ಕಾಲಡಿಯ ಕಣ್ಣು ಕೃತಿ ಹೆಚ್ಚು ಹೆಚ್ಚು ಜನರಿಗೆ ತಲುಪಲಿ: ಸಿದ್ದರಾಮಯ್ಯ

2 months ago

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಅವರ ಮನೆಯಲ್ಲಿ ಹಿರಿಯ ಗಾಯಕ ಪಿಚ್ಚಳ್ಳಿ ಭೇಟಿ ಮಾಡಿದ ಸಂದರ್ಭದಲ್ಲಿ ಕೋಲಾರದ ದಲಿತ ಚಳುವಳಿಯ ಪ್ರಮುಖ ನಾಯಕರಲ್ಲಿ ಒಬ್ಬರಾದ ಸಿ.ಎಂ.ಮುನಿಯಪ್ಪ ಅವರ ಆತ್ಮಕಥೆ (25 ವರ್ಷಗಳ DSS ಇತಿಹಾಸ) “ಕಾಲಡಿಯ ಕಣ್ಣು” ಪುಸ್ತಕ ನೀಡಿದರು. ಈ ವೇಳೆ ಪುಸ್ತಕ ನೋಡಿ ಖುಷಿ ಪಟ್ಟ ಸಿದ್ದರಾಮಯ್ಯ ಅವರು ಸಿ.ಎಂ.ಮುನಿಯಪ್ಪ ಅವರಿಗೆ ಕರೆ ಮಾಡಿ ಮಾತನಾಡಿ ಕುಶಲೋಪರಿ ವಿಚಾರಿಸಿದರು. ಜೊತೆಗೆ ತಪ್ಪದೆ ಪುಸ್ತಕ ಓದುತ್ತೇನೆ ಎಂದು ಹೇಳಿದರು. ಜೊತೆಗೆ, ಕಾಲಡಿಯ ಕಣ್ಣು ಕೃತಿ ಹೆಚ್ಚು ಹೆಚ್ಚು ಜನರಿಗೆ ತಲುಪಲಿ ಎಂದು ಶುಭ ಕೋರಿದರು.

Leave a Reply