ಜಾತಿವಾದಿಗಳು, ಅಸೂಯೆ, ದ್ವೇಷದ ಮಾತುಗಳು ತುಂಬಿ ತುಳುಕುತ್ತಿರುವ ವ್ಯವಸ್ಥೆಯಲ್ಲಿ ಭಿನ್ನವಾಗಿ ಕಾಣುವ ಜೆ ಎಚ್ ಪಟೇಲ್
ಪಟೇಲರು ಎಂದು ಜಾತಿವಾದಿ ಆಗಿರಲಿಲ್ಲ, ಎಂದು ಸಹ ಯಾರ ಮೇಲೂ ದ್ವೇಷವನ್ನು ಮಾಡುತ್ತಿರಲಿಲ್ಲ, ವೈರತ್ವವನ್ನು ಹೊಂದಿರಲಿಲ್ಲ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ನಡುವೆಯೂ ಎಲ್ಲರೊಂದಿಗೆ ಪ್ರೀತಿ ಮತ್ತು ಸ್ನೇಹವನ್ನು ಕಾಯ್ದುಕೊಂಡಿದ್ದರು. ಸಹಾಯ ಮಾಡುವ ಸಂದರ್ಭದಲ್ಲಿ ಪಟೇಲರು ಎಂದು ಸಹ ಪಕ್ಷಪಾತಿಯಾಗಿರಲಿಲ್ಲ ಸಂಕುಚಿತ ಭಾವನೆ ಇರಲಿಲ್ಲ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಜಿಲ್ಲೆಗಳ ಪುನರ್ ವಿಂಗಡಣೆಯ ಹಿನ್ನೆಲೆಯಲ್ಲಿ ರಚನೆಯಾಗಿದ್ದ ಬಾಗಲಕೋಟೆ ಜಿಲ್ಲೆಯ ಹುಂಡೇಕರ್ ರವರ ಸಮಿತಿಯ ಶಿಫಾರಸುಗಳನ್ನು ಧೈರ್ಯವಾಗಿ ಅನುಷ್ಠಾನಗೊಳಿಸಿ ಏಳು ಹೊಸ ಜಿಲ್ಲೆಗಳನ್ನು ಸ್ಥಾಪಿಸಿದಂತಹ ಕೀರ್ತಿ ಪಟೇಲರಿಗೆ ಸಲ್ಲುತ್ತದೆ.
ಬಸವಣ್ಣನವರ ವಿಚಾರಗಳು ಮತ್ತು ಅವರ ಆದರ್ಶಗಳನ್ನ ಶಾಶ್ವತವಾಗಿಡುವ ಸಲುವಾಗಿ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಿ ಅದರ ಅಭಿವೃದ್ಧಿಗೆ ಹಿರಿಯ ಐಎಎಸ್ ಅಧಿಕಾರಿ ನಿಯೋಜಿಸಿದಂತಹ ಸಾಧನೆ ಪಟೇಲರದು.
ಪಕ್ಷದ ಕಾರ್ಯಕರ್ತರಿಗೆ ಏಕಕಾಲದಲ್ಲಿ ಸುಮಾರು ಐದು ಸಾವಿರ ಮಂದಿಗೆ ತಾಲ್ಲೂಕು ಮಟ್ಟದಿಂದ ಹಿಡಿದು ಜಿಲ್ಲಾ ಮತ್ತು ರಾಜ್ಯಮಟ್ಟದ ವಿವಿಧ ಅಧಿಕಾರಗಳನ್ನ ನೀಡಿದಂತಹ ಕೀರ್ತಿಯು ಇವರಿಗೆ ಸಲ್ಲುತ್ತದೆ. ಈ ಸಂದರ್ಭದಲ್ಲಿ ಒಂದೇ ಒಂದು ಬಾರಿಯೂ ಸಹ ತನ್ನ ಜಾತಿಯವರಿಗೆ ಅಥವಾ ತನ್ನ ಕುಟುಂಬದವರಿಗೆ ಸ್ಥಾನಮಾನ ಒದಗಿಸಿಕೊಡಲು ಅಂದು ಪಕ್ಷದ ಅಧ್ಯಕ್ಷರಾಗಿದ್ದ ಬಿ ಎಲ್ ಶಂಕರ್ ಅವರಿಗೆ ಒಮ್ಮೆಯೂ ಹೇಳಲಿಲ್ಲ, ಇದು ಅವರ ದೊಡ್ಡತನ.
