ಬೆಳಗಾವಿ: ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರು ಆಧುನಿಕ ಕರ್ನಾಟಕದ ಶಿಲ್ಪಿ. ರಾಜ್ಯದ ಸಮಗ್ರ ಅಭಿವೃದ್ಧಿಯ ಹರಿಕಾರರಾಗಿದ್ದಾರೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ವಿಧಾನಸಭೆಯಲ್ಲಿ ತಿಳಿಸಿದರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಮಾಜಿ ಸಿ ಎಂ ಎಸ್ ಎಂ ಕೃಷ್ಣ ಸಾವಿಗೆ ಸಂತಾಪ ಸೂಚಿಸಿ ಮಾತನಾಡಿದ ಅವರು, ಕೃಷ್ಣ ಅವರ ಸಾವು ನನಗೆ ದುಃಖ ತರಲಿಲ್ಲ, ಸಂತೋಷ ತಂದಿದೆ. ಅವರು ಅಷ್ಟು ಅರ್ಥಪೂರ್ಣವಾಗಿ ಬದುಕಿದವರು ಎಂದು ಭಾವುಕರಾದರು.
ಪ್ರತಿಯೊಬ್ಬರೂ ಹುಟ್ಟಿದ ಮೇಲೆ ಒಂದಲ್ಲೊಂದು ದಿನ ಸಾಯಲೇಬೇಕು. ಎಸ್ ಎಂ ಕೃಷ್ಣ ಅವರು ತೀರಿಕೊಳ್ಳುವ ಕ್ಷಣಕ್ಕೆ ನಾನು ಇರಲಿಲ್ಲ. ಅವರು 94 ವರ್ಷಗಳ ಕಾಲ ಅರ್ಥಪೂರ್ಣವಾಗಿ ಬದುಕಿದರು. ಅವರ ಭಾಷೆ ಶೈಲಿ, ಉಡುಗೆ ತೊಡುಗೆ, ಆಡಳಿತ ಎಲ್ಲವೂ ಶಿಸ್ತುಬದ್ಧವಾಗಿತ್ತು ಎಂದರು.
ಎಸ್ ಎಂ ಕೃಷ್ಣ ಅವರೊಂದಿಗೆ ಕೆಲವು ವಿಚಾರವಾಗಿ ಭಿನ್ನಾಭಿಪ್ರಾಯ ಇದ್ದಿದ್ದು ನಿಜ. ಅದೆಲ್ಲಕ್ಕೂ ಮೀರಿ ನನ್ನ ಅವರ ನಡುವಿನ ಸಂಬಂಧ ತಂದೆ-ಮಗನಂತಿತ್ತು. ಕೃಷ್ಣ ಅವರು ನಮಗೆ ಆದರ್ಶ ಬಿಟ್ಟು ಹೋಗಿದ್ದಾರೆ, ಸಾರ್ವಜನಿಕವಾಗಿ ರಾಜಕಾರಣಿಯಾಗಿ ಹೇಗೆ ಆಡಳಿತ ನಡೆಸಬೇಕು ಎಂಬುದಕ್ಕೆ ಅವರು ಮಾದರಿಯಾಗಿದ್ದರು, ಮಾರ್ಗದರ್ಶಕರಾಗಿದ್ದರು ಎಂದರು.
ಕೃಷ್ಣ ಅವರ ಅಧಿಕಾರಾವಧಿಯಲ್ಲಿ ರಾಜ್ಯದ ಬಜೆಟ್ 26 ಸಾವಿರ ಕೋಟಿ ಇತ್ತು, ಈಗ ಅದು 3.50 ಲಕ್ಷ ಕೋಟಿಯಾಗಿದೆ. ಅಂತಹುದರಲ್ಲೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಮೆಟ್ರೋ ರೈಲು ಇನ್ನಿತರ ಹಲವು ಯೋಜನೆಗಳಿಗೆ ಕಾರಣೀಭೂತರಾಗಿದ್ದಾರೆ ಎಂದರು.
ಕೃಷ್ಣ ಅವರ ಶಿಷ್ಯನಾಗಿ ಸಂಬಂಧಿಯಾಗಿ ಜೊತೆಯಲ್ಲಿ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ಬಂಗಾರಪ್ಪ ಅವರ ಬಳಿ ವಿದ್ಯಾರ್ಥಿ ನಾಯಕನಾಗಿ ಬಂದ ನಾನು ಕೃಷ್ಣ ಅವರ ಗರಡಿ ಸೇರಿದೆ. ಅಲ್ಲಿಂದ ರಾಜಕಾರಣದಲ್ಲಿ ಇಲ್ಲಿಯವರೆಗೆ ಬರಲು ಕೃಷ್ಣ ಅವರೇ ಕಾರಣರು ಎಂದರು.




