ಜನ್ನಾ ಸನದಿ ಸಾಹಿತ್ಯ ಪ್ರಶಸ್ತಿಗೆ ಕೃತಿಗಳ ಆಹ್ವಾನ

3 years ago

#Invitation #Works #JannaSanadi #Sahitya #Award

ಬೆಳಗಾವಿ: ಬೆಳಗಾವಿಯ ಬಿ.ಎ.ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಉದಯೋನ್ಮುಖ ಬರಹಗಾರರಿಗೆ ನೀಡಲಾಗುವ 2023ನೇ ಸಾಲಿನ ರಾಜ್ಯಮಟ್ಟದ ಜನ್ನಾ ಸನದಿ ಸಾಹಿತ್ಯ ಪ್ರಶಸ್ತಿಗೆ ಕೃತಿಗಳನ್ನು ಆಹ್ವಾನಿಸಲಾಗಿದೆ. ಈ ಪ್ರಶಸ್ತಿಯು ₹ 5 ಸಾವಿರ ನಗದು, ಪ್ರಶಸ್ತಿಪತ್ರ ಮತ್ತು ಫಲಕಗಳನ್ನು ಒಳಗೊಂಡಿದೆ.

ಆಸಕ್ತರು 2022ರಲ್ಲಿ ಪ್ರಥಮ ಆವೃತ್ತಿಯಾಗಿ ಪ್ರಕಟವಾದ, 35 ವರ್ಷದೊಳಗಿನ ಬರಹಗಾರರ ಮಕ್ಕಳ ಕಥೆಗಳ ಪುಸ್ತಕದ ಮೂರು ಪ್ರತಿಗಳನ್ನು ಸಹ ಕಾರ್ಯದರ್ಶಿಗಳು, ಬಿ.ಎ.ಸನದಿ ಸಾಂಸ್ಕೃತಿಕ ಪ್ರತಿಷ್ಠಾನ, ರಾಣಿ ಚನ್ನಮ್ಮ ಸೊಸೈಟಿ, ಶ್ರೀನಗರ, ಬೆಳಗಾವಿ. ಈ ವಿಳಾಸಕ್ಕೆ ಅಕ್ಟೋಬರ್ 30ರೊಳಗೆ ಕಳುಹಿಸಬೇಕು ಎಂದು ಕೋರಲಾಗಿದೆ.

ನವೆಂಬರ್‌ನಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಮೊ: 8453500025

Leave a Reply