ಬೆಂಗಳೂರು: ಮಗಳನ್ನು ಮದುವೆ ಮಾಡಿಕೊಡಲು ನಿರಾಕರಿಸಿದ್ದಕ್ಕೆ ಕೋಪಗೊಂಡ ಯುವಕನೊಬ್ಬ ತಾನು ಇಷ್ಟಪಟ್ಟ ಯುವತಿಯ ತಾಯಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಅಮಾನುಷ ಘಟನೆ ಬಸವೇಶ್ವರ ನಗರದ ಭೋವಿ ಕಾಲೋನಿಯಲ್ಲಿ ನಡೆದಿದೆ.
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
- ಜನಸಹಭಾಗಿತ್ವದೊಂದಿಗೆ ಸ್ವಚ್ಛತಾ ಅಭಿಯಾನಕ್ಕೆ ಸಜ್ಜು
- UPI ಡಿಜಿಟಲ್ ಮೇಲಿನ ಹೆಚ್ಚುವರಿ ಶುಲ್ಕ ಪ್ರಸ್ತಾವನೆ ಹಿಂಪಡೆಯಬೇಕು
- ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಪೌರ ಕಾರ್ಮಿಕರಿಗೆ ಸನ್ಮಾನ
ಬೆಂಕಿಯಿಂದ ತೀವ್ರ ಸುಟ್ಟಗಾಯಗೊಂಡಿರುವ ಮಹಿಳೆಯನ್ನು ಗೀತಾ ಎಂದು ಗುರುತಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.
ವಿಚಾರಣೆಯ ಸಂದರ್ಭದಲ್ಲಿ ಆಕೆ ಕೃತ್ಯ ನಡೆಸಿದ ಆರೋಪಿಯ ಹೆಸರು ಮುತ್ತು ಎಂದು ತಿಳಿಸಿದ್ದು, ಸಂಪೂರ್ಣ ವೃತ್ತಾಂತ ವಿವರಿಸಿದ್ದಾರೆ. ಬಸವೇಶ್ವರ ನಗರದ ಸಾಣೆಗುರುವನಹಳ್ಳಿಯಲ್ಲಿ ವಾಸವಾಗಿದ್ದ ಗೀತಾ ಪ್ರಾವಿಷನ್ ಸ್ಟೋರ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು.
ಆರೋಪಿ ಮುತ್ತು ಸಹ ಅದೇ ಏರಿಯಾದಲ್ಲಿ ಟೀ ಸ್ಟಾಲ್ ಇಟ್ಟುಕೊಂಡಿದ್ದರು. ವ್ಯಾಪಾರಿಗಳಾಗಿದ್ದರಿಂದ ಮುತ್ತು ಮತ್ತು ಗೀತಾ ನಡುವೆ ಪರಿಚಯವಾಗಿತ್ತು.
ಒಬ್ಬರಿಗೊಬ್ಬರು ಪರಿಚಯವಾದ ಬಳಿಕ, ಪರಸ್ಪರರು ತಮ್ಮ ಕುಟುಂಬದ ವಿವರಗಳನ್ನು ಹಂಚಿಕೊಂಡಿದ್ದಾರೆ.
ಮುತ್ತು ತನಗೆ ಯಾರು ಇಲ್ಲ ಎಂದು ಹೇಳಿ ಗೀತಾ ಅವರ ಜೊತೆಗೆ ವಾಸ ಮಾಡಲು ಆರಂಭಿಸಿದ್ದಾನೆ. ಹೀಗಾಗಿ ಗೀತಾ ಮತ್ತು ಆಕೆಯ 19 ವರ್ಷದ ಮಗಳು ಹಾಗೂ ಮುತ್ತು ಒಂದೇ ಮನೆಯಲ್ಲಿ ವಾಸವಿದ್ದರು ಎಂದು ತಿಳಿದುಬಂದಿದೆ.
ಈ ವೇಳೆ ತಮ್ಮ ಮಗಳನ್ನು ನನಗೆ ಮದುವೆ ಮಾಡಿಕೊಡುವಂತೆ ಮುತ್ತು ಗೀತಾಳ ಮೇಲೆ ಒತ್ತಡ ಹೇರುತ್ತಿದ್ದ ಎಂದು ಆರೋಪಿಸಲಾಗಿದೆ. ಆದರೆ ಗೀತಾ ಇದಕ್ಕೆ ಒಪ್ಪಿಲ್ಲ ಆಕೆ ತನ್ನ ಮದುವೆಗೆ ಒಪ್ಪದಿದ್ದಾಗ ಕೋಪಗೊಂಡ ಮುತ್ತು, ಮಧ್ಯರಾತ್ರಿ 1 ಗಂಟೆಗೆ ಗೀತಾ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಗಿದ್ದಾನೆ. ಬೆಂಕಿ ಹೊತ್ತಿಕೊಂಡ ಗೀತಾ ಜೋರಾಗಿ ಕಿರುಚಿಕೊಂಡು ಹೊರಬಂದಿದ್ದಾರೆ ಇದನ್ನು ಗಮನಿಸಿದ ನೆರೆ ಹೊರೆಯವರು ಬೆಂಕಿ ನಂದಿಸಿ, ಕೂಡಲೇ ಗೀತಾ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗೀತಾ ಅವರ ದೇಹ ಶೇ.50ರಷ್ಟು ಬೆಂಕಿಗಾಹುತಿಯಾಗಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಈ ಸಂಬಂಧ ಬಸವೇಶ್ವರ ನಗರ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿ ಆರೋಪಿ ಬಂಧನಕ್ಕೆ ಹುಡುಕಾಟ ನಡೆಸಲಾಗುತ್ತಿದ್ದಾರೆ.




