ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ 200 ಕೋಟಿ ಅನುದಾನ: ವಸತಿ ಸಚಿವ ವಿ.ಸೋಮಣ್ಣ

4 years ago

ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನಾಗರಭಾವಿ ವಾರ್ಡ್ ನಲ್ಲಿ ನೂತನವಾಗಿ ನಿರ್ಮಿಸಲಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೂಡಲಪಾಳ್ಯ ವಾರ್ಡ್ ನಲ್ಲಿ ನೆಲಮಟ್ಟದ ಜಲಸಂಗ್ರಹಾಗಾರ ಹಾಗೂ ಕಾವೇರಿಪುರ ನಾಡಪ್ರಭು ಕೆಂಪೇಗೌಡ ಬಹುಪಯೋಗಿ ಕಟ್ಟಡವನ್ನು ಸಿಎಂ ಬಸವರಾಜ ಬೊಮ್ಮಾಯಿ, ವಸತಿ ಸಚಿವ ವಿ.ಸೋಮಣ್ಣ, ತೋಟಗಾರಿಕೆ ಸಚಿವ ಮುನಿರತ್ನ, ವಿಧಾನಪರಿಷತ್ ಸದಸ್ಯರಾದ ಅ.ದೇವೇಗೌಡ, ಪುಟ್ಟಣ್ಣ,
ಆಯುಕ್ತ ತುಷಾರ್ ಗಿರಿನಾಥ್, ರಾಜ್ಯ ಬಿ.ಜೆ.ಪಿ. ಯುವ ಮುಖಂಡ ಡಾ. ಅರುಣ್ ಸೋಮಣ್ಣ ಲೋಕಾರ್ಪಣೆ ಮಾಡಿದರು.
ಸಿಎಂ ಬಸವರಾಜ್ ಬೊಮ್ಮಾಯಿ ಮಾತನಾಡಿ, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಜನರ ಅಭಿಮಾನ, ಪ್ರೀತಿ, ವಿಶ್ವಾಸವನ್ನು ವಿ.ಸೋಮಣ್ಣ ಗಳಿಸಿದ್ದಾರೆ. ರಾಜ್ಯ, ಬೆಂಗಳೂರು ಅಭಿವೃದ್ದಿಗೆ ಕಾಯಕ ಸೇವೆ ಮಾಡುತ್ತಿದ್ದೇನೆ. ಜನರ ಸೇವೆಯೆ ಶಾಶ್ವತವಾಗಿ ಉಳಿಯುತ್ತದೆ. ವಿ.ಸೋಮಣ್ಣ ಕಲಾವಿದರಾದರು, ಇಂಜನಿಯರ್ ಗೆ ಇರುವ ತಂತ್ರಜ್ಞತೆ ಅವರಲ್ಲಿ ಇದೆ ಎಂದರು.
ವಿ.ಸೋಮಣ್ಣ ಅವರು ಜನರ ಪ್ರೀತಿ ಗಳಿಸಿದ್ದಾರೆ . ಜಲಸಂಗ್ರಹ ಕೇಂದ್ರದಿಂದ 9 ಸಾವಿರ ಮನೆಗಳಿಗೆ ನೀರು ಲಭಿಸಲಿದೆ. ಜನ ಸೇವೆಯ ರಾಜಕಾರಣಿ ಎಂದರೆ ವಿ.