ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಾರ್ವಜನಿಕರಿಗೆ ಉಚಿತವಾಗಿ 1000 ಕೊಡೆ ವಿತರಣೆ

4 years ago

ಕರ್ನಾಟಕದಲ್ಲಿ ಕನ್ನಡಿಗರೆ ಸಾರ್ವಭೌಮರು, ಸಂಪೂರ್ಣ ಆಡಳಿತ ಕನ್ನಡ ಭಾಷೆಯಲ್ಲಿ: ಗೌರವ್ ಗುಪ್ತಾ

ಇತಿಹಾಸ ತಜ್ಞರ ವರದಿಯಂತೆ ಆಳಿವಿನ ಅಂಚಿನಲ್ಲಿರುವ ಕನ್ನಡ ಭಾಷೆ ಉಳಿಸಲು ಆಂದೋಲನವಾಗಬೇಕು-ವಿಶೇಷ ಆಯುಕ್ತರಾದ ದಯಾನಂದ್

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕನ್ನಡ ಸಂಘದ ವತಿಯಿಂದ ಬಿ.ಬಿ.ಎಂ.ಪಿ. ಕೇಂದ್ರ ಕಛೇರಿ ಅವರಣದಲ್ಲಿ ನಗರ ದೇವತೆ ಅಣ್ಣಮ್ಮ ದೇವಿ ಉತ್ಸವ ಮತ್ತು 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

66ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕನ್ನಡ ಚಲನಚಿತ್ರ ಕಲಾವಿದರಿಗೆ ಮತ್ತು ಕನ್ನಡ ಪರ ಹೋರಾಟಗಾರರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಆಯುಕ್ತ ಗೌರವ್ ಗುಪ್ತಾ, ವಿಶೇಷ ಆಯುಕ್ತ ದಯಾನಂದ್, ಬೆಂಗಳೂರು ಮಹಾನಗರ ಪಾಲಿಕೆ ಕನ್ನಡ ಸಂಘದ ಅಧ್ಯಕ್ಷ ಸಂಗೊಳ್ಳಿ ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಅಮೃತ್ ರಾಜ್, ಗಾಯಕಿ ರಮ್ಯ ವಸಿಷ್ಟ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಕನ್ನಡ ಚಿತ್ರರಂಗದ ಸಾಧಕರಾದ ವೈಜನಾಥ್ ಬಿರಾದಾರ್, ಬೆಂಗಳೂರು ನಾಗೇಶ್, ಉಮೇಶ್, ಮೂಗು ಸುರೇಶ್, ಮೈಸೂರು ರಮಾನಂದ್, ಬ್ಯಾಂಕ್ ಜನಾರ್ಧನ್, ಡಿಂಗ್ರಿ ನಾಗರಾಜ್, ರೇಖಾದಾಸ್, ಮೋಹನ್ ಜುನೇಜ, ಶೋಭಾ ರಾಘವೇಂದ್ರ, ಮಂದೀಪ್ ರಾಯ್ ಹಾಗೂ ಕನ್ನಡ ಪರ ಹೋರಾಟಗಾರರಾದ ತಾ.ನಂ.ಕುಮಾರಸ್ವಾಮಿ, ಡಾ.ಜಿ.ಮುನಿರಾಜು, ಸದಾಶಿವಯ್ಯ ಜರಗನಹಳ್ಳಿ ಮತ್ತು ಶ್ರೀಮತಿ ಡಾ.ಎನ್.ವಿಜಯಲಕ್ಷ್ಮೀ, ಕಡಬಗೆರೆ ಮುನಿರಾಜು, ಶಾಂತಲಾ ಸುರೇಶ್, ಎಂ.ನಂಜಪ್ಪ, ಡಾ.ಲೋಕೇಶ್ ಹೆಗ್ಡೆ ಹಾಗೂ ವಾಟಾಳ್ ವೆಂಕಟೇಶ್, ಎಂ.ಪ್ರಕಾಶಮೂರ್ತಿ ಮತ್ತು ಕೊರೋನಾ ವಾರಿಯರ್ಸ್ ಗಳಾದ ವೈದ್ಯರು, ದಾದಿಯರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಗೌರವ್ ಗುಪ್ತಾ ಮಾತನಾಡಿ, ಕರ್ನಾಟಕದಲ್ಲಿ ಕನ್ನಡ ಭಾಷೆ ಸಾರ್ವಭೌಮ. ನಮ್ಮ ಆಡಳಿತ ವ್ಯವಹಾರ ಸಂಪೂರ್ಣ ಕನ್ನಡದಲ್ಲಿ ನಡೆಯುತ್ತದೆ. ಕನ್ನಡ ಭಾಷೆ ಉಳಿಯಬೇಕಾದರೆ ಪ್ರತಿಯೊಬ್ಬರು ಕನ್ನಡ ಬಳಸಿ, ಬೆಳಸಬೇಕು. ಕನ್ನಡ ಭಾಷೆಗೆ 2500ವರ್ಷಗಳ ಇತಿಹಾಸವಿದೆ. ನಮ್ಮ ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿ ಲಭಿಸಿವೆ. ಇದರಿಂದ ತಿಳಿಯುತ್ತದೆ ಕನ್ನಡ ಭಾಷೆ ಸರಳ, ಸುಂದರ, ಸಂಸ್ಕೃತಿಯಳ್ಳ  ಭಾಷೆ ಎಂದು. ಎಲ್ಲರು ಕನ್ನಡ ಬಳಸಿ, ಬೆಳಸಿ ಎಂದು ಹೇಳಿದರು.

ದಯಾನಂದ್ ಮಾತನಾಡಿ, ಇತಿಹಾಸ ತಜ್ಞರು ನೀಡಿರುವ ವರದಿ ಕನ್ನಡ ಭಾಷೆ ಅಳಿವಿನ ಅಂಚಿನಲ್ಲಿದೆ ಎಂಬ ವರದಿ ಇದೆ. ಕನ್ನಡ ಭಾಷೆ ಉಳಿಸಲು, ಬೆಳೆಸಲು ಪ್ರತಿಯೊಬ್ಬರಿಂದ ಆಂದೋಲನವಾಗಬೇಕು. ಕನ್ನಡವೆ ನಮ್ಮ ಉಸಿರು, ಕನ್ನಡ ಭಾಷೆ ಉಳಿಯಲು ಲಕ್ಷಾಂತರ ಜನರ ಕೊಡುಗೆ ಇದೆ. ಕನ್ನಡ ಭಾಷೆ ಉಳಿಯಲು ಪ್ರತಿನಿತ್ಯ ಆಡಳಿತದಲ್ಲಿ ವ್ಯವಹರಿಸಬೇಕು. ಕರ್ನಾಟಕ ರಾಜ್ಯ ಗತವೈಭವದ ಇತಿಹಾಸವಿದೆ ಎಂದರು.

ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಾಡಪ್ರಭು ಕೆಂಪೇಗೌಡರ ಮತ್ತು ಒನಕೆ ಓಬವ್ವರವರ ಜೀವನ ಚರಿತ್ರೆ ನೃತ್ಯರೂಪಕ ಪ್ರದರ್ಶನ ಮತ್ತು ಮಳೆಯಿಂದ ರಕ್ಷಣೆ ಪಡೆಯಲು 1000 ಕೊಡೆ ವಿತರಿಸಲಾಯಿತು.

Leave a Reply