ಅಂದು ರಾಜ ಇಂದು ರಾಜಕಾರಣಿ

1 year ago

ರಾಜ ವಯಸ್ಸಾಗುತ್ತಿದ್ದಂತೆ ತನ್ನ ಮಕ್ಕಳನ್ನು ಸಿಂಹಾಸನದಲ್ಲಿ ಕೂಡಿಸಿ, ನನಗೆ ನೀಡಿದಷ್ಟೇ, ಗೌರವವನ್ನು ಇವನಿಗೂ ನೀಡಿ ಇವನು ನಿಮ್ಮವನೆಂದು ಭಾವಿಸಿ ಎಂದು ಹೇಳುತ್ತಿದ್ದರು.

50 ವರ್ಷಗಳ ಹಿಂದೆ ನಮ್ಮ ನಾಯಕರುಗಳು ಕ್ಷೇತ್ರಕ್ಕೆ ಬಂದು ನಾನು ನಿಮ್ಮ ಮನೆಯ ಮಗ, ನಿಮ್ಮ ಸೇವೆಗಾಗಿ ಬಂದಿದ್ದೇನೆ, ಎಂದು ಹೇಳಿದರು.

25 ವರ್ಷಗಳ ಹಿಂದೆ ಅವರ ಮಕ್ಕಳನ್ನು ಮುಂದೆ ನಿಲ್ಲಿಸಿ ಇವರನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ, ನನ್ನನ್ನು ಕಾಪಾಡಿದಂತೆ ಇವರನ್ನು ಕಾಪಾಡಿ ಎಂದು ಕೈಮುಗಿದು ಬೇಡಿದರು.

ಈಗ ಅವರುಗಳು ಅವರ ಮಕ್ಕಳುಗಳನ್ನು ಜನರ ಮುಂದೆ ನಿಲ್ಲಿಸಿ ನನ್ನ ಮಕ್ಕಳನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ, ಇವರು ನಿಮ್ಮವರೆಂದು, ನಿಮ್ಮ ಮನೆಯ ಮಕ್ಕಳೆಂದು ಕಾಪಾಡಿ ಎಂದು ಕೈ ಮುಗಿದು ಹೇಳುತ್ತಿದ್ದಾರೆ.

ಒಟ್ಟಿನಲ್ಲಿ ತಾತ ಮಗ ಮೊಮ್ಮಗ ಮುಂದಿನ ದಿನಗಳಲ್ಲಿ ಅವರ ಮರಿ ಮಕ್ಕಳು ನಿರಂತರವಾಗಿ ಅಂದು ರಾಜನ ರೀತಿಯಲ್ಲಿ ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರಗಳಲ್ಲಿ ಸಿಂಹಾಸನದಲ್ಲಿ ಕುಳಿತು ಅಧಿಕಾರದಲ್ಲಿದ್ದಾರೆ.

ಮತದಾರರು ಮಾತ್ರ ಮತ್ತು ಅವರ ಹಿಂಬಾಲಕರು ತಲೆತಲಾಂತರದಿಂದ ಇವರುಗಳನ್ನು ನೋಡಿಕೊಂಡು ಪೋಷಿಸಿಕೊಂಡು ಸೇವೆ ಮಾಡಿಕೊಂಡು ಧನ್ಯರಾಗುತ್ತಲೇ ಇರಬೇಕು. 

ಪ್ರಭುತ್ವದ ಸಂಸ್ಕೃತಿ ಸಂಪ್ರದಾಯಗಳು ಪ್ರಜಾಪ್ರಭುತ್ವದಲ್ಲೂ ಮುಂದುವರೆದಿದೆ. ಅಂದು ರಾಜ, ಇಂದು ರಾಜಕಾರಣಿ, ಅಷ್ಟೇ ವ್ಯತ್ಯಾಸ ಎಲ್ಲವೂ ಅದೇ ಆಗಿದೆ.

ತಲೆತಲಾಂತರದಿಂದ ಕ್ಷೇತ್ರಗಳು ಮಾತ್ರ ಮಾದರಿಯಾಗಲಿಲ್ಲ. ಅಲ್ಲಿನ ಜನರ ಬದುಕು ಬದಲಾಗಲಿಲ್ಲ. ಆದರೆ ಬರೀ ಕೈಯಲ್ಲಿ ಬಂದು ನಿಂತು ಪ್ರತಿನಿಧಿಗಳಾದವರು ಇಂದು ನೂರಾರು ಕೋಟಿ ರೂಪಾಯಿಗಳ ಆದಾಯದ ತೆರಿಗೆ ಪಾವತಿಸುವ ತೆರಿಗೆದಾರರಾಗಿದ್ದಾರೆ.

– ಕೆ ಎಸ್ ನಾಗರಾಜ್, ಬೆಂಗಳೂರು

Leave a Reply