ಕರ್ನಾಟಕದ ಕಮಲದ ಕಲಿಗಳು ಪ್ರತಿಯೊಂದು ದಿನವು, ಪ್ರತಿಯೊಂದು ಗಳಿಗೆಯೂ, ಮಾತನಾಡಿದರೆ ಅದು ಸಮಾಜದ ನೆಮ್ಮದಿಯನ್ನು ಹಾಳು ಮಾಡುವ ಮತ್ತು ಸಮಾಜದ ಸಾಮರಸ್ಯವನ್ನು ಕೆಡಿಸುವ ನಿಟ್ಟಿನಲ್ಲಿಯೇ ಮಾತುಗಳಿರುತ್ತದೆ. ಇವರ ಮಾತುಗಳಲ್ಲಿ ಸಾಮರಸ್ಯವೂ ಇರುವುದಿಲ್ಲ. ಸಹಬಾಳ್ವೆಯ ಸಂದೇಶಗಳು ಇರುವುದಿಲ್ಲ. ಪ್ರತಿಯೊಂದು ದಿನವು ಧರ್ಮ ಮತ್ತು ಇತರ ವಿಚಾರಗಳಿಗಾಗಿ ಮಾತನಾಡುವ ಇವರುಗಳಿಗೆ ಕರ್ನಾಟಕ ರಾಜ್ಯದ ವಿಚಾರದಲ್ಲಿ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿಯ ಮಾಹಿತಿಯು ಇಲ್ಲವೇನೋ ಎನ್ನುವ ರೀತಿಯಲ್ಲಿ ಕೆಲಸಕ್ಕೆ ಬಾರದ ವಿಚಾರಗಳನ್ನು ಪ್ರಸ್ತಾಪಿಸುತ್ತ ಆರ್ಭಟಿಸುತ್ತಿದ್ದಾರೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಉತ್ತರ ಭಾರತದ ಬಹುತೇಕ ರಾಜ್ಯಗಳು ಉತ್ತರ ಪ್ರದೇಶವಿರಬಹುದು, ಬಿಹಾರವಿರಬಹುದು, ಅಸ್ಸಾಂ ಮತ್ತು ಈಶಾನ್ಯ ಭಾರತದ ರಾಜ್ಯಗಳು ಎಲ್ಲವೂ ಸಹ ಕಳೆದ ಹತ್ತಾರು ವರ್ಷಗಳಿಂದ ಬಿಜೆಪಿಯ ಆಡಳಿತದಲ್ಲೇ ಇದೆ. ಆದರೆ ಕರ್ನಾಟಕ ರಾಜ್ಯಕ್ಕೆ ಬದುಕನ್ನು ಕಟ್ಟಿಕೊಳ್ಳುವ ಸಲುವಾಗಿ ಪ್ರತಿದಿನವೂ ಸಾವಿರಾರು ಮಂದಿ ಆ ರಾಜ್ಯಗಳಿಂದ ವಲಸೆ ಬರುತ್ತಿದ್ದಾರೆ. ನಿಜಕ್ಕೂ ಆ ರಾಜ್ಯ ಅಭಿವೃದ್ಧಿಯಾಗಿದ್ದರೆ ಅಲ್ಲಿ ಬದುಕು ಸುಂದರವಾಗಿದ್ದರೆ ಯುವ ಜನತೆ ಹೊಟ್ಟೆಪಾಡಿಗಾಗಿ ಕರ್ನಾಟಕದ ಕಡೆಗೆ ವಿಶೇಷವಾಗಿ ರಾಜ್ಯದ ಪ್ರಮುಖ ನಗರಗಳ ಕಡೆಗೆ ವಲಸೆ ಬರುವ ಅವಶ್ಯಕತೆಯಾದರು ಏನಿರುತ್ತಿತ್ತು?
