ಉಡುಪಿ: ಹನಿಟ್ರ್ಯಾಪ್ ಜಾಲವನ್ನು ಭೇದಿಸಿರುವ ಕುಂದಾಪುರ ನಗರ ಠಾಣಾ ಪೊಲೀಸರು ಮಹಿಳೆ ಸೇರಿ ಆರು ಆರೋಪಿಗಳನ್ನು ಬಂಧಿಸಿ 30 ಸಾವಿರ ನಗದು ಎರಡು ಕಾರುಗಳನ್ನು ಜಪ್ತಿ ಮಾಡಿದ್ದಾರೆ.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ನಾವುಂದ ಬಡಾಕೆರೆಯ ಸವದ್ ಅಲಿಯಾಸ್ ಅಚ್ಚು (28), ಗುಲ್ವಾಡಿ ಗಾಂಧಿಕಟ್ಟೆಯ ಸೈಪುಲ್ಲಾ(38), ಹಂಗಳೂರು ಗ್ರಾಮದ ಮೊಹಮ್ಮದ್ ನಾಸೀರ್ ಶರೀಫ್ (36), ಕುಂಭಾಶಿ ಮೂಡುಗೋಪಾಡಿ ಜನತಾ ಕಾಲೋನಿಯ ಅಬ್ದುಲ್ ಸತ್ತಾರ್ (23), ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಾಗೋಡಿಯ ಅಬ್ದುಲ್ ಅಝೀಝ್ (26) ಹಾಗೂ ಕುಂದಾಪುರ ಎಂ.ಕೋಡಿಯ ಆಸ್ಮಾ (43) ಬಂಧಿತ ಆರೋಪಿಗಳಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಎಸ್ಪಿ ಹರಿರಾಂ ಶಂಕರ್, ದೂರುದಾರ ಸಂದೀಪ್ ಕುಮಾರ್ ಸುಮಾರು 3 ತಿಂಗಳ ಹಿಂದೆ ಕುಂದಾಪುರಕ್ಕೆ ಬಂದಾಗ ಆರೋಪಿ ಸವದ್‌ನ ಪರಿಚಯವಾಗಿತ್ತು. ಮುಂದೆ ಆತನ ಸ್ನೇಹಿತರಾದ ಉಳಿದ ಆರೋಪಿಗಳ ಪರಿಚಯ ಕೂಡ ಆಗಿತ್ತು. ಇದೇ ವೇಳೆ ಸವದ್, ಆಸ್ಮಾ ಎಂಬ ಮಹಿಳೆಯನ್ನು ಪರಿಚಯ ಮಾಡಿಕೊಟ್ಟು, ಆಕೆಯ ಮೊಬೈಲ್ ನಂಬರ್ ನೀಡಿ. ಆಕೆಯೊಂದಿಗೆ ಲೈಂಗಿಕ ಸಂಪರ್ಕ ಮಾಡಬಹುದು ಎಂದು ತಿಳಿಸಿದ್ದ ಎಂದು ಹೇಳಿದರು.
ಸೆಪ್ಟೆಂಬರ್ 2ರ ಸಂಜೆ ವೇಳೆಗೆ ಮಹಿಳೆಗೆ ಸಂದೀಪ್ ಕರೆ ಮಾಡಿದ್ದು, ಆಕೆ ಅವರನ್ನು ಕುಂದಾಪುರಕ್ಕೆ ಬರಲು ತಿಳಿಸಿದ್ದಳು. ನಂತರ ಕೋಟೇಶ್ವರದ ಬಾಡಿಗೆ ಮನೆಗೆ ಇಬ್ಬರೂ ಹೋಗಿದ್ದರು. ಆ ಕೂಡಲೇ, ಉಳಿದ ಆರೋಪಿಗಳು ಆ ಮನೆಗೆ ಬಂದಿದ್ದಾರೆ. ಬಳಿಕ ಸಂದೀಪ್ ನನ್ನು ಕೂಡಿಹಾಕಿ, ರಾಡ್ ನಿಂದ ಹಲ್ಲೆ ಮಾಡಿ, ಅವರಿಗೆ ಹೆದರಿಸಿ ಎಟಿಎಂಗೆ ಕರೆದೊಯ್ದು 40 ಸಾವಿರ ವಿತ್ ಡ್ರಾ ಮಾಡಿಸಿಕೊಂಡಿದ್ದಲ್ಲದೆ, ಅವರ ಬಳಿಯಿದ್ದ 6 ಸಾವಿರ ರೂ. ಹಣವನ್ನೂ ಕಿತ್ತುಕೊಂಡಿದ್ದಾರೆ. ಅಲ್ಲದೆ, ಬೇರೆ ಖಾತೆಗಳಿಂದ ಪೋನ್ ಪೇಯಲ್ಲಿ ಸುಮಾರು 35 ಸಾವಿರ ರೂ. ವರ್ಗಾವಣೆ ಮಾಡಿಕೊಂಡಿದ್ದಾರೆ. ಅಲ್ಲದೆ, ಬೇರೆಯವರಿಗೆ ಈ ಬಗ್ಗೆ ಹೇಳಿದರೆ ಸಾಯಿಸುವುದಾಗಿ ಸಂದೀಪ್ ಗೆ ಹೆದರಿಸಿ, ಮನೆಯಿಂದ ಹೊರಗಡೆ ಕಳಿಸಿದ್ದಾರೆ ಎಂದು ಎಸ್ಪಿ ಮಾಹಿತಿ ನೀಡಿದರು.
ಈ ಬಗ್ಗೆ ಸಂತ್ರಸ್ತ ಕುಂದಾಪುರ ಠಾಣೆಗೆ ಬಂದು ದೂರು ನೀಡಿದ್ದು,ತಕ್ಷಣವೇ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಎಲ್ಲಾ ಆರೋಪಿಗಳನ್ನು ಕೋಟೇಶ್ವರ ಗ್ರಾಮದಲ್ಲಿ ವಶಕ್ಕೆ ಪಡೆದಿದ್ದು, ಬಂಧನ ಮಾಡಲಾಗಿದೆ. ಅಲ್ಲದೆ, ಕೃತ್ಯಕ್ಕೆ ಬಳಸಿದ ಎರಡು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ಹಿನ್ನೆಲೆ ಪರಿಶೀಲಿಸಿದಾಗ ನಾಸೀರ್ ಹಾಗೂ ಆಸ್ಮಾ ಮೇಲೆ ಈ ಹಿಂದೆಯೂ ವಂಚನೆ ಪ್ರಕರಣ ದಾಖಲಾಗಿರುವುದು ತಿಳಿದುಬಂದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದರು.



