ಸರ್ಕಾರ ಈಗ ಯೋಚಿಸಿ ಕ್ರಮ ಕೈಗೊಳ್ಳಬೇಕು. ಇಲ್ಲದೇ ಇದ್ದರೆ ಕರಾವಳಿ ಶಾಶ್ವತವಾಗಿ ಬಿಜೆಪಿಯ ಕೈಯ್ಯಲ್ಲಿರುತ್ತದೆ.
- ವ್ಯಕ್ತಿಯನ್ನು ಗುರುತಿಸಿದರೆ ಸಮಾಜವನ್ನೇ ಗುರುತಿಸಿದಂತೆ: ಡಾ. ಎ ಆರ್ ಗೋವಿಂದಸ್ವಾಮಿ
- ಸಂವಿಧಾನ ಪೀಠಿಕೆ ದೇಶದ ಆತ್ಮವಿದ್ದಂತೆ: ಆದಿತ್ಯ ಚಟರ್ಜಿ
- ಕುಸಿಯುತ್ತಿರುವ ಪ್ರಜಾಪ್ರಭುತ್ವದ ವ್ಯಾಪ್ತಿ ಮತ್ತು ದೀರ್ಘಾವಧಿ ಪ್ರಧಾನಿಯ ಸಾಧನೆಗಳು
- ಜೀರಾ ರೈಸ್, ಘೀ ರೈಸ್ ಮತ್ತು ಲೆಮನ್ ರೈಸ್ ಮಾಡುವ ಸರಳ ವಿಧಾನ
- ಸಮಾಧಾನ್ ಸಮಾರೋಹ್ ಯಶಸ್ವಿಗೊಳಿಸಿ: ಡಾ.ಶಾಲಿನಿ ರಜನೀಶ್
ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸಿದರೆ ಕೋಮುವಾದವನ್ನು ಸೋಲಿಸಿದಂತಲ್ಲ ಎಂದು ಕಾಂಗ್ರೆಸ್ ಸರ್ಕಾರ ಅರ್ಥ ಮಾಡಿಕೊಳ್ಳಬೇಕು.
ಹಿಂದೂ ಹಿತರಕ್ಷಣಾ ಸಮಿತಿ ಎಂಬ ಕೋಮುವಾದಿ ಸಂಘಟನೆಯು ಇಂದು ಮಂಗಳೂರಿನಲ್ಲಿ ಕೋಮುಪ್ರಚೋದಕ ಸಭೆ, ಜಾಥ ನಡೆಸಿತು. ಈ ಸಭೆಗೆ ಮಂಗಳೂರು ಪೊಲೀಸರು ಅಧಿಕೃತ ಅನುಮತಿ ನೀಡಿದ್ದರು. ಕಮ್ಯುನಿಷ್ಟರು ನಡೆಸಿದ “ರಸ್ತೆ ಗುಂಡಿ ವಿರೋಧಿಸಿ ಬಿಜೆಪಿ ಶಾಸಕ, ಸಂಸದರ ವಿರುದ್ದದ ಪ್ರತಿಭಟನೆ”ಗೆ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿತ್ತು. ಅನುಮತಿ ಇಲ್ಲದೆಯೆ ಬಿಜೆಪಿ ಶಾಸಕರ ವಿರುದ್ದ ಪ್ರತಿಭಟಿಸಿದ್ದ ಮುನೀರ್ ಕಾಟಿಪಳ್ಳ ವಿರುದ್ದ ಎಫ್ಐಆರ್ ದಾಖಲಾಗಿತ್ತು.
ಹಿಂದೂ ಹಿತರಕ್ಷಣಾ ಸಮಿತಿ ಸಭೆ ನಡೆಸಿದ ಬಳಿಕ ಈಗ ಅನುಮತಿಯ ಷರತ್ತು ಉಲ್ಲಂಘಿಸಿದ ಆರೋಪದಲ್ಲಿ ಎಫ್ಐಆರ್ ಮಾಡಿದ್ದಾರೆ. ವಿಷಯ ಇರುವುದು, ಕಮ್ಯುನಿಷ್ಟರ ಜನಪರ ಪ್ರತಿಭಟನೆಗೆ ಕೊಡದ ಅನುಮತಿ, ಹಿಂದೂ ಸಂಘಟನೆಗಳ ಕೋಮುವಾದಿ ಪ್ರತಿಭಟನೆಗೆ ನೀಡಿದ್ದು ಹೇಗೆ ? ಕಮ್ಯುನಿಸ್ಟ್ ನಾಯಕ ಮುನೀರ್ ಕಾಟಿಪಳ್ಳ ಮೇಲೆ ಎಫ್ಐಆರ್ ಹಾಕಿದಂತೆ ಕಲ್ಲಡ್ಕ ಪ್ರಭಾಕರ ಭಟ್, ವೇದವ್ಯಾಸ ಕಾಮತ್ ಸೇರಿದಂತೆ ನಾಯಕರ ವಿರುದ್ದ ಎಫ್ಐಆರ್ ದಾಖಲಿಸುತ್ತಾರೆಯೇ ?