ಇದರಿಂದ ಸ್ಪಷ್ಟವಾಗಿವೆ ಬಿಜೆಪಿ ಅಧಿಕಾರದಲ್ಲಿರುವ ಉತ್ತರ ಭಾರತದ ರಾಜ್ಯಗಳಲ್ಲಿ ಉದ್ಯೋಗವನ್ನು ಕೊಡುವುದಕ್ಕಿಂತ, ಶಿಕ್ಷಣವನ್ನು ಕೊಡುವುದಕ್ಕಿಂತ, ಧಾರ್ಮಿಕ ಮತ್ತು ಪ್ರಚೋದನಾತ್ಮಕ ವಿಚಾರಗಳಿಗೆ ಹೆಚ್ಚು ಮಹತ್ವವನ್ನು ಕೊಡುತ್ತಾ ಸರ್ಕಾರ ಕಾಲ ಹರಣ ಮಾಡಿರುವುದರಿಂದ ಉದ್ಯೋಗಗಳು ಸೃಷ್ಟಿಯಾಗದೆ ಜೀವನ ನಿರ್ವಹಣೆ ಕಷ್ಟವಾಗಿರುವುದರಿಂದ ಕರ್ನಾಟಕದ ಕಡೆಗೆ ಸಣ್ಣ, ಸಣ್ಣ ವಯಸ್ಸಿನ ಹುಡುಗರು, ಅಪ್ಪ ಅಮ್ಮನನ್ನು ಬಿಟ್ಟು ಮನೆಯನ್ನ ತೊರೆದು ವಿದ್ಯಾಭ್ಯಾಸ ಬಿಟ್ಟು ಹೋಟೆಲ್ ಗಳಲ್ಲಿ, ಬಾರ್ ಗಳಲ್ಲಿ, ಅಂಗಡಿಗಳಲ್ಲಿ, ಮಾಲ್ಗಳು ಇಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ ಎನ್ನುವುದನ್ನು ನಾವು ಗಮನಿಸಿದಾಗ ಆ ರಾಜ್ಯಗಳ ಸರ್ಕಾರ ಎಷ್ಟರಮಟ್ಟಿಗೆ ಅಭಿವೃದ್ಧಿಯ ಚಿಂತನೆಯನ್ನು ಮಾಡಿದೆ ಎಂದು ನಾವು ಅಂದಾಜು ಮಾಡಬಹುದು.
ಇದರ ನಡುವೆಯೂ ಸಹ ಕಳೆದ ಹತ್ತು ವರ್ಷದ ಅವಧಿಯಲ್ಲಿ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಬಿಜೆಪಿ ಪಕ್ಷ ಆಡಳಿತದಲ್ಲಿರುವ ರಾಜ್ಯಗಳಿಗೆ ಅನ್ಯ ರಾಜ್ಯಗಳಿಂದ ಸಂಗ್ರಹವಾಗುವ ತೆರಿಗೆಯ ಹಣವನ್ನು ಹೆಚ್ಚಿನ ಪಾಲು ಕೊಡುತ್ತಲೇ ಬಂದಿದ್ದಾರೆ. ಜಿ ಎಸ್ ಟಿ ಹಣದಲ್ಲಿ ಹೆಚ್ಚಿನ ಪಾಲು ಉತ್ತರ ಪ್ರದೇಶ ಬಿಹಾರ ಮುಂತಾದ ರಾಜ್ಯಗಳಿಗೆ ಹೋಗುತ್ತಿವೆ. ಆದರೂ, ಅವರು ಭಾರತ ದೇಶದ ಪ್ರಗತಿಗೆ ಯಾವುದೇ ರೀತಿಯ ಕೊಡುಗೆಯನ್ನು ಕೊಡುತ್ತಿಲ್ಲ.
