ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಪಾಲಿಕೆ ಸೌಧದಲ್ಲಿ ನೂತನವಾಗಿ ಅಳವಡಿಸುತ್ತಿರುವ ಎಲ್.ಇ.ಡಿ. ಲೈಟ್ಸ್ ಹಾಗೂ ಸ್ಮಾರ್ಟ್ ಕಂಟ್ರೋಲರ್ ಕಾಮಗಾರಿಗೆ ಸಿಎಂ ಬಸವರಾಜ್ ಬೊಮ್ಮಾಯಿ, ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಚಾಲನೆ ನೀಡಿದರು.
ಸಿಎಂ ಬಸವರಾಜ ಎಸ್.ಬೊಮ್ಮಾಯಿ ಮಾತನಾಡಿ, ರಾಜ್ಯದಲ್ಲಿ ಉತ್ತಮ ವಿಧಾನಸಭಾ ಕ್ಷೇತ್ರ ಮಾಡಬೇಕು ಎಂದು ವಿ.ಸೋಮಣ್ಣ ಹಗಲಿರುಳು ಶ್ರಮಿಸುತ್ತಿದ್ದಾರೆ. ವಿ.ಸೋಮಣ್ಣ ಎಂದರೆ ವಿಕ್ಟರಿ ಸೋಮಣ್ಣ ಎಂದು ಹೆಸರು. ಜನಮಾನಸದಲ್ಲಿ ನಿಂತಿದ್ದಾರೆ. ಜನ ಸಾಮಾನ್ಯರ ಸಮಸ್ಯೆಗಳನ್ನು ಅಲಿಸಿ, ಅವಿರತ ಶ್ರಮವಹಿಸಿ ಶಾಶ್ವತ ಪರಿಹಾರ ನೀಡುವಲ್ಲಿ ವಿ.ಸೋಮಣ್ಣ ನಿರತರಾಗಿದ್ದಾರೆ ಎಂದರು.
ತಂತ್ರಜ್ಞಾನ ಡೊಡ್ಡ ಮಟ್ಟದಲ್ಲಿ ಬೆಳೆಯುತ್ತಿದೆ. ಸ್ಯಾಟಲೈಟ್ ಉಪಯೋಗ ಮಾಡಿಕೊಂಡು 20 ಸಾವಿರ ಬೀದಿ ದೀಪಗಳನ್ನು ಎಲ್.ಇ.ಡಿ.ದೀಪ ಆಳವಡಿಸಿ, ಬೀದಿ ದೀಪ ಸಮಸ್ಯೆಗಳನ್ನು ಕಂಟ್ರೋಲ್ ರೂಂನಲ್ಲಿ ಕುಳಿತು ಪರಿಹರಿಸಬಹುದು. ವಿದ್ಯುತ್ ಉಳಿತಾಯ, ಕಡಿಮೆ ವೆಚ್ಚವಾಗುವ, ಸಮಸ್ಯೆಗಳ ತತಕ್ಷಣ ಪರಿಹಾರ ನೀಡುವ ತಂತ್ರಜ್ಞಾನ ವ್ಯವಸ್ಥೆ ಹಾಗೂ ಎಲ್.ಇ.ಡಿ. ದೀಪಗಳನ್ನು ಬೇರೆ ವಿಧಾನಸಭಾ ಕ್ಷೇತ್ರದಲ್ಲಿ ಈ ತಂತ್ರಜ್ಞಾನ ಆಳವಡಿಸಿಕೊಳ್ಳಲು ಅನುದಾನ ನೀಡಲಾಗುವುದು. 19 ಕೋಟಿ ವೆಚ್ಚದಲ್ಲಿ ಎಲ್.ಇ.ಡಿ. ದೀಪಗಳ ನಿಯಂತ್ರಣ ಕೊಠಡಿ ನಿರ್ಮಿಸಲಾಗಿದೆ ಎಂದರು.
ವಿ.ಸೋಮಣ್ಣ ಮಾತನಾಡಿ, ಗೋವಿಂದರಾಜನಗರ ಮಾದರಿ ವಿಧಾನಸಭಾ ಕ್ಷೇತ್ರವಾಗಲು ಹಲವಾರು ಅಭಿವೃದ್ದಿ ಯೋಜನೆಗಳನ್ನು ಕೈಗೊಳ್ಳಲಾಗಿದೆ. 20 ಸಾವಿರ ಬೀದಿ ದೀಪಗಳನ್ನು ಎಲ್.ಇ.ಡಿ. ದೀಪಾಗಳಾಗಿ ಬದಲಾಯಿಸಲಾಗಿದೆ. ವಿದ್ಯುತ್ ಉಳಿಯತಾಯವಾಗಲಿದೆ. ಮುಂದಿನ ತಿಂಗಳು 300 ಹಾಸಿಗೆ ಸಾಮ್ಯರ್ಥದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆಯಾಗಲಿದೆ. ಸಿ.ಎಂ. ಎಂದರೆ ಕಾಮನ್ ಮ್ಯಾನ್ ರೀತಿಯಲ್ಲಿ ಮುಖ್ಯಮಂತ್ರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ವಿಧಾನಪರಿಷತ್ ಸದಸ್ಯರ ಅ.ದೇವೇಗೌಡ, ರಾಜ್ಯ ಬಿ.ಜೆ.ಪಿ.ಯುವ ಮುಖಂಡ ಡಾ.ಅರುಣ್ ಸೋಮಣ್ಣ, ಗೋವಿಂದರಾಜನಗರ ಮಂಡಲ ಬಿ.ಜೆ.ಪಿ. ಅಧ್ಯಕ್ಷ ವಿಶ್ವನಾಥಗೌಡ, ಮಾಜಿ ಮಹಾನಗರ ಪಾಲಿಕೆ ಸದಸ್ಯ ಕೆ.ಉಮೇಶ್ ಶೆಟ್ಟಿ, ವಾಗೇಶ್, ಮೋಹನ್ ಕುಮಾರ್, ದಾಸೇಗೌಡ, ರೂಪಲಿಂಗೇಶ್ವರ್, ಬಿ.ಜೆ.ಪಿ. ಮುಖಂಡ ರಾಜಪ್ಪ ಭಾಗವಹಿಸಿದ್ದರು.




