ಭಾರತ ದೇಶದ ರಾಜಕಾರಣದಲ್ಲಿ ಸಜ್ಜನಿಕೆ ಮತ್ತು ಸೌಜನ್ಯದ ನಡವಳಿಕೆ ಹಾಗೂ ಸುಸಂಸ್ಕೃತ ರಾಜಕಾರಣದ ಸಂಸ್ಕೃತಿ ಮಾಯವಾಗುತ್ತಿರುವ ಸಂದರ್ಭದಲ್ಲಿ ಎಸ್ ಎಂ ಕೃಷ್ಣ ಅವರ ಅಗಲಿಕೆ ದೊಡ್ಡ ನಷ್ಟವಾಗಿದೆ.
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
ಎಸ್ ಎಂ ಕೃಷ್ಣ ಅವರು ಸಾಹಿತ್ಯ, ಕಲೆ, ಸಂಸ್ಕೃತಿಯಲ್ಲಿ ಅಪಾರವಾದ ಆಸಕ್ತಿಯನ್ನು ಹೊಂದಿದ್ದರು. ಸಂಗೀತದ ಕಾರ್ಯಕ್ರಮಗಳಿಗೆ ಸಾಮಾನ್ಯ ಪ್ರೇಕ್ಷಕರ ರೀತಿಯಲ್ಲಿ ಕುಳಿತು ಆಲಿಸುತ್ತಿದ್ದರು. ಕ್ರೀಡೆಯನ್ನ ಸಹ ಪ್ರೀತಿಸುತ್ತ ಬಂದಿದ್ದ ಇವರು ವಿಶ್ವ ಮಟ್ಟದ ಪಂದ್ಯಾವಳಿಗಳನ್ನು ವೀಕ್ಷಿಸಲು ವಿದೇಶಗಳಿಗೂ ಹೋಗುತ್ತಿದ್ದರು.
ಬೆಂಗಳೂರು ನಗರವನ್ನು ವಿಶ್ವದ ಮಾಹಿತಿ ತಂತ್ರಜ್ಞಾನದ ರಾಜಧಾನಿಯನ್ನಾಗಿ ಮಾಡುವಲ್ಲಿ ಇವರ ಶ್ರಮ ಅಪಾರವಾಗಿದೆ. ಆಡಳಿತಕ್ಕೆ ಮಾಹಿತಿ ತಂತ್ರಜ್ಞಾನದ ಸ್ಪರ್ಶವನ್ನು ಕೊಟ್ಟಂತಹ ಇವರು ವಿಶೇಷವಾಗಿ ಬಿಬಿಎಂಪಿ, ಬಿಡಿಎ, ಕಂದಾಯ ಇಲಾಖೆಗಳಲ್ಲಿ ಇದರ ಬಳಕೆಯನ್ನು ಹೆಚ್ಚು ಹೆಚ್ಚು ಮಾಡುತ್ತ ಜನರಿಗೆ ದಾಖಲೆಗಳನ್ನು ಪಡೆದುಕೊಳ್ಳಲು ಅನುಕೂಲವನ್ನು ಮಾಡಿ ಕೊಟ್ಟರು.
ಬಿಸಿ ಊಟದ ಇವರ ಯೋಜನೆ ಇಂದು ರಾಷ್ಟ್ರದ ಕಾರ್ಯಕ್ರಮವಾಗಿದೆ. ಯಶಸ್ವಿನಿ ಆರೋಗ್ಯ ಯೋಜನೆ ರಾಷ್ಟ್ರದ ಯೋಜನೆಯಾಗಿದೆ. ಸ್ತ್ರೀ ಶಕ್ತಿ ಸಂಘಟನೆಯ ಕಾರ್ಯಕ್ರಮವನ್ನು ಸಹ ಇಂದು ಬೇರೆ ರೂಪದಲ್ಲಿ ರಾಷ್ಟ್ರದಲ್ಲಿ ಜಾರಿಗೊಳಿಸಲಾಗುತ್ತಿದೆ. ಭೂಮಿ ಯೋಜನೆ ಸಹ ರಾಷ್ಟ್ರಮಟ್ಟದಲ್ಲಿ ಬಳಕೆಯಾಗುತ್ತಿದೆ.
ಯಾರೊಂದಿಗೂ ಕಠಿಣವಾಗಿ ನಡೆದುಕೊಳ್ಳದೆ, ಯಾರ ಮನಸ್ಸಿಗೂ ನೋವಾಗುವ ರೀತಿಯಲ್ಲಿ ಮಾತನಾಡದೆ, ಟಿಕೆಗಳಿಗೂ ಸಹ ಒಂದು ಇತಿಮಿತಿ ಹಾಕಿಕೊಂಡಿದ್ದರು. ತಮ್ಮ ಮಾತಿನಿಂದ ರಾಜಕೀಯ ಟೀಕೆಗಳಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕೂಡಲೇ ಕ್ಷಮೆ ಕೇಳುವಂತಹ ಸಂಪ್ರದಾಯವನ್ನ ರೂಪಿಸಿಕೊಂಡಿದ್ದರು.
ಸಾರ್ವಜನಿಕ ಸಮಾರಂಭಗಳಲ್ಲಿ ಅವರ ಭಾಷಣಗಳು ಎಲ್ಲಿಯೂ ಸಹ ರಾಜಕೀಯ ಪ್ರೇರಿತವಾಗಿರುತ್ತಿರಲಿಲ್ಲ. ಆಯಾ ಸಮಾರಂಭಕ್ಕೆ ಬೇಕಾದ ವಿಚಾರಗಳಿಗೆ ಮಾತ್ರ ಮಾತುಗಳು ಸೀಮಿತವಾಗಿರುತ್ತಿತ್ತು.
ಸಂಕಷ್ಟದಲ್ಲಿ ಇದ್ದಂತಹ ಸಮಯದಲ್ಲಿ ವಿರೋಧ ಪಕ್ಷದ ನಾಯಕರುಗಳಿಗೂ ಸಹ ಉದಾರ ಮನಸ್ಸಿನಿಂದ ಸಹಾಯವನ್ನ ಮಾಡುತ್ತಾ ಮಾನವೀಯತೆಯನ್ನು ಮೆರೆದಂತಹ ಅನೇಕ ಉದಾಹರಣೆಗಳಿವೆ.
ಕರ್ನಾಟಕದ ರಾಜಕಾರಣಕ್ಕೆ ರಾಷ್ಟ್ರಮಟ್ಟದಲ್ಲಿ ಮೊದಲಿನಿಂದಲೂ ಒಂದು ವಿಶೇಷವಾದ ಗೌರವವಿದೆ. ಇದಕ್ಕೆ ಕಾರಣ ಬಹುಶಃ ಎಸ್ ಎಂ ಕೃಷ್ಣರಂತಹ ಕೆಲವೇ ಕೆಲವು ಸುಸಂಸ್ಕೃತ ರಾಜಕಾರಣಿಗಳ ಮೂಲಕ ಇರಬಹುದು.
- ಕೆ ಎಸ್ ನಾಗರಾಜ್, ಬೆಂಗಳೂರು




