ಬಾಗಲಕೋಟೆ: ತನ್ನ ಬಳಿ ಅಪಾರ ಹಣವಿದೆ ಎಂದು ಹೇಳಿ, ನಿಮ್ಮ ಪ್ರೊಫೈಲ್ ನನಗೆ ಇಷ್ಟವಾಗಿದ್ದು ಮದುವೆಯಾಗುವುದಾಗಿ ಮಹಿಳೆಯನ್ನು ನಂಬಿಸಿ 5.50 ಲಕ್ಷ ರೂಪಾಯಿ ಪಡೆದು ವಂಚಿಸಿದ್ದ ನೈಜೀರಿಯಾ ಪ್ರಜೆಯನ್ನು ಬಾಗಲಕೋಟೆ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
ಅಲಿವರ್ ವುಗುವೊ ಒಕಿಚಿಕು ಎಂಬ ವ್ಯಕ್ತಿ ಬಂಧಿತ ಆರೋಪಿ. ಬಂಧಿತನಿಂದ 4 ಮೊಬೈಲ್, 1 ಲ್ಯಾಪ್‌ಟಾಪ್, ಪಾಸ್‌ಪೋರ್ಟ್, ಅಮೆರಿಕನ್ ಡಾಲರ್ ಇರುವ ಬಂಡಲ್‌ಗಳನ್ನು ಜಪ್ತಿ ಮಾಡಲಾಗಿದೆ.
ಆರೋಪಿ ಅಲಿವರ್ ಇಳಕಲ್ ಮೂಲದ ಮಹಿಳೆಗೆ ಮದುವೆ ಮಾಡಿಕೊಳ್ಳುವುದಾಗಿ ಹೇಳಿ 5.50 ಲಕ್ಷ ರೂ. ಪಡೆದು ಮೋಸಮಾಡಿದ್ದು, ಮಹಿಳೆ ಇಳಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅನಂತರ ಮೋಸ ಪ್ರಕರಣ ಬಹಿರಂಗವಾಗಿತ್ತು.
ಮಹಿಳೆಯ ದೂರಿನ ಅನ್ವಯ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸಿಇಎನ್ ಪೊಲೀಸರು ಕಾರ್ಯಾಚರಣೆ ಕೈಗೊಂಡು ಮುಂಬೈನಲ್ಲಿದ್ದ ಆರೋಪಿಯನ್ನು ಬಂಧಿಸಿ ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಅಲಿವರ್ ವುಗುವೊ ಒಕಿಚಿಕು ಮ್ಯಾಟ್ರಿಮೋನಿ ಮೂಲಕ ಇಳಕಲ್ ಮೂಲದ ವಿಚ್ಛೇದಿತ ಸ್ನೇಹಾ (ಹೆಸರು ಬದಲಾಯಿಸಲಾಗಿದೆ) ಅವರನ್ನು ಅಮಿತ್ ದಾಸ್ ಹೆಸರಿನಲ್ಲಿ ಪರಿಚಯ ಮಾಡಿಕೊಂಡಿದ್ದ. ಲಂಡನ್‌ನಲ್ಲಿ ನಾನು ನೆಲೆಸಿದ್ದೇನೆ. ನನ್ನ ಬಳಿ ಲಕ್ಷಾಂತರ ರೂ. ದುಡ್ಡಿದೆ. ನಿಮ್ಮ ಪ್ರೊಫೈಲ್ ನನಗೆ ಇಷ್ಟವಾಯಿತು ಎಂದು ಹೇಳಿ ನಂಬಿಸಿದ್ದ. ಪ್ರೊಫೈಲಿನಲ್ಲಿ ಬೇರೆ ಫೋಟೋ ಹಾಕಿದ್ದರಿಂದ ಸ್ನೇಹಾ ಈತನ ಮಾತನ್ನು ನಂಬಿದ್ದರು.
ಲಂಡನ್‌ನಿಂದ ಒಂದು ಸಾವಿರ ಯುಎಸ್ ಡಾಲರ್ ತಂದಿದ್ದೇನೆ. ದೆಹಲಿ ಕಸ್ಟಮ್ಸ್ ಆಫೀಸ್‌ನಲ್ಲಿ ಹಣವನ್ನು ಜಪ್ತಿ ಮಾಡಿದ್ದಾರೆ. ಈ ಹಣವನ್ನು ಬಿಡಿಸಿಕೊಳ್ಳಲು ತುರ್ತಾಗಿ ಇಂಡಿಯನ್ ಕರೆನ್ಸಿ ಬೇಕಾಗಿದೆ ಎಂದು ಹೇಳಿದ್ದ. ಈತನ ಮಾತನ್ನು ಕೇಳಿ ಲಕ್ಷ ಲಕ್ಷ ಹಣವವನ್ನು ಸ್ನೇಹಾ ವರ್ಗಾಯಿಸಿದ್ದರು. ಹಣ ಖಾತೆಗೆ ಬಂದ ಬೆನ್ನಲ್ಲೇ ಆತ ಸಂಪರ್ಕ ಕಳೆದುಕೊಂಡಿದ್ದ.
ತಾನು ವಂಚನೆಗೆ ಒಳಗಾದ ವಿಚಾರ ಗೊತ್ತಾದ ನಂತರ 2024ರಲ್ಲಿ ಇಳಕಲ್ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಕೇಸ್ ಬಾಗಲಕೋಟೆ ಸಿಇಎನ್ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿತ್ತು. ಈ ಪ್ರಕರಣವನ್ನು ತನಿಖೆ ಚುರುಕುಗೊಳಿಸಿದ ಸಿಇಎನ್ ಪೊಲೀಸರು ಕಾರ್ಯಾಚರಣೆ ನಡೆಸಿ ನೈಜೀರಿಯನ್ ಪ್ರಜೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.




