ನಾಗತಿಹಳ್ಳಿ ರಮೇಶ್ ತಮ್ಮ “ಬಯಲ ಕನ್ನಡಿ ಮತ್ತು ಮನದ ಮಿಂಚು” ಸಂಕಲನಕ್ಕೆ ನನ್ನಿಂದ ಅಭಿಪ್ರಾಯವನ್ನು ಬಯಸಿದ್ದಾರೆ. ನಾಗತಿಹಳ್ಳಿ ಸೌಮ್ಯ ಕವಿ. ಹೃದಯವಂತ ಕವಿ. ಮೇಲಾಗಿ ತಾಯಿ ಹೃದಯದ ಕವಿ. ತಾಯಿ ಮತ್ತು ಮಗುವಿನ ಕರುಳ ಸಂಬಂಧವನ್ನು ಇವರಷ್ಟು ಆಳವಾಗಿ ಕಲಕಿರುವ ಕವಿ ಮತ್ತೊಬ್ಬರಿಲ್ಲ ಎನಿಸುತ್ತದೆ. ಇವರ ಹಿಂದಿನ ಸಂಕಲನ ‘ಸಮುದ್ರ ಮತ್ತು ಮಳೆ’ಯು ತಾಯಿಯ ಗುಂಗಿನಲ್ಲೇ ಸುತ್ತುಹೊಡೆಯುತ್ತದೆ. ಸದಾ ಮಾನವೀಯತೆಗೆ ಮಿಡಿಯುವ ಮನಸ್ಸು ಇವರದು. ಅಂತಹ ಹೆಂಗರುಳ ಸ್ವಭಾವದ ಭಾವಜೀವಿ ಇವರು.
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
ಕಾವ್ಯ ಒಂದು ಮೇರು ಕಲೆ. ರೂಪಕ ನಿರ್ಮಿತಿಯೆ ಅದರ ಗುರಿ. ಅದರ ಅಗತ್ಯವೇನು ಎಂದು ಕೇಳಬಹುದು. ಮನಸ್ಸು ಭಾವ ಪ್ರಧಾನವಾದುದು. ವಕ್ರೋಕ್ತಿಯಲ್ಲಿ ಉದ್ವೇಗಕ್ಕೊಯ್ಯುವ, ಉನ್ಮಾದಗೊಳಿಸುವ ಶಕ್ತಿ ಇದೆ. ಬೇಂದ್ರೆ ಕಾವ್ಯ ಚಿಂತನೆಯಲ್ಲಿ ಕವಿಯ ಸ್ವರೂಪವನ್ನು ಎರಡು ಮುಖಗಳಲ್ಲಿ ಗುರುತಿಸುತ್ತಾರೆ. ದ್ರಷ್ಟಾರ – ಸೃಷ್ಟಾರ ಎಂದು. ದೃಷ್ಟಿ ಮತ್ತು ಸೃಷ್ಟಿ ಇವೆರಡೂ ಕವಿಯ ಶಕ್ತಿಸೂಚಕಗಳು.
ಒಂದು ದೇಶವನ್ನು ಆರ್ಥಿಕತೆಯಿಂದ ಅಳೆದರೆ, ಸಮಾಜವನ್ನು ಸಂಸ್ಕೃತಿಯಿಂದ ಅಳೆಯಲಾಗುತ್ತದೆ. ಕವಿಗಳು ಸಂಸ್ಕೃತಿಯ ಕಾವಲುಗಾರರು. ಸರಿ – ತಪ್ಪು, ಸುಳ್ಳು ಮತ್ತು ಸತ್ಯಗಳನ್ನು ಜನರಿಗೆ ಸರಿಯಾಗಿ ಅರ್ಥೈಸಿ ಹೇಳಬೇಕು. ಆದ್ದರಿಂದ ಕವಿಗಳ ಜವಾಬ್ದಾರಿ ದೊಡ್ಡದು. ಕವಿಗೆ ಇರಬೇಕಾದದ್ದು ಮಾನವೀಯ ಮೌಲ್ಯಗಳ ಒಡನಾಟ. ಕುವೆಂಪು ಹೇಳಿದಂತೆ ವಿಶ್ವಮಾನವ ಪರಿಕಲ್ಪನೆ. ಸಮಾಜವು ಇಂದು ಕಲುಷಿತಗೊಂಡಿದೆ ಎಂದು ಬೇರೆ ಹೇಳಬೇಕಾಗಿಲ್ಲ. ಜಾತಿವ್ಯವಸ್ಥೆ ಹಿಂದಿಗಿಂತಲೂ ತೀವ್ರವಾದ ಆಚರಣೆಯಲ್ಲಿದೆ. ಅಸ್ಪೃಶ್ಯತೆಯೂ ಢಾಳಾಗಿ ಆಚರಿಸಲ್ಪಡುತ್ತಿದೆ. ಮಠಮಾನ್ಯಗಳು ಇಂತಹ ವಿಚಾರಗಳಲ್ಲಿ ಚಕಾರ ಎತ್ತುವುದಿಲ್ಲ. ಸ್ವಹಿತಾಶಕ್ತಿಗಳು ಸುಳ್ಳುಗಳನ್ನು ಹೇಳಿ ಭ್ರಮೆಗಳನ್ನು ಸೃಷ್ಟಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕವಿಗಳು ಏನು ಮಾಡಬೇಕು? ಸತ್ಯವನ್ನು ಹುಡುಕಿ ಹೇಳುವ ಧೈರ್ಯ ಮಾಡಬೇಕು ಮತ್ತು ಅದನ್ನು ಸೌಂದರ್ಯಾತ್ಮಕವಾಗಿ ಹೇಳುವ ಕಲೆಯನ್ನು ಬೆಳೆಸಿಕೊಳ್ಳಬೇಕು.
ನಾಗತಿಹಳ್ಳಿ ರಮೇಶ್ ಅವರ ಈ ಸಂಕಲನದಲ್ಲಿ 111 ದೀರ್ಘ ಕವಿತೆಗಳಿವೆ. ಎಲ್ಲವೂ ವ್ಯಕ್ತಿಯನ್ನು, ಸಮಾಜವನ್ನು ಒಡಲಲ್ಲಿಟ್ಟುಕೊಂಡು ಬರೆದ ಅಂತಃಕರಣದ ಕವಿತೆಗಳು. ಅವರು ಪ್ರೀತಿಯ ಮೌನದ ಹಾಡನ್ನು ಬರೆಯುವ ಕವಿ. ಈಗಾಗಲೇ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಇವರಿಗೆ ಇನ್ನೂ ಹೆಚ್ಚಿನ ಯಶಸ್ಸು ದೊರಕಲಿ ಎಂದು ಹಾರೈಸುತ್ತೇನೆ.
– ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ಹಿರಿಯ ಸಾಹಿತಿ