ಬೆಂಗಳೂರು ನಗರದ ಅಭಿವೃದ್ಧಿಗಾಗಿ ಬಾಂಡ್ ಯೋಜನೆ ಜಾರಿಗೊಳಿಸಿದರು, ಬೆಂಗಳೂರು ನಗರದ ಅಭಿವೃದ್ಧಿಗೆ ಪ್ರತ್ಯೇಕವಾಗಿ ಸಚಿವರನ್ನೇ ತಮ್ಮ ಸಂಪುಟದಲ್ಲಿ ನೇಮಕ ಮಾಡಿದ್ದರು.
ಲೋಹಿಯಾರವರ ಮಾರ್ಗದರ್ಶನದಲ್ಲಿ ಕರ್ನಾಟಕದಲ್ಲಿ ಉಳುವವನಿಗೆ ಭೂಮಿ ಎನ್ನುವ ಹೋರಾಟವನ್ನು ನಡೆಸುವಲ್ಲಿ ಇವರು ಪಾಲ್ಗೊಂಡು ತಮ್ಮ ಜಮೀನನ್ನೇ ಈ ಹಿನ್ನೆಲೆಯಲ್ಲಿ ಕಳೆದುಕೊಂಡರು.
ಇವರಷ್ಟು ಪುಸ್ತಕಗಳನ್ನ ಓದಿದ ಮುಖ್ಯಮಂತ್ರಿ ಕರ್ನಾಟಕದಲ್ಲಿ ಯಾರು ಇರಲಿಲ್ಲ. ಇವರಷ್ಟು ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದ ವಿಚಾರಗಳನ್ನು ಅರಿತವರು ಯಾರು ಇರಲಿಲ್ಲ. ಇವರ ರೀತಿಯಲ್ಲಿ ವಿಚಾರಗಳನ್ನ ಸರಳವಾಗಿ ಜನಸಾಮಾನ್ಯರಿಗೂ ಅರ್ಥವಾಗುವಂತೆ ಮಂಡಿಸುವ ಶಕ್ತಿಯು ಯಾರಲ್ಲೂ ಇರಲಿಲ್ಲ. ಇವರ ರೀತಿಯಲ್ಲಿ ಸದನದಲ್ಲಿ ಆ ಸಂದರ್ಭಕ್ಕೆ ಅನುಗುಣವಾಗಿ ಹಾಸ್ಯ, ವ್ಯಂಗ್ಯ, ಹರಿತ ಎಲ್ಲವನ್ನು ಒಳಗೊಂಡಂತಹ ಮಾತುಗಾರಿಕೆ ಬೇರೆ ಯಾರಿಂದಲೂ ನಿರೀಕ್ಷಿಸಲು ಸಾಧ್ಯವಿರಲಿಲ್ಲ.
ಸಾಹಿತ್ಯವನ್ನ ಬಲ್ಲವರಾಗಿದ್ದರು, ಸಂಸ್ಕೃತಿಯನ್ನು ಪ್ರೀತಿಸುತ್ತಿದ್ದರು. ಹೀಗಾಗಿ ಇವರ ಒಡನಾಟದಲ್ಲಿ ಇದ್ದಂತಹ ಸಾಹಿತಿಗಳು, ಕಲಾವಿದರು, ರಂಗಭೂಮಿ ನಟರು ಹಾಡುಗಾರರ ಗುಂಪು ದೊಡ್ಡದಿದೆ.
ಪಟೇಲರನ್ನ ಕನ್ನಡಿಗರು ಹೆಚ್ಚು ನೆನಪು ಮಾಡಿಕೊಳ್ಳುವುದು ಲೋಕಸಭೆಯಲ್ಲಿ 1967ರಲ್ಲಿ ಪ್ರಥಮ ಬಾರಿಗೆ ಕನ್ನಡದಲ್ಲಿ ಮಾತನಾಡಿ, ಕನ್ನಡ ಭಾಷೆಯ ಪ್ರತಿಷ್ಠೆಯನ್ನ ಹೆಚ್ಚಿಸಿದರು. ಜೊತೆಗೆ ಲೋಕಸಭೆಯಲ್ಲಿ ಕನ್ನಡವು ಸೇರಿದಂತೆ ಅನೇಕ ಪ್ರಾದೇಶಿಕ ಭಾಷೆಗಳಲ್ಲೂ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಅವಕಾಶವನ್ನ ಇವರ ಕಾರಣದಿಂದ ದೊರೆತಿರುತ್ತದೆ.
