ಅಪ್ಪಟ ಕನ್ನಡಪ್ರೇಮಿ, ಹೋರಾಟಗಾರ ಸ.ರ.ಸುದರ್ಶನರವರ ಜೀವನ ಸಾಧನೆ ಅನನ್ಯ
ಬೆಂಗಳೂರು: ನಗರದ ರವೀಂದ್ರ ಕಲಾಕ್ಷೇತ್ರದ ಮಹಿಳಾ ವಿಶ್ರಾಂತಿ ಕೊಠಡಿಯಲ್ಲಿ ಕನ್ನಡ ಗೆಳಯರ ಬಳಗ ಮತ್ತು ಕರ್ನಾಟಕ ವಿಕಾಸರಂಗ ಸಹಯೋಗದಲ್ಲಿ ವೀರ ಕನ್ನಡಯೋಧ ಸ.ರ.ಸುದರ್ಶನ ರವರಿಗೆ ತಿಂಗಳ ನೆನಪು ಕಾರ್ಯಕ್ರಮ ಆಯೋಜಿಸಲಾಗಿತ್ತು.
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷರಾದ ಡಾ.ಮಾನಸ ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ವ.ಚ.ಚನ್ನೇಗೌಡ, ರಾ.ನಂ.ಚಂದ್ರಶೇಖರ್, ಡಾ.ಟಿ.ಆರ್.ಅನಂತರಾಮು, ಡಾ.ಶೇಷಶಾಸ್ರ್ತಿ ಮತ್ತು ಸ.ರ.ಸುದರ್ಶನರವರ ಪುತ್ರಿ ನುಡಿ ಸುದರ್ಶನ್ ರವರು ಸ.ರ.ಸುದರ್ಶನ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಮಾನಸ ಮಾತನಾಡಿ, ಸಾವು ಎಂಬ ಪದ ನೆನಪಿಕೊಳ್ಳಲು ಎಲ್ಲರು ಭಯಪಡುತ್ತಾರೆ. ಸತ್ತರು ಅಮರರಾಗುತ್ತಾರೆ ಅಂತಹ ಅಮರರ ಸಾಲಿನಲ್ಲಿ ಸ.ರ.ಸುದರ್ಶನ ರವರು ನಿಲ್ಲುತ್ತಾರೆ. ಸ.ರ.ಸುದರ್ಶನ್ ವೀರಕನ್ನಡ ಯೋಧ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ ಎಂದರು.
ಸ.ರ.ಸುದರ್ಶನ್ ರವರ ಜೊತೆಯಲ್ಲಿ ಬಹಳಷ್ಟು ವರ್ಷಗಳ ಉತ್ತಮ ಒಡನಾಟವಿತ್ತು. ಕನ್ನಡ ವಿಷಯದಲ್ಲಿ ಎಂದಿಗೂ ಸ.ರ.ಸುದರ್ಶನ್ ರಾಜಿಯಾಗುತ್ತಿರಲಿಲ್ಲ. ದ್ವಿಚಕ್ರವಾಹನದಲ್ಲಿ ಕನ್ನಡ ಅಂಕಿಸಂಖ್ಯೆ ಬರೆದಾಗ ಪೊಲೀಸ್ ಇಲಾಖೆಯವರು ದಂಡ ವಿಧಿಸಿದರು. ಇದರ ವಿರುದ್ಧ ಹೋರಾಟ ಮಾಡಿದರು. ರಾಜ್ಯದ ಜನರ ಗಮನ ಸೆಳೆಯುವಂತೆ ಮಾಡಿದರು ಎಂದರು.
ನಾಮಫಲಕದಲ್ಲಿ ಶೇಕಡ 60ರಷ್ಟು ಕನ್ನಡ ಭಾಷೆ ಮಾಡಬೇಕು ಎಂದು ಹೋರಾಟ ಮಾಡಿದರು. ಆಂಗ್ಲ ನಾಮಫಲಕಗಳಿಗೆ ಮಸಿ ಬಳಿಯುವ ಮೂಲಕ ಹೋರಾಟ ಮಾಡಿದರು. ಅಪ್ಪಟ ಕನ್ನಡ ಕಾರ್ಯಕರ್ತ ಎಂದರೆ ಸ.ರ.ಸುದರ್ಶನ ರವರು. ಇಂತಹ ಧೀಮಂತ ಹೋರಾಟಗಾರ, ಚೇತನ ಸ.ರ.ಸುದರ್ಶನ ರವರ ಹೆಸರು ಉಳಿಯಬೇಕು. ಈ ನಿಟ್ಟಿನಲ್ಲಿ ನಮ್ಮ ಪ್ರಯುತ್ನ ಎಂದರು.
ರಾ.ನಂ.ಚಂದ್ರಶೇಖರ್ ಮಾತನಾಡಿ, ಕನ್ನಡ ಚಳುವಳಿಯಲ್ಲಿ ಮಂಚೂಣಿ ಹೋರಾಟಗಾರರು. ಕನ್ನಡ ಶಕ್ತಿ ಕೇಂದ್ರದಲ್ಲಿ ಸಂಘಟನಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಕನ್ನಡ ಪರ ಅನೇಕ ಹೋರಾಟ ಮಾಡಿದ್ದಾರೆ. ಕನ್ನಡ ಹೋರಾಟಗಾರರು, ಸಾಹಿತಿಗಳು ಚಿಂತಕರು ಸ.ರ.ಸುದರ್ಶನ ರವರ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು. ಪೊಲೀಸ್ ಇಲಾಖೆ ಮತ್ತು ಪತ್ರಕರ್ತರು ಕನ್ನಡ ಭಾಷೆ ಉಳಿಸುವಲ್ಲಿ ಶ್ರಮವಹಿಸುತ್ತಿದ್ದಾರೆ ನಿಷ್ಟಾವಂತ ಕಾಯಕಯೋಗಿ ಸ.ರ.ಸುದರ್ಶನರವರು ಎಂದರು.
