ದೆಹಲಿ: ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ (ಎನ್ಎಸ್ಡಿ) ಇದೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಪ್ರದರ್ಶಿಸಬೇಕಿದ್ದ ಭೀಷಮ್ ಸಾಹ್ನಿಯ ತಮಸ್ನ ರಂಗಪ್ರಯೋಗವನ್ನು ಮುಂದೂಡಲಾಗಿದೆ. ಹೀಗೆ ಮುಂದೂಡಲಾಗಿರುವ ಕುರಿತು ರಂಗಪ್ರಯೋಗದಲ್ಲಿ ಭಾಗಿಯಾದವರಿಗೆ ಯಾವುದೇ ಮಾಹಿತಿಯನ್ನು ನೀಡಲಾಗಿಲ್ಲ, ಮುಂದಿನ ಪ್ರಯೋಗ ಮತ್ತು ಇತರ ವಿಷಯಗಳ ಕುರಿತು ಯಾವುದೇ ಮಾಹಿತಿ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಆಗಸ್ಟ್ 14 ರಿಂದ 20 ರವರೆಗೆ NSD ರೆಪರ್ಟರಿ ಅಭಿಮಾಂಚ್ ಆಡಿಟೋರಿಯಂನಲ್ಲಿ ತಮಸ್ ನಾಟಕವನ್ನು ಪ್ರಯೋಗಿಸುವ ಸಲುವಾಗಿ ತಾಲೀಮು ನಡೆಸಿತ್ತು. ಒಂದೂವರೆ ತಿಂಗಳ ಅಭ್ಯಾಸ, ರಿಹರ್ಸಲ್ ಮತ್ತು ಇತ್ಯಾದಿ ನಂತರ, ಪ್ರದರ್ಶನಕ್ಕೆ ಎರಡು ದಿನಗಳ ಮೊದಲು ಅನಿರ್ದಿಷ್ಟವಾಗಿ ಮುಂದೂಡಿರುವುದಾಗಿ NSD ಘೋಷಿಸಿದೆ.
“ಅನಿವಾರ್ಯ ಸಂದರ್ಭಗಳಿಂದ” ಕಾರ್ಯಕ್ರಮವನ್ನು ಮುಂದೂಡುತ್ತಿರುವುದಾಗಿ ಎನ್ಎಸ್ಡಿ ಹೇಳಿದ್ದರೂ, ಇದಕ್ಕೆ ಮುಂಚಿನ ದಿನಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (ಆರ್ಎಸ್ಎಸ್) ಇದರೊಂದಿಗೆ ಸಂಬಂಧ ಇರುವುದು ಗೊತ್ತಾಗಿದೆ. ಸಾಮಾಜಿಕ ಜಾಲತಾಣದ ಕೆಲವು ಖಾತೆಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ತಮಸ್ ರಂಗಪ್ರಯೋಗದ ವಿರುದ್ಧ ಪ್ರಚಾರ ಮಾಡಲಾಯಿತು. NSD ತಮಸ್ ನಾಟಕವನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಿರುವ ಕ್ರಮವನನ್ನು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಲಾಯಿತು.
ಬಿಜೆಪಿಯ ಮಾಜಿ ರಾಜ್ಯಸಭಾ ಸದಸ್ಯ ಬಲ್ಬೀರ್ ಪುಂಜ್ ಅವರ ಚಾಟ್ ಗುಂಪಿನ ಸಂದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಆರಂಭಿಸಲಾಯಿತು. ಸಂದೇಶದಲ್ಲಿ, ಅವರು ಶ್ರೀ ಸಾಹ್ನಿ ಅವರನ್ನು “ಎಡಪಂಥೀಯ” ಎಂದು ಕರೆದರು ಮತ್ತು ಅವರ ಕಾದಂಬರಿ ತಮಸ್, “ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ” ಭಾರತದ ವಿಭಜನೆಯ ಸಮಯದಲ್ಲಿ ಕೋಮು ಹಿಂಸಾಚಾರಕ್ಕೆ ಆರ್ಎಸ್ಎಸ್ ಹೊಣೆಯಾಗಿದೆ, ಅದು “ವಾಸ್ತವವಾಗಿ ತಪ್ಪು” ಎಂದು ಹೇಳಿಕೊಂಡಿದ್ದರು.
ಈ ಸಂದೇಶವನ್ನು ಚಾಟ್ ಗುಂಪುಗಳಲ್ಲಿ ಹೆಚ್ಚುಹೆಚ್ಚು ಬಲಪಂಥೀಯ ಮನಃಸ್ಥಿತಿಯ ಮತ್ತು ಆರ್.ಎಸ್.ಎಸ್. ಬೆಂಬಲಿಗರು ರವಾನಿಸಿದಂತೆ, ಹಲವಾರು ಖಾತೆಗಳು RSS ಅಥವಾ ಅಂಗಸಂಸ್ಥೆಗಳು ಸಕ್ರಿಯವಾಗಿ ಈ ವಿಷಯವನ್ನು ದೊಡ್ಡ ಮಟ್ಟದಲ್ಲಿ ಜಾಲತಾಣಗಳಲ್ಲಿ ಚರ್ಚೆಗೊಡ್ಡಿದವು. ನಂತರ X (Twitter) ನಲ್ಲಿ ಪ್ರತಿಭಟನಾ ಸಂದೇಶಗಳನ್ನು ಪೋಸ್ಟ್ ಮಾಡಲಾಯಿತು.
ಈ ಕುರಿತು ಖಾಸಗಿ ಪತ್ರಿಕೆಗೆ ಪ್ರತಿಕ್ರಿಯೆ ನೀಡಿರುವ ಪುಂಜ್, “ನಾನು ಚಾಟ್ ಗ್ರೂಪ್ನಲ್ಲಿ ಪೋಸ್ಟ್ ಮಾಡಿದ ಸಂದೇಶದಲ್ಲಿ ನಾನು ಹೇಳಲು ಬಯಸಿದ್ದನ್ನು ಹೇಳಿದ್ದೇನೆ. ಈ ವಿಷಯದ ಬಗ್ಗೆ ಬೇರೆ ಏನನ್ನೂ ಹೇಳಲು ನಾನು ಬಯಸುವುದಿಲ್ಲ” ಎಂದಿದ್ದಾರೆ.