ಕರ್ನಾಟಕ ರಾಜ್ಯ ಭಾರತ ದೇಶದಲ್ಲಿ ಕೇಂದ್ರಕ್ಕೆ ತೆರಿಗೆಯನ್ನು ಪಾವತಿಸುತ್ತಿರುವ ಅತಿಹೆಚ್ಚಿನ ಮೊತ್ತದ ಎರಡನೇ ರಾಜ್ಯವಾಗಿದ್ದರೂ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಸರಿಯಾದಂತಹ ಪಾಲನ್ನು ಕೊಡುವಲ್ಲಿ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದೆ. ಭಾರತ ದೇಶದ ಜಿಡಿಪಿ, ಪ್ರಗತಿಯಲ್ಲಿ ಕರ್ನಾಟಕದ ಪಾಲು ಅತಿ ಹೆಚ್ಚು ಇದೆ ಎನ್ನುವುದು ಅಂಕಿ ಅಂಶಗಳು ಸಾಬೀತು ಪಡಿಸುತ್ತಿದ್ದರು. ಕರ್ನಾಟಕ ರಾಜ್ಯಕ್ಕೆ ನ್ಯಾಯಯುತವಾಗಿ ಕೊಡಬೇಕಾಗಿರುವ ತೆರಿಗೆಯ ಪಾಲನ್ನು ಕೊಡುತ್ತಿಲ್ಲ. ಇದಕ್ಕೆ ಉದಾಹರಣೆಯಾಗಿ ಈಗ ಬಿಡುಗಡೆ ಮಾಡಿರುವ ತೆರಿಗೆಯ ಪಾಲಿನಲ್ಲಿ ದಕ್ಷಿಣ ಭಾರತದ ರಾಜ್ಯಗಳಿಗೆ ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಕರ್ನಾಟಕಕ್ಕೆ ಕೇವಲ ಎರಡರಿಂದ ಮೂರು ಪರ್ಸೆಂಟ್ ಹಣವನ್ನು ನೀಡಿರುತ್ತಾರೆ.
ಇದೇ ಸಂದರ್ಭದಲ್ಲಿ ಉತ್ತರ ಪ್ರದೇಶಕ್ಕೆ ಅತಿ ಹೆಚ್ಚಿನ ಪಾಲು ನೀಡಿರುತ್ತಾರೆ. ಉತ್ತರ ಪ್ರದೇಶವು ಸಹ ಭಾರತದ ಅವಿಭಾಜ್ಯ ಅಂಗ ಅವರಿಗೆ ಕೊಟ್ಟಿರುವುದಕ್ಕೆ ನಮಗೇನು ದುಃಖವಿಲ್ಲ. ಆದರೆ, ನಮಗೆ ಕೊಡಬೇಕಾದಂತಹ ಪಾಲನ್ನು ಕೊಡುವ ಸಂದರ್ಭದಲ್ಲಿ ತಾರತಮ್ಯ ಏಕೆ ಎಂಬುದೇ ನಮ್ಮ ಪ್ರಶ್ನೆಯಾಗಿದೆ .ಕಮಲದ ಕಲಿಗಳು ಇಂತಹ ವಿಚಾರದಲ್ಲಿ ಬಾಯಿ ಬಿಟ್ಟು ಪ್ರಧಾನಮಂತ್ರಿಗಳ ಮುಂದೆ ನಿಂತು ಕೇಳುವಂತ ಎದೆಗಾರಿಕೆಯನ್ನು ಬೆಳೆಸಿಕೊಳ್ಳದೆ ಮೈಕುಗಳು ಕಂಡ ತಕ್ಷಣ ಅಬ್ಬರಿಸುತ್ತ ರಾಜ್ಯ ಸರ್ಕಾರದ ವಿರುದ್ಧ ಮಾತನಾಡುವುದರಲ್ಲಿಯೇ ಸಮಯವನ್ನು ಕಳೆಯುತ್ತಿದ್ದೀರಿ.
