ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ವಿವಿಧ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ

3 years ago

Various charity award ceremony at Kannada Sahitya Parishad

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಅಗಸ್ಟ್ ೩೧ ಗುರುವಾರ ಸಂಜೆ ೫.೦೦ ಗಂಟೆಗೆ ವಿವಿಧ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದೆ.

ಕನ್ನಡ ಚಳವಳಿ ವೀರಸೇನಾನಿ ಮ.ರಾಂಮೂರ್ತಿ ಪ್ರಶಸ್ತಿ, ಕನ್ನಡ ಕಾಯಕ ದತ್ತಿ ಪ್ರಶಸ್ತಿ, ಪದ್ಮಭೂಷಣ ಡಾ. ಬಿ. ಸರೋಜಾದೇವಿ ಸಾಹಿತ್ಯ ಪ್ರಶಸ್ತಿ ಹಾಗೂ ಮನೋಹರಿ ಪಾರ್ಥಸಾರಥಿ ʻಮನುಶ್ರೀʼ ದತ್ತಿ ಪ್ರಶಸ್ತಿ ಪದಾನ ಸಮಾರಭವನ್ನು ಹಮ್ಮಿಕೊಳ್ಳಲಾಗಿದೆ.

ಬೇಲಿಮಠ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ಶ್ರೀ ಶ್ರೀ ಶಿವರುದ್ರ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯಸಾನ್ನಿಧ್ಯವಹಿಸಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಖ್ಯಾತ ವಿಮರ್ಶಕ, ಬಿ.ಎಂ.ಶ್ರೀ ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ. ಪಿ.ಬಿ. ನಾರಾಯಣ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಖ್ಯಾತ ಲೇಖಕಿ, ಅನುವಾದಕರಾದ ಡಾ. ವನಮಾಲಾ ವಿಶ್ವನಾಥ ಹಾಗೂ ದತ್ತಿ ದಾನಿಗಳಾದ ಪದ್ಮಭೂಷಣ ಡಾ. ಬಿ. ಸರೋಜಾದೇವಿ, ಶ್ರೀ ವ.ಚ.ಚನ್ನೇಗೌಡ, ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

೨೦೨೩ನೆಯ ಸಾಲಿನ ʻಕನ್ನಡ ಚಳವಳಿ ವೀರಸೇನಾನಿ ಮ. ರಾಮಮೂರ್ತಿ ಪ್ರಶಸ್ತಿʼಯನ್ನು ಕನ್ನಡ ಹೋರಾಟಗಾರರು ಹಾಗೂ ಕಲಾವಿದರೂ ಆಗಿರುವ ಬೆಂಗಳೂರಿನ ಜಿ. ಕೆ. ಸತ್ಯ ಅವರಿಗೆ, ೨೦೨೩ನೆಯ ಸಾಲಿನ ಕನ್ನಡ ಕಾಯಕ ಪ್ರಶಸ್ತಿಯನ್ನು ಕನ್ನಡ ಪರ ಹೋರಾಟಗಾರ ಅಥಣಿಯ ಶ್ರೀ ಪ್ರಭು ಚೆನ್ನಬಸವ ಸ್ವಾಮೀಜಿ, ಪರಿಸರ ಹೋರಾಟಗಾರ, ಕೃಷಿ ಬರಹಗಾರ ಉತ್ತರ ಕನ್ನಡ ಜಿಲ್ಲೆಯ ಶ್ರೀ ಶಿವಾನಂದ ಕಳವೆ ಮತ್ತು ರಂಗಭೂಮಿ ಕಲಾವಿದೆ ಹೆಲನ್ ಮೈಸೂರು ಅವರಿಗೆ, ೨೦೨೨ ಹಾಗೂ ೨೦೨೩ನೆಯ ಸಾಲಿನ ಪದ್ಮಭೂಷಣ ಡಾ. ಬಿ. ಸರೋಜಾದೇವಿ ಸಾಹಿತ್ಯ ಪ್ರಶಸ್ತಿಯನ್ನು ಲೇಖಕಿಯರಾದ ಮೈಸೂರಿನ ಡಾ. ಎ. ಪುಷ್ಪ ಅಯ್ಯಂಗಾರ್ ಮತ್ತು ವಿಜಯಪುರದ ಶ್ರೀಮತಿ ಜಯಲಕ್ಷ್ಮಿ ಪಾಟೀಲ್ ಅವರಿಗೆ, ೨೦೨೨ ಹಾಗೂ ೨೦೨೩ನೆಯ ಸಾಲಿನ ʻಮನೋಹರಿ ಪಾರ್ಥಸಾರಥಿ ʻಮನುಶ್ರೀʼ ಪ್ರಶಸ್ತಿʼಯನ್ನು ಲೇಖಕಿಯರಾದ ಮಂಡ್ಯದ ಗುಣಸಾಗರಿ ನಾಗರಾಜ ಮತ್ತು ಚಿಕ್ಕಮಗಳೂರಿನ ಡಿ. ಎನ್. ಗೀತಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಣೆಯಲ್ಲಿ ತಿಳಿಸಿದೆ. 

Leave a Reply