ಕುಟುಂಬಕ್ಕಾಗಿ ಆಸ್ತಿಯನ್ನು ಮಾಡುವ ಚಿಂತನೆಯನ್ನ ಎಂದೂ ನಡೆಸಲಿಲ್ಲ. ಜೊತೆಗೆ ತಮ್ಮ ಕುಟುಂಬದ ಸದಸ್ಯರನ್ನ ರಾಜಕಾರಣದಲ್ಲಿ ಸ್ಥಾನಮಾನ ನೀಡಿ ತಮ್ಮ ಕಣ್ಮುಂದೆಯೇ ಅವರನ್ನು ನಾಯಕರನ್ನಾಗಿಸಲು ಒಂದು ಸಣ್ಣ ಪ್ರಯತ್ನವನ್ನು ನಡೆಸಲಿಲ್ಲ. ಅಂತಹ ಬಿಟ್ಟಿ ಉಪದೇಶ ಮಾಡಿದವರಿಗೆ ಸರಿಯಾಗಿ ಬುದ್ಧಿ ಮಾತು ಹೇಳಿ ಕಳಿಸಿರುತ್ತಾರೆ.
ಪಟೇಲರು ಲೋಕಸಭಾ ಸದಸ್ಯರಾಗಿ, ವಿಧಾನಪರಿಷತ್ತಿನ ಸದಸ್ಯರಾಗಿ, ವಿಧಾನಸಭಾ ಸದಸ್ಯರಾಗಿ ಎಲ್ಲ ಸದನಗಳಲ್ಲಿ ತಮ್ಮದೇ ಆದಂತಹ ಹೆಜ್ಜೆ ಗುರುತುಗಳನ್ನ ಬಿಟ್ಟು ಹೋಗಿರುತ್ತಾರೆ. ಒಬ್ಬ ಉತ್ತಮ ಸಂಸದೀಯ ಪಟುವಾಗಬೇಕಾದರೆ ಮತ್ತು ಸಾರ್ವಜನಿಕ ಜೀವನದಲ್ಲಿ ಸಹನೆ ತಾಳ್ಮೆಯಿಂದ ವಿರೋಧ ಪಕ್ಷದವರನ್ನು ನಿಭಾಯಿಸಬೇಕೆಂದರೆ ಪಟೇಲರ ಸದನದ ಮಾತಿನ ಸಂಗ್ರಹದ ಪುಸ್ತಕವನ್ನು ಓದಿದರೆ ಎಷ್ಟು ಅನುಕೂಲವಾಗುತ್ತದೆ.
ದುರಂತವೆಂದರೆ ಹತ್ತು ಹಲವಾರು ಒಳ್ಳೆಯ ಕೆಲಸಗಳನ್ನು ಮಾಡಿ, ನೀರಾವರಿ ಯೋಜನೆಗಳಿಗೆ ಭೂಮಿಯನ್ನು ಸ್ವಾಧೀನ ಪಡಿಸುವ ಸಂದರ್ಭದಲ್ಲಿ ಉದಾರತೆಯಿಂದ ಭೂಮಿಯನ್ನ ಕಳೆದುಕೊಂಡವರಿಗೆ ಪರಿಹಾರವನ್ನು ನೀಡಿದವರು, ಅಧಿಕಾರಿಗಳ ಮಾತನ್ನು ಪಕ್ಕಕ್ಕೆ ಸರಿಸಿ ಮೊತ್ತವನ್ನ ಹೆಚ್ಚಿಸಿಕೊಟ್ಟವರು ಪಟೇಲರು. ಆದರೂ ಇವರ ಮಾನವ ಸಹಜವಾದ ಕೆಲವು ದೌರ್ಬಲ್ಯಗಳನ್ನೇ ಮಾತನಾಡಿ ನಿಜವಾದ ಪಟೇಲರ ವ್ಯಕ್ತಿತ್ವವನ್ನ ಪರಿಚಯಿಸುವ ಪ್ರಯತ್ನವನ್ನು ಬಹಳಷ್ಟು ಮಂದಿ ಪೂರ್ವಗ್ರಹ ಪೀಡಿತವಾಗಿಯೇ ಮಾಡಿರುವುದಿಲ್ಲ.
ಇಂದು ಪಟೇಲರ 96ನೇ ಜನ್ಮದಿನವಾಗಿರುತ್ತದೆ.
– ಕೆ ಎಸ್ ನಾಗರಾಜ್, ಬೆಂಗಳೂರು