ಲೋಕಸಭಾ ಸದಸ್ಯರನ್ನ ಕಳುಹಿಸಿರುವುದು ರಾಜ್ಯದ ಹಿತವನ್ನು ಕಾಪಾಡಲಿ ಎಂದು ಇನ್ನು ನಮ್ಮ ಕೇಂದ್ರದ ಸಚಿವರಾಗಿರುವ ಪ್ರಹಲ್ಲಾದ ಜೋಶಿರವರು ಕರ್ನಾಟಕದ ಹಿತದ ಬಗ್ಗೆ ಮಾತನಾಡಿರುವುದಕ್ಕಿಂತ ಕರ್ನಾಟಕದ ರಾಜ್ಯ ಸರ್ಕಾರವನ್ನು ಟೀಕಿಸುವುದರಲ್ಲಿಯೇ ತಮ್ಮ ಶಕ್ತಿಯನ್ನು ವಿಧಿಯೋಗಿಸುತ್ತಿದ್ದಾರೆ.
ದುರಂತವೆಂದರೆ ಕರ್ನಾಟಕಕ್ಕೆ ಅನುಕೂಲ ಮಾಡಿಕೊಡುವ ಸಚಿವರುಗಳು ಕೇಂದ್ರ ಕೇಂದ್ರ ಸರಕಾರದಲ್ಲಿ ರಾಜ್ಯದ ಪಾಲಿಗೆ ಯಾರು ಇಲ್ಲದಿರುವುದು ದುಃಖದ ಸಂಗತಿಯಾಗಿದೆ. ಕಡೆಯ ಪಕ್ಷ ಹಿಂದೆ ದಿವಂಗತ ಅನಂತ್ ಕುಮಾರ್ ರವರು ರಾಜ್ಯದ ವಿಚಾರದಲ್ಲಿ ಬಹಳ ಆಸಕ್ತಿಯಿಂದ ಕೆಲಸವನ್ನು ಮಾಡುತ್ತಿದ್ದರು. ಅಂತಹ ವ್ಯಕ್ತಿಗಳು ಈ ಸಚಿವ ಸಂಪುಟದಲ್ಲಿ ಕರ್ನಾಟಕದ ಪಾಲಿಗಂತೂ ಯಾರೂ ಇಲ್ಲ.
ಕೇವಲ ರಾಜಕೀಯವಾಗಿ ಮಾತನಾಡುವ ಸಲುವಾಗಿಯೇ ಪತ್ರಿಕಾಗೋಷ್ಠಿಗಳನ್ನ ಮಾಡುವ ಸಲುವಾಗಿಯೇ ಪ್ರತಿ ವಾರ ಒಂದೆರಡು ಬಾರಿ ಬಂದು ತಮ್ಮ ಬಾಯಿ ಚಪಲವನ್ನು ತಿಳಿಸಿಕೊಂಡು, ತಾವು ದೊಡ್ಡ ನಾಯಕರು ಎಂಬ ರೀತಿಯಲ್ಲಿ ಬಿಂಬಿಸಿಕೊಂಡು ಹೋಗುವದರಲ್ಲಿಯೇ ಹೆಚ್ಚು ಸಮಯವನ್ನು ಕಳೆಯುತ್ತಿದ್ದಾರೆ.
ಕರ್ನಾಟಕದ ಜನರಿಗೆ ಕೇಂದ್ರದಿಂದ ಕೊಡಬೇಕಾಗಿರುವ ತೆರಿಗೆಯ ಪಾಲನ್ನು ಕುಡಿಸುವ ಸಲುವಾಗಿ ಒಂದು ಬಾರಿ ಬಿಜೆಪಿಯ ರಾಜ್ಯದ ಮಂತ್ರಿಗಳು ಮತ್ತು ಲೋಕಸಭಾ ರಾಜ್ಯಸಭಾ ಸದಸ್ಯರು ಪ್ರಧಾನಿ ಮತ್ತು ಗೃಹ ಸಚಿವರ ಮುಂದೆ ನಿಂತು ಮಾತನಾಡಿದರೆ ಆಗ ನಿಮ್ಮ ದಿಟ್ಟತನವನ್ನು ಮೆಚ್ಚಿ ಅಭಿನಂದಿಸಬಹುದು.
– ಕೆ ಎಸ್ ನಾಗರಾಜ್, ಬೆಂಗಳೂರು




