ಮೈಸೂರು ವಿಶ್ವವಿದ್ಯಾಲಯ ಮಹಿಳಾ ವಾಲಿಬಾಲ್ ತಂಡ ಜಯಭೇರಿ, ಕರ್ನಾಟಕ ಪಾಲಿಗೆ ವಾಜಪೇಯಿ ಕಪ್-2021
ಬೆಂಗಳೂರು: ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ, ಶಂಕರಮಠದ ಸ್ವಾಮಿ ವಿವೇಕಾನಂದ ಕ್ರೀಡಾಂಗಣದಲ್ಲಿ ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿರವರ 97ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ 19ನೇ ವರ್ಷದ ವಾಜಪೇಯಿ ಕಪ್ ಹೊನಲು ಬೆಳಕಿನ ಪುರುಷ ಮತ್ತು ಮಹಿಳೆಯರ ಪಂದ್ಯಾವಳಿ ಐದನೇಯ ದಿನದ ರಾಷ್ಟೀಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಇಂದು ಮಹಿಳಾ ವಾಲಿಬಾಲ್ ತಂಡದ ಫೈನಲ್ .
ವಾಲಿಬಾಲ್ ಮಹಿಳಾ ತಂಡ ಮೈಸೂರು ವಿಶ್ವವಿದ್ಯಾಲಯ ಮತ್ತು ಎಸ್.ಆರ್.ಎಮ್. ವಿಶ್ವವಿದ್ಯಾಲಯ, ತಮಿಳುನಾಡು ನಡುವೆ ಐದು ಸೆಟ್ ನಲ್ಲಿ ನಡುವೆ ಬಾರಿ ಪೈಪೋಟಿ ನಡೆಯಿತು. ಮೊದಲ ಎರಡು ಸೆಟ್ ಮೈಸೂರು ವಿಶ್ವವಿದ್ಯಾಲಯ ಸೋತರು ನಂತರ ಸತತ ಮೂರು ಸೆಟ್ ಗಳನ್ನು ಜಯಗಳಿಸಿ ವಾಜಪೇಯಿ ಕಪ್ ಮುಡಿಗೇರಿಸಿ ಕೊಂಡಿತು.
ಮೈಸೂರು ವಿಶ್ವವಿದ್ಯಾಲಯ ಪರ ಲಾವಣ್ಯ ,ನೀತ್ಯಾ ,ಅರ್ಪಿತ, ಸ್ನೇಹ, ತಮಿಳುನಾಡು ಪರ ನಾಯಕಿ ಅಥಿತಿರಾಯ್, ಪೂಜಾ ಎಲಿಮತಿ ಉತ್ತಮ ಆಟವಾಡಿದರು. ಚಾಣಕ್ಷತಂತ್ರ, ಬಲಿಷ್ಠ ಹೊಡೆತ ಮತ್ತು ಎದುರಾಳಿ ಹೊಡೆತವನ್ನ ರಕ್ಷಣಾತ್ಮಕ ಆಟವಾಡಿದ ಮೈಸೂರು ವಿಶ್ವವಿದ್ಯಾಲಯ ತಂಡ ಮೊದಲನೇ ಸ್ಥಾನ ಪಡೆಯಿತು. ದ್ವೀತಿಯ ಸ್ಥಾನ ಎಸ್.ಆರ್.ಎಮ್. ವಿಶ್ವವಿದ್ಯಾಲಯ, ತೃತೀಯ ಸ್ಥಾನ ಭಾರತಿಯಾರ್ ವಿಶ್ವವಿದ್ಯಾಲಯ ಗಳಿಸಿದವು.
ಪ್ರಥಮ ಸ್ಥಾನ ಗಳಿಸಿದ ಮೈಸೂರು ವಿಶ್ವವಿದ್ಯಾಲಯ ಮಹಿಳಾ ತಂಡಕ್ಕೆ 50 ಸಾವಿರ ನಗದು ಪುರಸ್ಕಾರ, ದ್ವೀತಿಯ ಸ್ಥಾನ ಪಡೆದ ಎಸ್.ಆರ್.ಎಮ್. ಮಹಿಳಾ ತಂಡಕ್ಕೆ 20 ಸಾವಿರ ನಗದು ಪುರಸ್ಕಾರ ನೀಡಲಾಯಿತು.
ಭಾರತ ವಾಲಿಬಾಲ್ ತಂಡದ ನಾಯಕ ಕಾರ್ತಿಕ್ ರವರಿಗೆ ಮತ್ತು ಅಂತರಾಷ್ಟೀಯ ಈಜುಗಾರ್ತಿ ರಿಥಿಮ ವಿರೇಂದ್ರರವರಿಗೆ ಕ್ರೀಡಾಂಗಣದಲ್ಲಿ ಸನ್ಮಾನಿಸಲಾಯಿತು.
ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ, ಕರ್ನಾಟಕ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷ, ಮಾಜಿ ಉಪಮೇಯರ್ ಎಸ್.ಹರೀಶ್, ಮಾಜಿ ಉಪಮೇಯರ್ ಹೇಮಲತಾ ಗೋಪಾಲಯ್ಯ, ಮಾಜಿ ಮಹಾನಗರ ಪಾಲಿಕೆ ಸದಸ್ಯ ರಾಜೇಂದ್ರ ಕುಮಾರ್, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪುರುಷೋತ್ತಮ, ವಾಲಿಬಾಲ್ ಹೊಡೆಯುವ ಮೂಲಕ ಮಹಿಳಾ ತಂಡಕ್ಕೆ ಶುಭ ಕೋರಿದರು.




