ಮಿತ್ರರೇ,
ಈ ಮೇಲಿನ ಮಾತು ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಚಾಲ್ತಿಯಲ್ಲಿದೆ. ನರೇಂದ್ರಮೋದಿ ನೇತೃತ್ವದ ಭಾರತೀಯ ಜನತಾ ಪಕ್ಷಕ್ಕೆ ಓಟುಗಳ ಖಜಾನೆ ಎಂದು ಪರಿಗಣಿಸಿದ್ದ ಉತ್ತರ ಪ್ರದೇಶದಲ್ಲಿ ಅಲ್ಲಿನ ಬಡ ಜನತೆ ನೀಡಿರುವ ಗುದ್ದು ಅಥವಾ ಛಾಟಿಯೇಟು ಕೇವಲ ಸಂಗಪರಿವಾರಕ್ಕೆ ಮಾತ್ರವಲ್ಲ, ಇಡೀ ದೇಶದ ರಾಜಕೀಯ ಪಕ್ಷಗಳಿಗೆ ಪಾಠ.
ನಾಲ್ಕೈದು ತಿಂಗಳ ಹಿಂದೆ ಅಯೋದ್ಯೆಯಲ್ಲಿ ರಾಮಮಂದಿರ ಸ್ಥಾಪನೆಯಾಗುವ ಸಂದರ್ಭದಲ್ಲಿ ಹಿಂದಿ ಛಾನಲ್ ನ ವರದಿಗಾರನೊಬ್ಬ ಸ್ಥಳೀಯ ಜನರ ಪ್ರತಿಕ್ರೆಯೆಯನ್ನು ಕೇಳುತ್ತಿದ್ದನು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಆ ವೇಳೆಯಲ್ಲಿ ಹನ್ನೆರೆಡು ವರ್ಷದ ಬಡ ಶಾಲಾ ಬಾಲಕನೊಬ್ಬ ನೀಡಿದ ಪ್ರತಿಕ್ರೆಯೆಗೆ ನಾನು ಕ್ಷಣ ಕಾಲ ದಂಗು ಬಡಿದು ಹೋಗಿದ್ದೆ. ಆತನ ಮಾತಿನ ವೀಡಿಯೋ ದೃಶ್ಯ ಇಡೀ ದೇಶಾದ್ಯಂತ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು.
ಆ ಬಾಲಕ ವರದಿಗಾರನಿಗೆ ಹೇಳಿದ ಮಾತುಗಳಿವು. ‘’ ಈ ರಾಮಮಂದಿರದಿಂದ ನಮಗೇನು ಉಪಯೋಗ? ಶಾಲೆಗಳನ್ನು ತೆರೆದು ನಮಗೆ ಪುಸ್ತಕಗಳನ್ನು ಉಚಿತವಾಗಿ ನೀಡಿದ್ದರೆ, ನಾವು ಕಷ್ಟಪಟ್ಟು ಓದಿ ಅಧಿಕಾರಿಗಳಾಗಬಹುದಿತ್ತು. ಈಗ ನಾವು ರಾಮಮಂದಿರದ ಮುಂದೆ ಕುಳಿತು ಭಿಕ್ಷೆ ಬೇಡಬೇಕು ಅಷ್ಟೇ’’ ಈ ಬಾಲಕನ ಮಾತುಗಳಿಗೆ ವರದಿಗಾರ ಕೂಡಾ ಬೆಚ್ಚಿಬಿದ್ದನು.
ಅಯೋಧ್ಯೆಯಲ್ಲಿ ಬಾಲಕರು ಆಟವಾಡುತ್ತಿರುವ ಇಟ್ಟಿಗೆಗಳು ಇರುವ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ. ಇವುಗಳು 1992 ರಲ್ಲಿ ಎಲ್.ಕೆ.ಅಧ್ವಾನಿಯವರು ಹಮ್ಮಿಕೊಂಡಿದ್ದ ರಾಮಮಂದಿರ ನಿರ್ಮಾಣ ಕುರಿತಾದ ಭಾರತ ಯಾತ್ರೆಯ ಸಮಯದಲ್ಲಿ ದೇಶಾದ್ಯಂತ ಭಕ್ತರಿಂದ ಕಲೆ ಹಾಕಿದ ಇಟ್ಟಿಗೆಗಳು.
