ಅಮಾಯಕರ ಬಂಧನವಾಗದಿರುವಂತೆ ಎಚ್ಚರ ವಹಿಸಿ : ಅಪ್ಸರ್ ಕೊಡ್ಲಿಪೇಟೆ.
ದಾವಣಗೆರೆ: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದಾವಣಗೆರೆ ಜಿಲ್ಲಾ ಸಮಿತಿ ವಿಶೇಷ ಸಭೆಯು ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಹಾಗೂ ರಾಜ್ಯ ಸಮಿತಿ ಸದಸ್ಯರು ಮತ್ತು ಹೈ ಕೋರ್ಟ್ ವಕೀಲರಾದ ಮಜೀದ್ ಖಾನ್ ಅವರ ಉಪಸ್ಥಿತಿಯಲ್ಲಿ ಮತ್ತು ಉಪಾಧ್ಯಕ್ಷರಾದ ರಜ್ವಿ ರಿಯಾಜ್ ಅಹಮದ್ ಅವರ ಅಧ್ಯಕ್ಷತೆಯಲ್ಲಿ ದಾವಣಗೆರೆಯ ಜಿಲ್ಲಾ ಕಛೇರಿಯಲ್ಲಿ ಇಂದು ಜರುಗಿತು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ, ಧಾರ್ಮಿಕ ಸಹಿಷ್ಣುತೆಯ ಗುಣವು ನಮ್ಮ ಶರಣರು, ಸೂಫಿಗಳ ಪರಂಪರೆಯಲ್ಲಿದೆ. ಹೀಗಾಗಿ ರಾಷ್ಟ್ರದ ಪ್ರಗತಿಗೆ ಸಾಮರಸ್ಯದ ಆಚರಣೆಗಳು ಅಗತ್ಯವಾಗಿವೆ ಎಂದರು.
ಎಲ್ಲಾ ಧರ್ಮಗಳ ಹಬ್ಬಗಳು ಕೋಮು ಸೌಹಾರ್ದತೆಯ ಪ್ರತೀಕವಾಗಿದ್ದು ಎಲ್ಲರೂ ಕೂಡಿ ಹಬ್ಬ ಹರಿದಿನಗಳನ್ನು ಆಚರಿಸಿದರೆ ಸಮಾಜದಲ್ಲಿ ಶಾಂತಿ ಸದಾಕಾಲ ನೆಲೆಸಲಿದೆ ಮತ್ತು ಪರಸ್ಪರರಲ್ಲಿ ಪ್ರೀತಿ, ಸ್ನೇಹ ಹಾಗೂ ಸೌಹಾರ್ದತೆ ಭಾವನೆ ಹೆಚ್ಚುವುದು ಎಂದರು.
ಆದರೆ ಇದಕ್ಕೆ ಅಪವಾದ ಎಂಬಂತೆ ದಾವಣಗೆರೆಯಲ್ಲಿ ಕೆಲವು ಸಂಘಪರಿವಾರದ ಕಾರ್ಯಕರ್ತರು ಗಣೇಶೋತ್ಸವ ಹೆಸರಿನಲ್ಲಿ ಪ್ರಚೋದನೆ ಗಳನ್ನು ಮಾಡುವ ಮೂಲಕ ಶಾಂತಿಗೆ ಭಂಗ ತರುವ ಕೃತ್ಯ ಎಸಗುತ್ತಿದ್ದು, ಹಿಂದೂ ಬಾಂಧವರು ಅಂತಹ ಕಿಡಿಗೇಡಿಗಳನ್ನು ಗಣೇಶ ಮೆರವಣಿಗೆಯಿಂದ ದೂರ ಇಟ್ಟರೆ ಯಾವುದೇ ಅನಾಹುತಗಳು ನಡೆಯುವ ಸಾಧ್ಯತೆ ಇಲ್ಲ.ಇದಕ್ಕೆ ಸಾಕ್ಷಿ ಎಂಬಂತೆ ಮೊನ್ನೆ ಮುಸ್ಲಿಂರ ಈದ್ ಮಿಲಾದ್ ಮೆರವಣಿಗೆಯಲ್ಲಿ ಇದೇ ದಾವಣಗೆರೆ ನಗರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನ ಯಾವುದೇ ಪ್ರಚೋದನಕಾರಿ ಘೋಷಣೆಗಳನ್ನು ಕೂಗದೆ ಸುಮಾರು 8 ಕಿಲೋಮೀಟರ್ ಉದ್ದದ ಮೆರವಣಿಗೆ ನಡೆಸಿರುವುದಾಗಿದೆ ಎಂದರು.