ಮುನೀರ್ ಕಾಟಿಪಳ್ಳ ನೇತೃತ್ವದಲ್ಲಿ ನಡೆದ ಪ್ರತಿಭಟನೆ ಕರಾವಳಿಯ ಅಭಿವೃದ್ದಿಗೆ ಸಂಬಂಧಿಸಿದ್ದು. ಅದು ಸಂವಿಧಾನದ ಕಲಂ 51A ಯಂತೆ ಪ್ರಜ್ಞಾವಂತ ನಾಗರಿಕರು ಧ್ವನಿ ಎತ್ತಲೇಬೇಕಾದ ಸಂವಿಧಾನದತ್ತ ಮೂಲಭೂತ ಕರ್ತವ್ಯವಾಗಿತ್ತು. ಅಂತಹ ಕೆಲಸಕ್ಕೆ ಮಂಗಳೂರು ಪೊಲೀಸ್ ಇಲಾಖೆ ಅನುಮತಿ ನಿರಾಕರಿಸುತ್ತದೆ.
ಹಿಂದೂ ಹಿತರಕ್ಷಣಾ ಸಮಿತಿ ಇಂದು ನಡೆಸಿದ ಬೃಹತ್ ಕೇವಲ ಕೋಮು ಪ್ರಚೋದನೆ ಮಾಡಬೇಕು ಎಂಬ ಉದ್ದೇಶದಿಂದ ಕೂಡಿದೆಯಷ್ಟೆ. ಪ್ಯಾಲಿಸ್ತೇನ್ ಪರವಾಗಿನ ಕಮ್ಯೂನಿಷ್ಟರ ಪ್ರತಿಭಟನೆ ಮಾನವೀಯ ಕಾರಣಕ್ಕಾಗಿ ಇತ್ತೇ ವಿನಹ ಅದರಲ್ಲಿ ಧರ್ಮಧ್ವೇಷದ ಬಣ್ಣವಿರಲಿಲ್ಲ. ಯಾವ ಪ್ರತಿಭಟನೆಗೆ ಅನುಮತಿ ನೀಡಬೇಕು, ಯಾವ ಪ್ರತಿಭಟನೆಗೆ ಅನುಮತಿ ನೀಡಬಾರದು ಎಂಬ ಕಾಮನ್ ಸೆನ್ಸ್ ಪೊಲೀಸರಿಗೆ ಇರಬೇಕಿತ್ತು.
ಪೊಲೀಸ್ ಕಮಿಷನರ್ ಅನುಪಮ ಅಗರ್ವಾಲ್ ಕರಾವಳಿಯ ಸೌಹಾರ್ದತೆಗೆ ಧಕ್ಕೆ ತರುತ್ತಿದ್ದಾರೆ. ಕೋಮುವಾದಿಗಳ ಪ್ರಯೋಗಗಳಿಗೆ ಪೊಲೀಸ್ ಇಲಾಖೆ ರಹದಾರಿ ಒದಗಿಸಿಕೊಡುತ್ತಿದೆ. ಸರ್ಕಾರ ಈಗ ಯೋಚಿಸಿ ಕ್ರಮ ಕೈಗೊಳ್ಳಬೇಕು. ಇಲ್ಲದೇ ಇದ್ದರೆ ಕರಾವಳಿ ಶಾಶ್ವತವಾಗಿ ಬಿಜೆಪಿಯ ಕೈಯ್ಯಲ್ಲಿರುತ್ತದೆ.
ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸಿದರೆ ಕೋಮುವಾದವನ್ನು ಸೋಲಿಸಿದಂತಲ್ಲ ಎಂದು ಕಾಂಗ್ರೆಸ್ ಸರ್ಕಾರ ಅರ್ಥ ಮಾಡಿಕೊಳ್ಳಬೇಕು.
– ನವೀನ್ ಸೂರಿಂಜೆ, ಹಿರಿಯ ಪತ್ರಕರ್ತರು


