ಮುಖ್ಯಮಂತ್ರಿ ಯೋಗಿರವರೇ ನಿಮ್ಮ ರಾಜ್ಯದವರಿಗೆ ನಿಮ್ಮ ರಾಜ್ಯದಲ್ಲಿ ಉದ್ಯೋಗವನ್ನು ಕಲ್ಪಿಸಿಕೊಡಿ.
ಕರ್ನಾಟಕ ರಾಜ್ಯದಲ್ಲಿ ಪ್ರತಿದಿನವೂ ಕಟ್ಟಡ ನಿರ್ಮಾಣದ ಕಾರ್ಯದಲ್ಲಿ ತೊಡಗಿಕೊಂಡಿರುವ ಮತ್ತು ಇತರೆ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಉತ್ತರ ಪ್ರದೇಶ ಮತ್ತು ಬಿಹಾರ್ ಹಾಗೂ ಅಸ್ಸಾಂ ರಾಜ್ಯದ ಮಂದಿ ಅವಘಡಗಳ ಸಂದರ್ಭದಲ್ಲಿ ಪ್ರಾಣವನ್ನ ಕಳೆದುಕೊಳ್ಳುತ್ತಿದ್ದಾರೆ. ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ, ಬದುಕನ್ನ ಕಟ್ಟಿಕೊಳ್ಳುವ ಸಲುವಾಗಿ ಇಲ್ಲಿಗೆ ಬಂದು ಕಠಿಣವಾದ ಅಂತಹ ಕೆಲಸಗಳಲ್ಲಿ ತೊಡಗಿಸಿಕೊಂಡು ತಮ್ಮ ಬದುಕನ್ನ ಕಳೆದುಕೊಳ್ಳುತ್ತಿರುವುದನ್ನು ನೋಡಿದಾಗ ದುಃಖವಾಗುತ್ತಿದೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ಧರ್ಮವನ್ನ ಕಾಪಾಡುವ ನಿಟ್ಟಿನಲ್ಲಿ ತೋರುತ್ತಿರುವಂತಹ ಶ್ರದ್ಧೆ ಮತ್ತು ಆಸಕ್ತಿ ಮೆಚ್ಚುವಂತದು. ಆದರೆ ಇದರ ಜೊತೆಗೆ ನಿಮ್ಮ ರಾಜ್ಯದ ಕೋಟ್ಯಾಂತರ ಜನರ ಕೈಗಳಿಗೆ ಕೆಲಸವನ್ನು ಕೊಡುವ ಕೈಗಾರಿಕೆಗಳು ಸ್ಥಾಪನೆ ಆಗಬೇಕು. ಅವರ ಬದುಕನ್ನ ಕಟ್ಟಿಕೊಳ್ಳಲು ವ್ಯವಸ್ಥೆಯನ್ನು ಮಾಡಿಕೊಡಬೇಕು. ಕೇವಲ ಆವೇಶದ ಭಾಷಣಗಳು ಬುಲ್ಡೋಜರ್ಗಳು ಬದುಕನ್ನ ಕಟ್ಟಿಕೊಡುವುದಿಲ್ಲ.
ಇದೇ ಪರಿಸ್ಥಿತಿ ಬಿಹಾರದ ರಾಜ್ಯದಲ್ಲೂ ಇದೆ. ಅಸ್ಸಾಂ ರಾಜ್ಯದ ಮುಖ್ಯಮಂತ್ರಿ ಅವರ ಮಾತುಗಳನ್ನು ಕೇಳುತ್ತಿದ್ದರೆ, ಅಸ್ಸಾಮಿನಲ್ಲಿ ಸ್ವರ್ಗವೇ ಧರೆಗೆ ಇಳಿದು ಬಂದಿದೆ ಏನೋ ಎನ್ನುವಂತೆ ಭಾಸವಾಗುತ್ತಿದೆ.