ಕರ್ನಾಟಕ ರಾಜ್ಯ ಸೇರಿದಂತೆ ದಾವಣಗೆರೆ ಜಿಲ್ಲೆಯಲ್ಲೂ ಸಂಘ ಪರಿವಾರ ಮತ್ತು ಬಿಜೆಪಿ ತನ್ನ ನಾಯಕರ ಒಳ ಜಗಳವನ್ನು ತಡೆಯಲು ಸಾಧ್ಯವಾಗದೆ ವಿಷಯಾಂತರ ಮಾಡಲು ರಾಜ್ಯದಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತಿದೆ, ಇದರ ಮುಂದುವರಿದ ಭಾಗವಾಗಿ ದಾವಣಗೆರೆ ನಗರದ ಬೇತೂರು ರಸ್ತೆ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಗಲಾಟೆ ನಡೆದು ನಗರದಲ್ಲಿ ಅಶಾಂತಿ ಸೃಷ್ಟಿ ಆಗಿರುತ್ತದೆ. ಇದಕ್ಕೂ ಮುಂಚೆ ಅಹಮದ್ ನಗರ ಧ್ವಜ ಕಟ್ಟುವ ವಿಚಾರದಿಂದ ಹಿಡಿದು ಕೆಲವೊಂದು ವಿಚಾರವನ್ನು ಹೊರತುಪಡಿಸಿ ಪ್ರಕ್ಷುಬ್ಧತೆಯಲ್ಲಿದ್ದ ನಗರವನ್ನು ಶಾಂತಿಯುತ ಗೊಳಿಸುವಲ್ಲಿ ಪೋಲೀಸ್ ಇಲಾಖೆಯ ಕಾರ್ಯವೈಖರಿ ಶ್ಲಾಘನೆಗೆ ಅರ್ಹವಾಗಿದೆ ಎಂದರು.
ಬಿಜೆಪಿ ರಾಜಕೀಯ ಲಾಭಕ್ಕಾಗಿ ರಾಜ್ಯ ಸೇರಿದಂತೆ ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸಲು ಪಿತೂರಿ ನಡೆಸುತ್ತಿದೆ, ಕ್ರಮ ಕೈಗೊಳ್ಳಬೇಕಾಗಿದ್ದ ಕಾಂಗ್ರೆಸ್ ಸರ್ಕಾರ ನಿರ್ಲಕ್ಷವೇ ತಾಳುತ್ತಿರುವುದೇ ಪ್ರಕ್ಷುಬ್ಧತೆಗೆ ಕಾರಣವಾಗುತ್ತಿದೆ. ಹೊನ್ನಾಳಿಯ ಮಾಜಿ ಶಾಸಕ ರೇಣುಕಾಚಾರ್ಯ ಬಂದು ಬೇತೂರು ರಸ್ತೆಯ ಗಲಾಟೆಗೆ ಸಂಬಂಧಿಸಿದಂತೆ 03 ಜನರನ್ನು ಬಿಡಿಸಿದ್ದಾರೆ ಎಂಬ ಸುದ್ದಿ ಪತ್ರಿಕೆಗಳಲ್ಲಿ ವರದಿಯಾಗಿದೆ. ಇದರ ಸತ್ಯಾತ್ಯತೆಯನ್ನು ಪೊಲೀಸ್ ಇಲಾಖೆ ಜನಸಾಮಾನ್ಯರಿಗೆ ತಿಳಿಸಬೇಕು ಎಂದು ಆಗ್ರಹಿಸಿದರು.
ಈಗ ನಗರದಲ್ಲಿ ಶಾಂತಿ ನೆಲೆಸಿದ್ದು, ಈ ವಿಚಾರದಲ್ಲಿ ಯಾವುದೇ ಅಮಾಯಕರನ್ನು ಬಂಧಿಸದಂತೆ, ಹಾಗೂ ಒಂದು ವೇಳೆ ಬಂಧಿಸಿದರೆ ಅವರನ್ನು ವಿಚಾರಣೆ ಮಾಡಿ ಶೀಘ್ರವಾಗಿ ಬಿಡುಗಡೆಗೊಳಿಸಲು ಒತ್ತಾಯಿಸಿದರು.
ಮುಸ್ಲಿಂ ಸಮುದಾಯದ ವೋಟ್ ಪಡೆದು ಗೆದ್ದು ಬಂದಿರುವ ಲೋಕಸಭಾ ಸದಸ್ಯೆ ಇದುವರೆಗೆ ಅಮಾಯಕ ಸಂತ್ರಸ್ತರ ಮನೆಗಳಿಗೆ ಕನಿಷ್ಠ ಸೌಜನ್ಯಕ್ಕಾದರೂ ಭೇಟಿ ನೀಡದಿರುವುದು ಖಂಡನೀಯ ಎಂದು ಜಿಲ್ಲಾ ಉಪಾಧ್ಯಕ್ಷ ರಿಯಾಜ್ ಅಹ್ಮದ್ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಹಮ್ಮದ್ ಮೋಹಸೀನ್, ಫಯಾಜ್ ಅಹಮದ್, ಜಿಲ್ಲಾ ಕಾರ್ಯದರ್ಶಿ ಮೊಹಮ್ಮದ್ ಅಜರುದ್ದೀನ್, ಜಿಲ್ಲಾ ಕೋಶಾಧಿಕಾರಿ ಎ ಆರ್ ತಾಹಿರ್, ಜಿಲ್ಲಾ ಸಮಿತಿ ಸದಸ್ಯ ಮನ್ಸೂರ್ ಆಲಿ ದಾವಣಗೆರೆ, ದಕ್ಷಿಣ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಏಜಾಜ್ ಅಹಮದ್ ಹಾಜರಿದ್ದರು.




