ಪತ್ರಿಕಾ ಛಾಯಾಗ್ರಾಹಕ ಆರ್. ಕೆ. ನುಡಿ ನಮನ

1 year ago

ಧಾರವಾಡ: ಪತ್ರಿಕಾ ಛಾಯಾಗ್ರಾಹಕರಾಗಿದ್ದ ರಾಮಚಂದ್ರ ಕುಲಕರ್ಣಿ ನಿಧನರಾದ ಹಿನ್ನೆಲೆಯಲ್ಲಿ ಅವರ ಸ್ಮರಣೆಗಾಗಿ ನಗರದ ವಾರ್ತಾಭವನದಲ್ಲಿ ಪತ್ರಕರ್ತರಿಂದ ನುಡಿ ನಮನ ಕಾರ್ಯಕ್ರಮ ಜರುಗಿತು. ಮೌನ ಆಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಭೆಯಲ್ಲಿ ಹಿರಿಯ ಪತ್ರಕರ್ತರಾದ ಪುಂಡಲಿಕ  ಹಡಪದ, ಬಸವರಾಜ ಹೊಂಗಲ, ರವೀಶ ಪವಾರ, ಮಂಜುನಾಥ ಕವಳಿ ಅವರು, (ಆರ್.ಕೆ.) ರಾಮಚಂದ್ರ ಕುಲಕರ್ಣಿ ಅವರ ಬಗ್ಗೆ ಮಾತನಾಡಿ, ನುಡಿ ನಮನ ಸಲ್ಲಿಸಿದರು.

ಸಭೆಯಲ್ಲಿ ಪತ್ರಕರ್ತರಾದ ಧನ್ಯಪ್ರಸಾದ ಬಿ.ಜೆ., ಬಸವರಾಜ ಹಿರೇಮಠ, ಡಾ. ವಿಶ್ವನಾಥ್ ಕೋಟಿ, ರವಿ ಕಗ್ಗನ್ನವರ, ಎಸ್.ಎಫ್.ಮುನಸಿ, ಮಹಾಂತೇಶ ಕಣವಿ, ಉಳವನಗೌಡ ಪಾಟೀಲ, ಮಂಜು ಗಿರಿಯಾಲ, ಜಾವೀದ್ ಅದೋನಿ, ಡಿ.ವಿ.ಕಮ್ಮಾರ, ಪರಮೇಶ ಅಂಗಡಿ, ಮಂಜುನಾಥ ಯಡಹಳ್ಳಿ, ಶ್ರೀಧರ ಮುಂಡರಗಿ, ಛಾಯಾಗ್ರಾಹಕರಾದ ಬಿ.ಎಮ್.ಕೇದಾರನಾಥಸ್ವಾಮಿ. ಬಸವರಾಜ ಅಳಗವಾಡಿ, ಸದ್ದಾಂ ಮುಲ್ಲಾ, ಶಿವಲಿಂಗ ಪಾಟೀಲ, ಬಸವರಾಜ ಪಟಾತ್, ಗುರು ಕಟ್ಟಿಮನಿ, ಪ್ರಶಾಂತ ದಿನ್ನಿ, ರಾಹುಲ್ ಹೂಲಿ, ಹನುಮಂತ ಗುಡೆಣ್ಣನವರ, ವಿಠ್ಠಲ ಕರಡಿಗುಡ್ಡ, ಅಕ್ಷಯ ಕಮತಗಿ, ವಿಜೇತ ಹೊಸಮಠ ಮತ್ತು ವಾರ್ತಾ ಇಲಾಖೆಯ ಸಿಬ್ಬಂದಿಗಳಾದ ಮಲ್ಲಿಕಾರ್ಜುನ ಕಂಪಲಿ, ಎಮ್.ಎಸ್.ಚೋಪದಾರ, ಸಂಗಪ್ಪ ಯರಗುದ್ದಿ, ಶಿವಾನಂದ ಭೋವಿ, ವಾರ್ತಾ ಇಲಾಖೆ ಸಹಾಯಕ ವಾರ್ತಾಧಿಕಾರಿ ಡಾ. ಎಸ್.ಎಮ್. ಹಿರೇಮಠ ಮೊದಲಾದವರು ಭಾಗವಹಿಸಿದ್ದರು.

Leave a Reply