ಆದರೆ 10 ವಯಸ್ಸಿನಿಂದ ಹಿಡಿದು 20 ವರ್ಷದ ಯುವಕರು ದೂರದ ಊರಿನಿಂದ ಬೆಂಗಳೂರು ನಗರ ಮತ್ತು ರಾಜ್ಯದ ಇತರ ನಗರ ಪ್ರದೇಶಗಳಲ್ಲಿ ಹೋಟೆಲ್ಗಳಲ್ಲಿ, ಬಾರ್ ಗಳಲ್ಲಿ ಮತ್ತು ಇತರೆ ಕಷ್ಟಕರವಾದ ಉದ್ಯೋಗವನ್ನು ಹಗಲು ರಾತ್ರಿ ವ್ಯತ್ಯಾಸಗಳ ತಿಳಿಯದೆ ದುಡಿಯುತ್ತಿದ್ದಾರೆ. ಆ ಮಕ್ಕಳ ಮುಖಗಳನ್ನು ನೋಡಿದಾಗ ಎಂತವರಿಗೂ ಬೇಸರವಾಗುತ್ತದೆ. ಅವರಿಗೆ ಕಾಯಿಲೆ ಬಂದಾಗ ಸಂತೈಸುವವರಿಲ್ಲ. ಅವರಿಗೆ ದುಃಖವಾದಾಗ ಸಮಾಧಾನ ಮಾಡುವವರಿಲ್ಲ. ಅವರಿಗೆ ಕಣ್ಣೀರು ಬಂದಾಗ ಅದನ್ನು ಒರೆಸುವವರು ಯಾರು ಇಲ್ಲ. ಅವರ ಭಾಷೆಯು ಯಾರಿಗೂ ಬರುವುದಿಲ್ಲ. ನಮ್ಮ ಭಾಷೆ ಅವನಿಗೆ ಅರ್ಥವಾಗುವುದಿಲ್ಲ. ಆ ಹುಡುಗರು ಆಟವಾಡುವ ವಯಸ್ಸಿನಲ್ಲಿ ಶಾಲೆಕಾಲೇಜುಗಳಿಗೆ ಹೋಗುವ ಸಮಯದಲ್ಲಿ ಇಂತಹ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದನ್ನು ನೋಡಿದಾಗ ನಿಜಕ್ಕೂ ನಿಮ್ಮ ಸರ್ಕಾರಗಳು ಎಷ್ಟರಮಟ್ಟಿಗೆ ಕ್ರಿಯಾಶೀಲವಾಗಿವೆ ಎನ್ನುವುದು ಸ್ಪಷ್ಟವಾಗುತ್ತದೆ.
ಯಾವುದೇ ರಾಜ್ಯದ ಪ್ರಜೆಯೂ ದೇಶದ ಯಾವುದೇ ರಾಜ್ಯದಲ್ಲಿ ಬೇಕಾದರೂ ಇರಬಹುದು. ಅದು ಸಂವಿಧಾನದ ಹಕ್ಕು ಆಗಿದೆ. ಇದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಕೇವಲ ಧರ್ಮದ ವಿಚಾರಕ್ಕೆ ಕೊಡುವಷ್ಟು ಆದ್ಯತೆಯನ್ನ ಜನರ ಉದ್ಯೋಗದ ಕಡೆಗೂ ನೀಡಬೇಕು. ನಿಮ್ಮ ರಾಜ್ಯ ಸಹ ಕರ್ನಾಟಕದ ರೀತಿಯಲ್ಲಿ ಅಭಿವೃದ್ಧಿಯಾಗಬೇಕು. ನಿಮ್ಮ ರಾಜ್ಯ ಅಭಿವೃದ್ಧಿಯಾಗಿ ದೂರದ ಊರುಗಳಿಂದ ನಮ್ಮ ಊರಿಗೆ ಬದುಕನ್ನು ಕಟ್ಟಿಕೊಳ್ಳಲು ಬಂದು ಸಂಕಷ್ಟಕ್ಕೆ ಗುರಿಯಾಗುವ ಸಂದರ್ಭಗಳು ಮತ್ತೆ ಮತ್ತೆ ಎದುರಾಗಬಾರದು ಎಂಬುದಷ್ಟೇ ನಮ್ಮ ಕಾಳಜಿಯಾಗಿದೆ.
ಮಾನ್ಯ ಯೋಗಿರವರೇ ಇನ್ನು ಮುಂದಾದರು ಉತ್ತರ ಪ್ರವೇಶದಲ್ಲಿ ಕಾರ್ಖಾನೆಗಳು ಸ್ಥಾಪನೆಯಾಗಲಿ, ಉದ್ಯೋಗಗಳು ದೊರಕುವಂತಾಗಲಿ. ಇದಕ್ಕೂ ಸಹ ನಿಮ್ಮ ಗಮನವನ್ನು ಹರಿಸಿ.
– ಕೆ ಎಸ್ ನಾಗರಾಜ್, ಬೆಂಗಳೂರು




