ಶಿಕ್ಷಣ ಇಲಾಖೆ ಸರ್ಕಾರಿ ಪ್ರಾಥಮಿಕ ಹಿರಿಯ ಪ್ರೌಢ ಶಾಲೆಗಳು ಅದೇ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಹಳೇ ವಿದ್ಯಾರ್ಥಿಗಳ ವಾಟ್ಸಪ್ ಮಾಡಲು ಸೂಚನೆ ನೀಡಿದೆ. ಶಾಲೆಗಳು ಕಾರ್ಯಪ್ರವೃವಾಗಿವೆ. ಇಲ್ಲಿ ಗುರಿ – ಉದ್ದೇಶ ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗಾಗಿ ಹಳೇ ವಿದ್ಯಾರ್ಥಿಗಳು ಕೈ ಜೋಡಿಸಬೇಕೆಂಬ ಗುರಿ ಆಗಿರುತ್ತದೆ.
- ಸತತ 5 ದಿನ ಬ್ಯಾಂಕ್ಗಳಿಗೆ ಬೀಗ!: ಏನಿರುತ್ತದೆ, ಏನಿಲ್ಲ? ಕಂಪ್ಲೀಟ್ ಡೀಟೈಲ್ಸ್!
- 814 ಉಪನ್ಯಾಸಕರ ನೇಮಕಾತಿಯಲ್ಲಿ ಉರ್ದುಗೆ ಸ್ಥಾನ ಎಲ್ಲಿದೆ?
- ಸಾಲ ಮನ್ನಾ ಮಾಡಿ ರೈತರ ಹಿತ ಕಾಪಾಡಿದ್ದ ಡಾ.ಮನಮೋಹನ್ ಸಿಂಗ್
- ರಾಜ್ಯದ ಅಭಿವೃದ್ಧಿಗೆ ಆರ್.ಅಶೋಕ್ ಅಡ್ಡಗಾಲು: ಕೆಪಿಸಿಸಿ
- ಎನ್ಜಿಟಿಯಲ್ಲಿ ವಕೀಲರನ್ನು ನೇಮಿಸಿ ಹೋರಾಟ ಮಾಡಬೇಕು: ಆರ್.ಅಶೋಕ
ಈ ಕಾರಣದಿಂದ ವಾಟ್ಸಪ್ ಸೇರಿರುವ ಸದಸ್ಯರು ಗ್ರೂಪಿನಿಂದ ಹೊರಗಡೆ ಹೋಗದೆ ಸರ್ಕಾರಿ ಶಾಲೆಯಲ್ಲಿ ತೀರಾ ಅಗತ್ಯವಾದ ಸಮಸ್ಯೆಗಳು ಇರುತ್ತವೆ. ಅದರ ಬಗ್ಗೆ ಸರ್ಕಾರಿ ಶಾಲೆಗಳು ಅದರ ಲಿಸ್ಟನ್ನು ಗ್ರೂಪಿನಲ್ಲಿ ಹಾಕಿದರೆ ಗ್ರೂಪಿನಲ್ಲಿರುವ ಹಳೇ ವಿದ್ಯಾರ್ಥಿಗಳು ರಾಜಕೀಯ ಕ್ಷೇತ್ರದಿಂದ ಎಲ್ಲಾ ಕ್ಷೇತ್ರದಲ್ಲೂ ಇರುತ್ತಾರೆ. ಅಂತಾ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯಿಂದ ಶಾಸಕರು ಲೋಕಸಭಾ ಸದಸ್ಯರ ಸಂಪರ್ಕ ಹೊಂದಿರುವರು ಇರುತ್ತಾರೆ. ಹಲವರು ಗ್ರಾಮ ಪಂಚಾಯತಿ ಸದಸ್ಯ ಅಧ್ಯಕ್ಷರು ಆಗಿರುತ್ತಾರೆ.
ಇಂತಹ ಸಂದರ್ಭದಲ್ಲಿ ಸರ್ಕಾರಿ ಶಾಲೆಯಲ್ಲಿ ಇರುವ ಕುಂದು-ಕೊರತೆಗಳ ಬಗೆಗೆ ಜನಪ್ರತಿನಿಧಿಗಳ ಗಮನ ಸೆಳೆದು, ಸಮಸ್ಯೆ ನಿವಾರಣೆ ಮಾಡುವ ಪ್ರಯತ್ನ ಮಾಡಬಹುದು. ಜನಪ್ರತಿನಿಧಿಗಳ ಅನುದಾನವನ್ನು ಬಳಕೆ ಮಾಡಿಕೊಳ್ಳವ ಪ್ರಯತ್ನ ಮಾಡಲು ಇಚ್ಛಾಶಕ್ತಿ ತೋರಬೇಕು.
