ರಂಗಬಳಪ ವೇದಿಕೆ ಮನವಿ
ಯಾದಗಿರಿ: ಜಿಲ್ಲಾ ಕೇಂದ್ರ ಸ್ಥಾನದ ನಗರದಲ್ಲಿ ಕಳೆದ ಕೆಲವು ವರ್ಷಗಳಿಂದ ನಿರ್ಮಾಣಗೊಳ್ಳುತ್ತಿರುವ ಜಿಲ್ಲಾ ರಂಗ ಮಂದಿರ ಕಟ್ಟಡ ಕೂಡಲೇ ಲೋಕಾರ್ಪಣೆ ಮಾಡುವ ಮೂಲಕ ರಂಗ ಚಟುವಟಿಕೆಗಳಿಗೆ ಅನುವು ಮಾಡಿಕೊಡಬೇಕೆಂದು ರಂಗಬಳಪ ಸಾಂಸ್ಕ್ರತಿಕ ವೇದಿಕೆ ನಿರ್ದೇಶಕ ಡಾ.ರಾಜೇಂದ್ರಕುಮಾರ ಕೆ.ಮುದ್ನಾಳ್ ಒತ್ತಾಯಿಸಿದ್ದಾರೆ.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ವೇದಿಕೆ ಸದಸ್ಯರೊಂದಿಗೆ ಡಿಸಿ ಕಚೇರಿ ತೆರಳಿ ಈ ಕುರಿತು ಮನವಿ ಸಲ್ಲಿಸಿರುವ ಅವರು, ಜಿಲ್ಲಾ ಕೇಂದ್ರವಾಗಿ 14 ವರ್ಷಗಳು ಗತಿಸಿದರೂ ಒಂದು ರಂಗ ಮಂದಿರ ಇಲ್ಲದೇ ಇರುವುದು ಸೋಜಿಗದ ಸಂಗತಿ.ಇದರಿಂದಾಗಿ ಜಿಲ್ಲೆಯಲ್ಲಿ ರಂಗ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಬೇರೆ ಕಡೆಯಿಂದ ಕಲಾವಿದರು, ನಾಟಕ ತಂಡಗಳು ಬಂದು ನಾಟಕ ಪ್ರದರ್ಶನ ಮಾಡಲು ಸೂಕ್ತ ಸ್ಥಳವಿಲ್ಲದೇ ರಂಗಭೂಮಿ ಸೊರಗುತ್ತಿದೆ. ಇರುವ ಸ್ಥಳಿಯ ಕಲಾವಿದರಿಗೆ ಸೂಕ್ತ ಸ್ಥಳ ಮತ್ತು ವೇದಿಕೆ ಇಲ್ಲ. ಈ ನಿಟ್ಟಿನಲ್ಲಿ ರಂಗಬಳಪ ವೇದಿಕೆ ತಂಡಗಳನ್ನು ಜಿಲ್ಲೆಗೆ ಆವ್ಹಾನಿಸಲು ಸಿದ್ದವಿದ್ದು, ಕೂಡಲೇ ರಂಗ ಮಂದಿರ ಆರಂಭಿಸಬೇಕೆಂದು ಅವರು ಮನವಿಯಲ್ಲಿ ವಿವರಿಸಿದ್ದಾರೆ.
ರಂಗ ಕಮ್ಮಟ, ಕ್ಯಾವ ಶಿಬಿರ ಸೇರಿದಂತೆಯೇ ಸಾಂಸ್ಕ್ರತಿಕ ಕೆಲಸಗಳಿಗೆ ಹೊಡೆತ ಬಿದ್ದಿದೆ.ಕಾರಣ, ಈ ಬೇಡಿಕೆಯನ್ನು ಜಿಲ್ಲಾಡಳಿತ ಗಂಭಿರವಾಗಿ ಪರಿಗಣಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಈ ವೇಳೆ ವೇದಿಕೆ ಸದಸ್ಯರಾದ ಶರಣಪ್ಪ, ಶಿವಶಂಕರ, ಸಹದೇವ, ರಫಿ, ಗುರುರಾಜ್ ಮತ್ತು ಶಿವಕುಮಾರ ಸೇರಿದಂತೆ ಮತ್ತಿತರರು ಇತರರಿದ್ದರು.