ವ.ಚ.ಚನ್ನೇಗೌಡ ಮಾತನಾಡಿ, ಒಂದನೇ ತರಗತಿಯಿಂದ ಏಳನೇ ತರಗತಿವರಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡಬೇಕು ಎಂಬ ಹೋರಾಟ, ಜೀವನಪೂರ್ತಿ ಕನ್ನಡ, ಕನ್ನಡ ಎಂದು ಹೋರಾಟ ಮಾಡಿದ ಸ.ರ.ಸುದರ್ಶನ ರವರು ಕನ್ನಡಿಗರ ಸ್ಪೂರ್ತಿಯಾಗಿದ್ದಾರೆ.ಸ.ರ.ಸುದರ್ಶನ ರವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಆತ್ಮೀಯ ಒಡನಾಟವಿತ್ತು. ನೃಪತುಂಗ ಶಾಲೆ ಸ್ಥಾಪನೆ ಮಾಡಿದರು ಎಂದರು.
ಸ.ರ.ಸುದರ್ಶನ ಅಪ್ಪಟ ಕನ್ನಡಪ್ರೇಮಿ. ಅವರ ಮಗಳಿಗೆ ನುಡಿ ಎಂದು ಹೆಸರು ನಾಮಕರಣ ಮಾಡಿದರು. ಅವರ ಮರಣನಂತರ ದೇಹ ದಾನ ಮಾಡಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಅವರು ತೀರ್ಮಾನ ಮಾಡಿ, ನುಡಿದಂತೆ ನಡೆದರು ಎಂದರು.
ಟಿ.ಆರ್.ಅನಂತರಾಮು ಮಾತನಾಡಿ, ಕನ್ನಡ ಕಾರ್ಯಕರ್ತ ಎಂದು ಪರಿಚಿತರಾಗಿದ್ದರು ಸ.ರ.ಸುದರ್ಶನ ರವರು ವಿಜ್ಞಾನ ಸಾತ್ನಕೋತ್ತರ ಪದವಿಯನ್ನು ಕನ್ನಡದಲ್ಲಿ ಬರೆದು ಮೂರನೇಯ ರ್ಯಾಂಕ್ ಪಡೆದರು. ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯದಲ್ಲಿ ಕೇಂದ್ರ ಸರ್ಕಾರಿ ಹುದ್ದೆಯನ್ನು ನಿರಾಕರಿಸಿ ಮೈಸೂರಿನಲ್ಲಿ ಉಳಿದರು. ಅವರ ಪ್ರತಿಯೊಂದು ಹೋರಾಟ ಮೈಸೂರಿನಿಂದಲೇ ಪ್ರಾರಂಭವಾಗುತ್ತಿತು ಎಂದರು.
ಆರ್.ಶೇಷಶಾಸ್ತ್ರಿ ಮಾತನಾಡಿ, ನೃಪತುಂಗ ಕನ್ನಡ ಶಾಲೆಯನ್ನು ಸ.ರ.ಸುದರ್ಶನ ಮಗುವಿನಂತೆ ನೋಡಿಕೊಳ್ಳುತ್ತಿದ್ದರು. ಭೂಗರ್ಭ ಶಾಸ್ತ್ರದಲ್ಲಿ ನಿಘಂಟು ಬರೆದರು. ತಾನು ನೀತಿಯುತವಾಗಿದ್ದರೆ, ಬರೆಯುವುದು ನೀತಿಯುತವಾಗಿರುತ್ತದೆ ಎಂಬ ನಂಬಿಕೆ ಇಟ್ಟವರು ಸ.ರ.ಸುದರ್ಶನ ರವರು ಎಂದರು.
ನುಡಿ ಸುದರ್ಶನ್ ಮಾತನಾಡಿ, ನನ್ನ ತಂದೆಯವರಾದ ಸ.ರ.ಸುದರ್ಶನ ರವರ ಪ್ರತಿಯೊಂದು ಕನ್ನಡ ಕಾರ್ಯಕ್ರಮಗಳಿಗೆ ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು. ಇದರಿಂದ ದೊಡ್ಡದೊಡ್ಡ ಸಾಹಿತಿಗಳು, ಚಿಂತಕರ ಪರಿಚಯವಾಯಿತು. ಇದರಿಂದ ಕನ್ನಡ ಕುರಿತು ಜ್ಞಾನ ಬೆಳಯಲು ಸಾಧ್ಯವಾಯಿತು ಎಂದರು.
ಕನ್ನಡ ಪರ ಹೋರಾಟಗಾರ ರಮೇಶ್ ಬಾಬು, ಮ.ಚಂದ್ರಶೇಖರ್ , ಬಿ.ವಿ.ರವಿಕುಮಾರ್, ಭಾ.ಹ.ಉಪೇಂದ್ರ ಮುಂತಾದವರು ಹಾಜರಿದ್ದರು.




