡ್ಲಿಪೇಟೆ ಆಗ್ರಹ
- ಜಿಡಿಪಿ ದರ ನಾಗಾಲೋಟದಲ್ಲಿ ಸಾಗಿದೆ, ಚಪ್ಪಾಳೆ ಹೊಡೆದು ಸಂಭ್ರಮಿಸೋಣ!
- ಪೌರ ಕಾರ್ಮಿಕರು ಕರ್ತವ್ಯಕ್ಕೆ ಸಮರ್ಪಕವಾಗಿ ಹಾಜರಾಗದಿದ್ದರೆ ಕೆಲಸದಿಂದ ವಜಾ: ಕೃಷ್ಣ ಬೈರೇಗೌಡ
- ಉಚಿತ ಶೂ-ಸಾಕ್ಸ್ ಯೋಜನೆಯಲ್ಲೂ ಶೇ. 40 ಕಮಿಷನ್: ಆರ್ ಅಶೋಕ್
- NRI ಮತದಾರರ ಪರ ಕುಟುಂಬ ಸದಸ್ಯರಿಗೆ SIR ವಿಚಾರಣೆಯಲ್ಲಿ ಹಾಜರಾಗಲು ಅವಕಾಶ ನೀಡಿ
ಬಡ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗಾಗಿ ನೀಡುವ ಉಚಿತ ಶೂ-ಸಾಕ್ಸ್ ಯೋಜನೆಯಲ್ಲೂ ಶೇ. 40 ಕಮಿಷನ್ ಹೊಡೆದು ಕಳಪೆ ಸಾಮಗ್ರಿ ಪೂರೈಸಿರುವುದು ಈ ಭ್ರಷ್ಟ ಕಾಂಗ್ರೆಸ್ ಸರ್ಕಾರದ ನಿರ್ಲಜ್ಜತನಕ್ಕೆ ಮತ್ತೊಂದು ಉದಾಹರಣೆ!
❌ವಿತರಿಸಿದ ಒಂದೇ ವಾರದಲ್ಲಿ ಕಿತ್ತುಹೋದ ಶೂಗಳು: ಧಾರವಾಡ, ರಾಯಚೂರು, ತುಮಕೂರು, ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸರ್ಕಾರ ವಿತರಿಸಿದ ಶೂಗಳ ಅಡಿಭಾಗ (ಸೋಲ್) ಕಿತ್ತುಹೋಗಿವೆ, ಹೊಲಿಗೆಗಳು ಬಿಟ್ಟುಕೊಂಡಿವೆ!
❌ಬಡ ಪೋಷಕರ ಆಕ್ರೋಶ: ಒಂದು ವಾರವೂ ಬಾಳಿಕೆ ಬಾರದ ಇಂತಹ ಕಳಪೆ ಬೂಟುಗಳನ್ನು ವಿತರಿಸಿ ಮಕ್ಕಳ ಭಾವನೆಗಳ ಜೊತೆ ಆಟವಾಡುತ್ತಿದ್ದೀರಾ? ಮತ್ತೆ ಪೋಷಕರೇ ಕೈಯಿಂದ ಹಣ ಹಾಕಿ ಖರೀದಿಸಬೇಕಾದರೆ ಈ ಯೋಜನೆಯ ನೈಜ ಉದ್ದೇಶವೇನು?
❌ಕಮಿಷನ್ ಆಸೆಗೆ ಮಕ್ಕಳ ಭವಿಷ್ಯವೇ ಬಲಿ: ಪೂರೈಕೆದಾರರ ಜೊತೆ ಶಾಮೀಲಾಗಿ, ಯಾವುದೇ ಗುಣಮಟ್ಟದ ಪರಿಶೀಲನೆ (Quality Check) ನಡೆಸದೆ ಕಳಪೆ ಶೂಗಳನ್ನು ಶಾಲೆಗಳಿಗೆ ಸರಬರಾಜು ಮಾಡಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಧೈರ್ಯವಿದೆಯೇ?
ಅಧಿಕಾರದ ಅಮಲಿನಲ್ಲಿ ತೇಲುತ್ತಿರುವ ಮುಖ್ಯಮಂತ್ರಿಗಳೇ, ಸರ್ಕಾರಿ ಶಾಲೆಗಳ ಬಡ ಮಕ್ಕಳ ಪಾದರಕ್ಷೆಯಲ್ಲೂ ಕಮಿಷನ್ ಹೊಡೆಯುವ ದರಿದ್ರ ಸ್ಥಿತಿಗೆ ನಿಮ್ಮ ಸರ್ಕಾರ ತಲುಪಿರುವುದು ತೀರಾ ನಾಚಿಕೆಗೇಡು.
ಕೂಡಲೇ ಈ ಕಳಪೆ ಶೂ ಪೂರೈಸಿದ ಗುತ್ತಿಗೆದಾರರನ್ನು ಬ್ಲಾಕ್‌ಲಿಸ್ಟ್‌ಗೆ ಸೇರಿಸಿ, ತನಿಖೆ ನಡೆಸಿ, ಬಡ ಮಕ್ಕಳಿಗೆ ತಕ್ಷಣವೇ ಅತ್ಯುತ್ತಮ ಗುಣಮಟ್ಟದ ಶೂ ಮತ್ತು ಸಾಕ್ಸ್ ವಿತರಿಸಬೇಕು!
– ಆರ್ ಅಶೋಕ್, ವಿಧಾನಸಭೆ ವಿಪಕ್ಷ ನಾಯಕ