ಇನ್ನು ಕೆಲವಾರು ಕುಂದುಕೊರತೆಗಳು ಅಥವಾ ಅಭಿವೃದ್ಧಿ ಬಗೆಗೆ ಪ್ರಸ್ತಾಪ ಇದ್ದಾಗ ಆಯಾ ಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಹಳೆಯ ವಿದ್ಯಾರ್ಥಿ ಪೈಕಿ (ಅಭಿವೃದ್ಧಿ ಪ್ರಾಮಾಣಿಕ ಚಿಂತಕರು) ಇಬ್ಬರು ಸೇರಿ ಬ್ಯಾಂಕಿನಲ್ಲಿ ಅಕೌಂಟು ಮಾಡಿಸಿ ಹಳೇ ವಿದ್ಯಾರ್ಥಿಗಳು ವಿದ್ಯಾರ್ಥಿಗಳ ಆರ್ಥಿಕ ಶಕ್ತಿಯ ಮೇಲೆ 10 ರೂ ಯಿಂದಲೂ ತಮ್ಮ ಅಕೌಂಟು, ಫೋನ್ ಪೇ, ಚೆಕ್ ಗಳ ಮುಖಾಂತರ ತಮ್ಮ ಖಾತೆಗೆ ಹಾಕಿಸಿಕೊಂಡು ಶಾಲೆಯ ಅಭಿವೃದ್ಧಿ ಕಡೆ ಗಮನ ಹರಿಸಲು ಅವಕಾಶ ಇರುತ್ತದೆ.
ಇದು ಸ್ವಯಂಪ್ರೇರಿತವಾಗಿ ಇರಬೇಕು. ಶಾಲೆಯ ಅಕೌಂಟ್ ಗೆ ಹಣ ಹಾಕುವರು ಗೌಪ್ಯವಾಗಿ ಇಟ್ಟುಕೊಳ್ಳುವರು ಇಟ್ಟುಕೊಳ್ಳಬಹುದು ಅಥವ ಬೇರೆಯವರಿಗೆ ಸ್ಪೂರ್ತಿಯಾಗಿರಲಿ ಎನ್ನುವವರು ತಾವು ನೀಡಿರುವ ಹಣದ ಬಗೆ ಗ್ರೂಪಿನಲ್ಲಿ ಮಾಹಿತಿ ನೀಡಬಹುದು.
ಇನ್ನು ಶಾಲೆಯ ಜಂಟಿ ಖಾತೆವಾರು ಹಣದ ಖರ್ಚಿನ ಬಗೆ ಮಾಹಿತಿಯನ್ನು ಪಾರದರ್ಶಕವಾಗಿ ಇರಲು ಗ್ರೂಪಿನಲ್ಲಿ ಖರ್ಚಿನ ಬಗೆ ತಿಳಿಸಿದರೆ ಮುಂದೆ ಹಳೇ ವಿದ್ಯಾರ್ಥಿಗಳು ಹೊಸ ಆಲೋಚನೆಯಿಂದ ಸಹಕಾರ ನೀಡಲು ಸಾದ್ಯವಾಗುತ್ತದೆ. ಸರ್ಕಾರಿ ಶಾಲೆಗಳು ಇಂದು ಖಾಸಗಿ ಶಾಲೆಗಳ ಮೇಲೆ ಸ್ಪರ್ಧೆ ಮಾಡುವಂತಹ ವ್ಯವಸ್ಥೆ ನಿರ್ಮಾಣವಾಗಿದೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳ ( ವಿದ್ಯಾರ್ಥಿಗಳ) ಶ್ರೇಯಸ್ಸಿಗಾಗಿ ವಾಟ್ಸಪ್ ಗ್ರೂಪ್ ಗಳು ಯಾವುದೇ ವಿವಾದಗಳು ಇಲ್ಲದೆ ಮುಂದುವರೆಯುವುದು ಅಗತ್ಯ ಇದೆ ಎಂದೂ ಭಾವಿಸುತ್ತೇನೆ.
- N.S. ಈಶ್ವರಪ್ರಸಾದ್, ನೇರಳೇಕೆರೆ. ಮಧುಗಿರಿ ತಾ