ಸೋಮಣ್ಣ. ಬಸವ ಯೋಜನೆ 5 ಲಕ್ಷ ಮನೆ, ಪ್ರಧಾನಿ ಆವಾಸ್ ಯೋಜನೆ 2 ಲಕ್ಷ ಮನೆ ಮತ್ತು ಕೊಳಗೇರಿ ಅಭಿವೃದ್ದಿ ಮಂಡಳಿ ವತಿಯಿಂದ 1 ಲಕ್ಷ ಮನೆ ನಿರ್ಮಾಣ, ಮೆಟ್ರೋ ಯೋಜನೆ ಮತ್ತು 17 ಸಾವಿರ ಕೋಟಿ ವೆಚ್ಚದಲ್ಲಿ ಸಬ್ ಅರ್ಬನ್ ರೈಲು, 15 ಸಾವಿರ ಕೋಟಿ ವೆಚ್ಚದಲ್ಲಿ ಪೆರಿಫೆರಲ್ ರಸ್ತೆ , 6000 ಕೋಟಿ ಬೆಂಗಳೂರು ನಗರ ಅಭಿವೃದ್ದಿಗೆ ನೀಡಲಾಗಿದೆ. ಐದು ಆಧುನಿಕ ನಗರ, ನಿರ್ಮಾಣ ಮಾಡಲಾಗುತ್ತಿದೆ. ಕರ್ನಾಟಕ ಭವ್ಯ ಭವಿಷ್ಯವು ನಿಮ್ಮ ಆಶೀರ್ವಾದದಿಂದ ಸಹಕಾರ ಗೊಳ್ಳಲಿದೆ ಎಂದರು.
ಸಚಿವ ವಿ.ಸೋಮಣ್ಣರವರು ಮಾತನಾಡಿ, ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯ ಅಭಿವೃದ್ದಿ ಪಥದತ್ತ ಸಾಗುತ್ತಿದೆ. ನಾಡಪ್ರಭು ಕೆಂಪೇಗೌಡ ಸ್ಮರಣೆಯಲ್ಲಿ ಬಹು ಉಪಯೋಗಿ ಬಸ್ ನಿಲ್ದಾಣ ಲೋಕಾರ್ಪಣೆ ಮತ್ತು 3.5 ದಶಲಕ್ಷ ಲೀಟರ್ ಜಲಸಂಗ್ರಹ ಕೇಂದ್ರ, 52 ದೇವಸ್ಥಾನ ಜೀರ್ಣೋದ್ದಾರ ಮಾಡಲಾಗಿದೆ. 75 ಶುದ್ಧ ಕುಡಿಯುವ ನೀರಿನ ಘಟಕ ಮತ್ತು 17 ಗ್ರಂಥಾಲಯ ಹಾಗೂ ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣ ಮತ್ತು ಪೇಜಾವರ ಶ್ರೀ ಕ್ರೀಡಾಂಗಣ, 24 ಬ್ಯಾಡ್ಮಿಂಟನ್ ಕೋರ್ಟ್, 17ವ್ಯಾಯಾಮ ಕೇಂದ್ರ, 10 ಕೋಟಿ ರೂಪಾಯಿ ವೆಚ್ಚದಲ್ಲಿ ಕನಕ ಭವನ ಮತ್ತು ಸಾರ್ವಜನಿಕರ ಉಪಯೋಗಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಡಾ.ಬಿ.ಆರ್.ಅಂಬೇಡ್ಕರ್ ಅವರ ಸ್ಮರಣೆಯಲ್ಲಿ ಕ್ರೀಡಾಂಗಣ ಶೀಘ್ರದಲ್ಲಿ ಲೋಕರ್ಪಣೆ ಮಾಡಲಾಗುವುದು. ರಾಜ್ಯ ಸರ್ಕಾರದಿಂದ 200 ಕೋಟಿಗಿಂತ ಹೆಚ್ಚು ಅನುದಾನ ಸಿಎಂ ನೀಡಿದ್ದಾರೆ. ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ ಮತ್ತು 60 ಕ್ಕೂ ಹೆಚ್ಚು ಉದ್ಯಾನವನಗಳನ್ನು ನಿರ್ಮಿಸಲಾಗಿದೆ. ಗೋವಿಂದರಾಜನಗರ ಮಾದರಿ ವಿಧಾನಸಭಾ ಎಂಬ ಕೀರ್ತಿ ಗಳಿಸಿದೆ ಎಂದರು.

Leave a Reply