ವಿಜಯಪುರ: ವಿಜಯಪುರದ ಮೇ ಸಾಹಿತ್ಯ ಮೇಳ ಬಳಗದ ವತಿಯಿಂದ ಅಕ್ಟೋಬರ ೬ ರಂದು ವಿಜಾಪುರದಲ್ಲಿ ಹಮ್ಮಿಕೊಳ್ಳಲಾಗಿರುವ “ಜನಕಲಾ ಸಾಂಸ್ಕೃತಿಕ ಮೇಳ”ಕ್ಕೆ ದಲಿತ ಸಂಘಟನೆಗಳ ಮಹಾ ಒಕ್ಕೂಟವು ಬೆಂಬಲ ವ್ಯಕ್ತಪಡಿಸಿದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ವಿಜಾಪುರದ ಮನಗೂಳಿ ರಸ್ತೆಯಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಒಕ್ಕೂಟದ ರಾಜ್ಯ ಸಂಚಾಲಕರಾದ ಪರಶುರಾಮ ಲಂಬು ನೇತ್ರತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಕೊಳ್ಳಲಾಯಿತು.
ಮೇ ಸಾಹಿತ್ಯ ಮೇಳ ಬಳಗದ ಸದಸ್ಯ ಚೆನ್ನು ಕಟ್ಟಿಮನಿ ಮಾತನಾಡಿ, ಈ ಸಾಂಸ್ಕೃತಿಕ ಮೇಳದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಕಲಾ ತಂಡಗಳು ಭಾಗವಹಿಸಲಿದ್ದು ಪ್ರತಿ ಕಲಾತಂಡ ಬೇರೆ ಬೇರೆ ಕಲಾ ಪ್ರಕಾರಗಳಲ್ಲಿ ಪ್ರದರ್ಶನ ನೀಡಲಿವೆ. ನಂತರ ಸಂಜೆ ಬಸವ ಚಿಂತಕ, ಲಿಂಗಾಯತ ಧರ್ಮದ ಬಗ್ಗೆ ಆಳವಾದ ಅಧ್ಯಯನ ಮಾಡಿ ಮತಾಂಧರ ಕೈಯಿಂದ ಹತ್ಯೆಯಾದ ಎಂ ಎಂ ಕಲಬುರಗಿ ಅವರ ಕುರಿತ “ರಕ್ತವಿಲಾಪ” ನಾಟಕ ಪ್ರದರ್ಶನ ನಡೆಯಲಿದೆ. ಈ ಐತಿಹಾಸಿಕ ಮೇಳಕ್ಕೆ ಎಲ್ಲ ದಲಿತ ಸಂಘಟನೆಗಳು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಒಕ್ಕೂಟದ ರಾಜ್ಯ ಸಂಚಾಲಕ ಪರಶುರಾಮ ಲಂಬು ಸಂಪೂರ್ಣ ಬೆಂಬಲ ಸೂಚಿಸಿ ಮೇಳದ ಯಶಸ್ಸಿಗೆ ಸಹಕಾರ ನೀಡುವ ಭರವಸೆ ನೀಡಿದರು.
ಸಮತಾ ಸೈನಿಕ ದಳದ ಶಾಸ್ತ್ರೀ ಹೊಸಮನಿ, ದ್ರಾವಿಡ ಸೇನೆಯ ರಮೇಶ ಕೌಲಗಿ, ದಲಿತ ಸಂಘರ್ಷ ಸಮಿತಿ ಭೀಮ ಜ್ಯೋತಿ ಸಂಘಟನೆಯ ಗೋಪಿ ಚಲವಾದಿ, ಭೀಮ ಆರ್ಮಿಯ ಮತೀನಕುಮಾರ ದೇವಧರ, ಮಲ್ಲು ಜಾಲಗೇರಿ, ಭೀಮವಾದ ಸಂಘಟನೆಯ ಮಾರುತಿ ಬೂದಿಹಾಳ, ಯುವ ಬ್ರಿಗೇಡ್ ನ ವೀರೇಶ ವಾಲಿಕಾರ, ದಲಿತ ಮುಖಂಡರಾದ ಸೋಮು ರಣದೇವಿ, ಸುಖದೇವ ಕಾಂಬಳೆ, ಕೆಂಪೇಗೌಡ ಬಾಗೇವಾಡಿ, ಶ್ರೀಧರ, ಲೋಹಿತ, ಯಮನಪ್ಪ ಗುಣಕಿ, ಸುನೀಲ ಸೂರ್ಯವಂಶಿ, ಶ್ರೀಧರ ಹಾಲ್ಯಾಳ, ಅಜಯ ಬೋರಗಿ, ಆಕಾಶ ಕಲ್ಲವ್ವಗೋಳ ಹಾಗೂ ವಿವಿಧ ದಲಿತ ಮುಖಂಡರು ಭಾಗವಹಿಸಿ ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲ ಪೋಷಿಸಿದರು.