ಪ್ರತಿ ಇಟ್ಟಿಗೆಯ ಜೊತೆ ಹತ್ತು ರೂಪಾಯಿನಿಂದ ಹಿಡಿದು ಹತ್ತು ಲಕ್ಷ ರೂಪಾಯಿಯವರೆಗೆ ಭಕ್ತರು ಕಾಣಿಕೆ ನೀಡಿದ್ದರು.
ಈಗ ನಿರ್ಮಾಣವಾಗಿರುವ ರಾಮಮಂದಿರವು ಸಂಪೂರ್ಣ ಶಿಲೆಯಿಂದ ರೂಪುಗೊಂಡಿವೆ. ಅಯೋಧ್ಯೆಯಲ್ಲಿ ರಾಶಿ ರಾಶಿ ಬಿದ್ದಿರುವ ಲಕ್ಷಾಂತರ ಇಟ್ಟಿಗೆಗಳಲ್ಲಿ ಒಂದನ್ನೂ ದೇಗುಲಕ್ಕೆ ಬಳಕೆ ಮಾಡಿಲ್ಲ. ಅನಾಥವಾಗಿ ಬಿದ್ದಿರುವ ಈ ಇಟ್ಟಿಗೆಗಳಿಂದ ಅಲ್ಲಿನ ಪೈಜಾಬಾದ್ ಜಿಲ್ಲೆಯಲ್ಲಿ ಬಡವರಿಗಾಗಿ ಕನಿಷ್ಠ ಹತ್ತು ಸಾವಿರ ಮನೆಗಳನ್ನು ನಿರ್ಮಾ ಣಮಾಡಿಕೊಟ್ಟಿದ್ದರೆ, ಅದು ರಾಮಮಂದಿರ ನಿರ್ಮಾಣಕ್ಕಿಂತ ಹೆಚ್ಚಿನ ಪುಣ್ಯದ ಕೆಲಸವಾಗುತ್ತಿತ್ತು.
ಆದರೆ, ಅಲ್ಲಿನ ಯೋಗಿ ಸರ್ಕಾರ ಅದನ್ನು ಮಾಡುವುದಿಲ್ಲ. ಏಕೆಂದರೆ, ಅಲ್ಲಿನ ಬಹುತೇಕ ಬಡವರು ಮುಸ್ಲಿಮರು ಮತ್ತು ದಲಿತರಾಗಿದ್ದಾರೆ. ಈ ಬಾರಿ ಅವರೆಲ್ಲರ ಸಿಟ್ಟು ರಟ್ಟೆಗೆ ಬಂದ ಪರಿಣಾಮವಾಗಿ ಎಲ್ಲರಿಗೂ ಅಚ್ಚರಿ ಎನಿಸಿದರೂ ಸಹಜವಾದ ಹಾಗೂ ನೀಡಬೇಕಾದ ತೀರ್ಪನ್ನು ಅಲ್ಲಿನ ಮತದಾರರು ನೀಡಿದ್ದಾರೆ. ಅಯೋಧ್ಯೆಯಲ್ಲಿ ಬಿ.ಜೆ.ಪಿ. ಅಭ್ಯರ್ಥಿ ಮಣ್ಣು ಮುಕ್ಕಿದ್ದು ಇದಕ್ಕೆ ಸಾಕ್ಷಿಯಾಗಿದೆ.
