ರಾಮನಗರ: ಶ್ರೀಕಾರಯ್ಯ ಬಿಲ್ಲಯ್ಯ ಸೇವಾ ಟ್ರಸ್ಟ್ (ರಿ), ತಟ್ಟೆಕೆರೆ ರಾಮನಗರ ಜಿಲ್ಲೆರವರಿಂದ ತಟ್ಟೆಕೆರೆಯ ಚಿಕ್ಕಮಳಿಗೆ ಕಲ್ಲು, ಹಾರೋಹಳ್ಳಿ ಆನೇಕಲ್ ಮುಖ್ಯರಸ್ತೆಯಲ್ಲಿನ ಬೆಟ್ಟದ ಮೇಲೆ ದೇಶದ ಬೃಹತ್ ಬಂಜಾರರ ಕುಲಗುರು ಶ್ರೀಸಂತಸೇವಾಲಾಲ್ ಹಾಗೂ ಹಾತಿರಾಂ ಬಾವಾಜಿ ಮತ್ತು ಕಾರಯ್ಯ ಬಿಲ್ಲಯ್ಯರವರ ಬೃಹತ್ ಎತ್ತರದ ವಿಗ್ರಹಗಳ ಪ್ರತಿಷ್ಠಪನೆಗಾಗಿ ಬಂಜಾರ ಸಮುದಾಯದ ಚಿಂತಕರು ಹಾಗೂ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ಎ.ಆರ್. ಗೋವಿಂದಸ್ವಾಮಿ ಅಡಿಗಲ್ಲು ಹಾಕಿದರು.
ಇದೇ ವೇಳೆ ಮಾತನಾಡಿದ ಡಾ.ಎ.ಆರ್. ಗೋವಿಂದಸ್ವಾಮಿ, ಈ ಬಂಜಾರರ ಪುರಾತನ ಧಾರ್ಮಿಕ ಕ್ಷೇತ್ರವನ್ನು ದೇಶದ ಮಾದರಿ ಸಾಂಸ್ಕೃತಿಕ ಹಾಗೂ ಶ್ರದ್ಧಾ, ಧಾರ್ಮಿಕಕ್ಷೇತ್ರ ಹಾಗೂ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲಾಗುವುದು. ಇಲ್ಲಿ ಉನ್ನತ ಶೈಕ್ಷಣಿಕ ತರಬೇತಿ ಕೇಂದ್ರ,ಅರಿವು, ಜಾಗೃತಿ, ಕೇಂದ್ರ, ಬಡವರಿಗೆ ವಿವಾಹ ಭವನ, ಬಂಜಾರ ಜಾನಪದ ಸಂಗ್ರಹ ಕೇಂದ್ರವಾಗಿ ಸಹ ಅಭಿವೃದ್ಧಿಪಡಿಸುವ ನೀಲನಕ್ಷೆ ಮಾಡಲಾಗಿದೆ. ಈ ಸ್ಥಳವನ್ನುಸರ್ಕಾರದಿಂದ ಟ್ರಸ್ಟ್ ಹೆಸರಿನಲ್ಲಿ ಪಡೆಯಲು ಕ್ರಮ ವಹಿಸಲಾಗುತ್ತಿದೆ ಎಂದರು.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ಸಮಾರಂಭದಲ್ಲಿ ಟ್ರಸ್ಟ್ ನ ಅಧ್ಯಕ್ಷರಾದ ಅನುಸೂಯಬಾಯಿ ಹಾಗೂ ಟ್ರಸ್ಟ್ ಪಧಿಕಾರಿಗಳಾದ ಡಾ.ಶಿವಣ್ಣನಾಯಕ, ಧರ್ಮದರ್ಶಿ ಶ್ರೀಶ್ಯಾಮ್ರಾವ್ ಸ್ವಾಮೀಜಿ,ಶ್ರೀರಾಮನಾಯಕ್, ಡಾ.ಕಸನೀಯ ನಾಯಕ್, ವೆಂಕಟೇಶನಾಯಕ್ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.




