ಸೃಷ್ಟಿಕರ್ತನ ಅನುಗ್ರಹದಿಂದ ಹಾಗೂ ಗುರು ಹಿರಿಯರ ಅಪಾರ ಆಶೀರ್ವಾದದಿಂದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ನಾನು ಸಲ್ಲಿಸಿದ್ದ ನಾಮಪತ್ರ ಅಧಿಕೃತವಾಗಿ ಅಂಗೀಕರಿಸಲಾಗಿದೆ ಎಂಬುದು ನನಗೆ ಅಪಾರ ಸಂತೋಷ ಮತ್ತು ಜವಾಬ್ದಾರಿಯ ಭಾವನೆ ನೀಡುತ್ತಿದೆ.
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
- ಜನಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ಸಜ್ಜು
- UPI ಡಿಜಿಟಲ್ ಮೇಲಿನ ಹೆಚ್ಚುವರಿ ಶುಲ್ಕ ಪ್ರಸ್ತಾವನೆ ಹಿಂಪಡೆಯಬೇಕು
- ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಪೌರ ಕಾರ್ಮಿಕರಿಗೆ ಸನ್ಮಾನ
ಇದು ದಾವಣಗೆರೆ ದಕ್ಷಿಣದ ಜನರ ನಂಬಿಕೆ, ಶೋಷಿತ ವರ್ಗಗಳ ಆಶೆಗಳು ಮತ್ತು ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟದ ಮತ್ತೊಂದು ಮಹತ್ವದ ಹೆಜ್ಜೆ.
ನಾಮಪತ್ರ ಸಲ್ಲಿಸಿದ ದಿನದಿಂದಲೂ ಜನರು ತೋರಿಸುತ್ತಿರುವ ಪ್ರೀತಿ, ಬೆಂಬಲ ಮತ್ತು ವಿಶ್ವಾಸ ನನ್ನಲ್ಲಿ ಮತ್ತಷ್ಟು ಉತ್ಸಾಹ ಮತ್ತು ಬದ್ಧತೆಯನ್ನು ತುಂಬಿದೆ. ರಾಜ್ಯದ ವಿವಿಧ ಭಾಗಗಳಿಂದ ನಾಯಕರು, ಕಾರ್ಯಕರ್ತರು, ಸ್ನೇಹಿತರು ಮತ್ತು ಹಿತೈಷಿಗಳು ನೀಡುತ್ತಿರುವ ಬೆಂಬಲವು ಈ ಹೋರಾಟವು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಲ್ಲ, ಇದು ಸಮಾನತೆ ಮತ್ತು ಸ್ವಾಭಿಮಾನದ ಹೋರಾಟ ಎಂಬುದನ್ನು ಸ್ಪಷ್ಟಪಡಿಸಿದೆ.
ನಾನು ದಮನಿತರ ಧ್ವನಿಯಾಗಿ, ಶೋಷಿತರ ಹಕ್ಕಿನ ಹೋರಾಟಗಾರನಾಗಿ, ಅಹಿಂದ ವರ್ಗಗಳ ಆಶಾಕಿರಣವಾಗಿ ಈ ಹೋರಾಟಕ್ಕೆ ಕಾಲಿಟ್ಟಿದ್ದೇನೆ.
ನಿಮ್ಮ ಪ್ರಾರ್ಥನೆ, ಬೆಂಬಲ ಮತ್ತು ಸಹಕಾರವೇ ನನ್ನ ಶಕ್ತಿ. ಬನ್ನಿ, ನಾವು ಒಟ್ಟಾಗಿ ದಾವಣಗೆರೆ ದಕ್ಷಿಣದಲ್ಲಿ ಹೊಸ ಇತಿಹಾಸ ನಿರ್ಮಿಸೋಣ.
– ಅಪ್ಸರ್ ಕೊಡ್ಲಿಪೇಟೆ