ಎಂಟು ವರ್ಷಗಳ ಹಿಂದೆ ಫೈಜಾಬಾದ್ ನಗರದಿಂದ ಅಯೋಧ್ಯೆಗೆ ಸಿಟಿ ಬಸ್ ನಲ್ಲಿ ಪ್ರಯಾಣ ಬೆಳೆಸಿದ್ದೆ. ಇಡೀ ದಿನ ರಾಮಲಲ್ಲಾ ಇದ್ದ ಜಾಗವನ್ನು ಹೊರತು ಪಡಿಸಿ, ಅಯೋಧ್ಯೆ ಮತ್ತು ಸರಯೂ ನದಿಯನ್ನು ಸುತ್ತಾಡಿ, ಸಂಜೆ ವಾಪಸ್ ಫೈಜಾಬಾದಿಗೆ ಬರುವಾಗ ಪ್ರಯಾಣಿಕರ ಆಟೋದಲ್ಲಿ ಹಿಂತಿರುಗಿದೆ. ಬಹುತೇಕ ಹೆಂಗಸರು ಆಟೋದಲ್ಲಿ ತುಂಬಿದ್ದ ಕಾರಣ, ಮುಸ್ಲಿಂ ಯುವಕನು ‘’ ಸಾಹೇಬ್ ನೀವು ನನ್ನ ಬಳಿ ಬನ್ನಿ’’ ಎಂದು ಮುಂದಿನ ಆತನ ಸ್ಥಳದಲ್ಲಿ ನನಗೆ ಜಾಗ ಮಾಡಿಕೊಟ್ಟನು.
ಪ್ರಯಾಣದುದ್ದಕ್ಕೂ ಆತನ ಜೊತೆ ಮಾತನಾಡುತ್ತಾ ಬಂದ ನಾನು, ಒಂದು ಸಂದರ್ಭದಲ್ಲಿ ‘’ ಭಯ್ಯಾ, ಈ ಬೆಳವಣಿಗೆಯಿಂದ ಇಲ್ಲಿನ ಮುಸ್ಲಿಂ ಸಮುದಾಯಕ್ಕೆ ಏನು ತೊಂದರೆಯಾಗುವುದಿಲ್ಲವೆ? ‘’ ಎಂದು ಪ್ರಶ್ನಿಸಿದೆ. ಆ ಬಡ ಯುವಕನ ಉತ್ತರ ಹೀಗಿತ್ತು.
‘’ ಸಾಹೇಬ್ ನಿಮ್ಮಂತಹವರು ಅಯೋಧ್ಯೆಗೆ ಬರುತ್ತಿರುವುದರಿಂದ ನಾವು ಈಗ ಹೊಟ್ಟೆ ತುಂಬಾ ಊಟ ಮಾಡುತ್ತಿದ್ದೀವಿ. ಅಯೋಧ್ಯೆಯಲ್ಲಿ ರಾಮನೂ ಇರಲಿ, ರಹೀಮನೂ ಇರಲಿ. ಇವರಿಂದಾಗಿ ನೀವು ಇಲ್ಲಿಗೆ ಬರುತ್ತೀರಿ, ನಾವು ಬದುಕುತ್ತೀವಿ.’’ ನನಗೆ ಆ ಯುವಕನ ಮಾತು ಕೇಳಿ ನಾನು ವಿಶ್ವ ವಿದ್ಯಾನಿಲಯಗಳಲ್ಲಿ ಕಲಿಯದ ಪಾಠವನ್ನು ಇಂದು ಈತನಿಂದ ಕಲಿತೆ ಎನಿಸಿತು. ಪೈಜಾಬಾದ್ ನಗರದ ಅಯೋಧ್ಯ ರಸ್ತೆಯ ಸರ್ಕಲ್ ಬಳಿ ಆಟೋ ನಿಲ್ಲಿಸಿದ ಕ್ಷಣ ಆತನನ್ನು ಚಹಾ ಅಂಗಡಿಗೆ ಕರೆದೊಯ್ದು, ಚಹಾ ಕುಡಿಸಿ, ನಾನು ಚಹಾ ಕುಡಿದು ಸಿಗರೇಟ್ ಸೇದುತ್ತಾ ತಣ್ಣಗೆ ಯೋಚಿಸತೊಡಗಿದೆ.
ಒಂದು ವಿಷಯ ಮತ್ತು ವಸ್ತುವಿಗೆ ಎಷ್ಟೋಂದು ಆಯಾಮಗಳಿವೆ? ಇದು ಒಬ್ಬ ಪತ್ರಕರ್ತ ಮತ್ತು ಲೇಖಕನಿಗೆ ಇರಬೇಕಾದ ಒಳನೋಟಗಳಿವು.
– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು




