ಇವನು ಜಾಣ ಅಂದುಕೊಂಡದ್ದು ನನ್ನ ಭ್ರಮೆ. ಇವನು ಮಹಾನ್ ಅವಿವೇಕಿ ಮತ್ತು ಮೂರ್ಖ. ಅರೆಬರೆ ಜ್ಞಾನವೂ ಇದ್ದಂತಿಲ್ಲ. ತಮಿಳಿಗಿಂತ ಕನ್ನಡವೆ ಪುರಾತನ ಭಾಷೆ. (ಪ್ರೊ. ಎಸ್. ಶೆಟ್ಟರ್ ಸಂಶೋಧನೆ) ತಮಿಳರಂತೆ ಬಾಯಿ ಬಡಿದುಕೊಂಡು, ಕಾಡಿ ಬೇಡಿ ನಾವೇನನ್ನು ಪಡೆದಿಲ್ಲ. ಶಾಸ್ತ್ರೀಯ ಭಾಷೆಗೆ ಮೊದಲು ಗೌರವ ಬಂದಿದ್ದರೆ ನಿಮ್ಮ ಬಾಯಿಬಡುಕತನ ಕಾರಣ. ಕನ್ನಡಕ್ಕು ನಾವು ಪಡೆದಾಗ ತಮಿಳಿನಷ್ಟೇ ಸಮಾನ ಗೌರವ (ನಮಗೂ) ಸಂದಿದೆ.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ಕನ್ನಡ ತನ್ನ ಸತ್ವ ಹಾಗೂ ಭಾಷೆಯ ಶಕ್ತತೆಯಿಂದ ವಿಶ್ವದ ಶ್ರೇಷ್ಠವಾದ “ಬೂಕರ್” ಪ್ರಶಸ್ತಿಯನ್ನು ದಕ್ಕಿಸಿಕೊಂಡಿದೆ. ನಾವೆಲ್ಲ “ಪುಟಗೋಸಿ ತಮಿಳು” ಅಂದರೆ ನಿನಗೆ ಸಿಟ್ಟು ಬರುತ್ತಾ? ಹಾಗೆ ನಿನ್ನ ಭಾಷೆಯಿಂದ ಕನ್ನಡವಾ? ಕನ್ನಡಿಗರು ಕೋಟ್ಯಾಂತರ ತಮಿಳರನ್ನು ಅವರ ಭಾಷೆ ಕಲಿತು ಸಾಕುತ್ತಿದ್ದಾರೆ. ನೆನಪಿರಲಿ.
ನೀನು ಕನ್ನಡ ಬಲ್ಲವನು. ಕನ್ನಡದಲ್ಲಿ ನೀನು, ನಿಮ್ಮ ಅಣ್ಣ, ನಿನ್ನ ಅಣ್ಣನ ಮಗಳು ಅಭಿನಯಿಸಿದ್ದೀರಿ. ಎಲ್ಲರಿಗೂ ಕನ್ನಡ ಗೊತ್ತು. ಹೀಗಿರುವಾಗ ಈ ಭಾಷೆಯ ಇತಿಹಾಸ, ಪರಂಪರೆ ತಿಳಿದುಕೊ. ಕನ್ನಡದ ಮನೆಮಾತಾದ ಮಂಕುತಿಮ್ಮನಕಗ್ಗದ ಕವಿ ಡಿವಿಜಿ ಅವರ ಪುತ್ರ ಪ್ರೊ. ಬಿ.ಜಿ.ಎಲ್.ಸ್ವಾಮಿ ಬರೆದ “ತಮಿಳು ತಲೆಗಳ ನಡುವೆ” ಕೃತಿ ಅಗತ್ಯ ಓದಲೇಬೇಕು. ನಿಮ್ಮ ಸುಳ್ಳು ಪ್ರಚಾರದ ಪುರಾತನ ಕಾವ್ಯ “ಶಿಲಪ್ಪದಿಕಾರಂ” ಬಗ್ಗೆ ಪೆರಿಯಾರ್ ಅಂಥವರು ಎಂಥ ಕಟು ಮಾತಾಡಿದ್ದಾರೆ ಅನ್ನೋದನ್ನ ಅರಿತುಕೋ. ನಾನು ಬೇಕಾದರೆ ನಿನಗೆ ಅಚ್ಚಕನ್ನಡದಲ್ಲಿ ಕನ್ನಡದ ಪುರಾತನದ ಹಿರಿಮೆಗರಿಮೆ ಬಗ್ಗೆ ಉಪನ್ಯಾಸ ಕೊಡಬಲ್ಲೆ. ಅಗತ್ಯ ಇದ್ದರೆ ನಿನಗೆ ಅರಿವು ಮೂಡಿಸುವೆ. ದಡ್ಡ, ಮೊದಲು ಜ್ಞಾನಿಯಾಗು.
ಈಗ ನಿನ್ನ ಹೇಳಿಕೆ ವಾಪಾಸು ಪಡೆ. ಕನ್ನಡಿಗರ ಕ್ಷಮೆ ಕೇಳು. ನಟ ಶಿವರಾಜಕುಮಾರನಿಗೆ ಕನ್ನಡದ ಬಗ್ಗೆ ನೀನು ಹಗುರಾಗಿ ಮಾತಾಡಿದಾಗ ಪ್ರತಿರೋಧ ಒಡ್ಡಲು ಸಾಧ್ಯವಾಗದೆ ಹೋಗಿರಬಹುದು. ಆತನು ತಮಿಳು ಹೈಲು ಬಿಟ್ಟು ಅವರ ತಂದೆಯಂತೆ ಕನ್ನಡದ ಪರ ನಿಲ್ಲಲಿ. ಪುಟಗೋಸಿ ತಮಿಳು ಸಿನಿಮಾದಲ್ಲಿ ನಟಿಸೋ ಹುಚ್ಚು ಬಿಡಲಿ. ಕಮಲಹಾಸನ್ ಕನ್ನಡಿಗರ ಕ್ಷಮೆ ಕೇಳಿದ ನಂತರ ಶಿವಣ್ಣ ತನ್ನ ಒಪ್ಪಂದದ ಬಗ್ಗೆ ಮರುಪರಿಶೀಲನೆ ಮಾಡಲಿ.
– ಆರ್ ಜಿ ಹಳ್ಳಿ ನಾಗರಾಜ, ಹಿರಿಯ ಪತ್ರಕರ್ತರು



