ವಾಜಪೇಯಿ ಕಪ್ ಆರನೇಯ ದಿನದ ಪಂದ್ಯಾವಳಿ

4 years ago

ಕೇರಳ ಎಂ.ಜಿ. ವಿಶ್ವವಿದ್ಯಾಲಯ ಪುರುಷರ ವಾಲಿಬಾಲ್ ತಂಡ ಪ್ರಥಮ ಸ್ಥಾನ, ಎಸ್.ಡಿ.ಎಮ್.ಉಜಿರೆ ಕರ್ನಾಟಕ ದ್ವೀತಿಯ ಸ್ಥಾನ

ಬೆಂಗಳೂರು: ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ, ಶಂಕರಮಠದ ಸ್ವಾಮಿ ವಿವೇಕಾನಂದ ಕ್ರೀಡಾಂಗಣದಲ್ಲಿ  ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿರವರ 97ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ 19ನೇ ವರ್ಷದ ವಾಜಪೇಯಿ ಕಪ್ ಹೊನಲು ಬೆಳಕಿನ ಪುರುಷ ಮತ್ತು ಮಹಿಳೆಯರ ಪಂದ್ಯಾವಳಿ ಆರನೇಯ ದಿನದ ರಾಷ್ಟೀಯ ಮಟ್ಟದ ವಾಲಿಬಾಲ್ ಪಂದ್ಯಾವಳಿ ಇಂದು ಪುರುಷರ ವಾಲಿಬಾಲ್ ತಂಡದ ಫೈನಲ್ ಪಂದ್ಯ ನಡೆಯಿತು.

ಕರ್ನಾಟಕದ ಪರ ರೋಹನ್ ಶಶಾಂಕ್, ಸೈಯದ್, ಮೆಲವಿನ್ ಪ್ರಭಾಸ್, ಮಾನಸ್ ಮತ್ತು ಕೇರಳ ಪರ ಹೇಮಂತ್, ರೀತೂ ಹರ್ಷದ್ ಉತ್ತಮ ಪ್ರದರ್ಶನ ನೀಡಿದರು. ಬೆಂಗಳೂರು ವಿಶ್ವವಿದ್ಯಾಲಯ ಮೂರನೇಯ ಸ್ಥಾನ ಪಡೆಯಿತು.

ಪುರುಷರ ವಾಲಿಬಾಲ್ ತಂಡ ಎರಡೂವರೆ ಗಂಟೆಗಳ ಕಾಲ ಸೆಣಸಾಟ ನಡೆಯಿತು. ಕೇರಳ ಕೊಟ್ಟಯಂ ಸಂಘಟಿತ ಹೋರಾಟದಿಂದ 3-1ಸೆಟ್ ಗಳಿಂದ 2021ವಾಜಪೇಯಿ ಕಪ್ ಕೇರಳ ಪಾಲಾಯಿತು. ಕರ್ನಾಟಕ ದ್ವೀತಿಯ ಸ್ಥಾನಕ್ಕೆ ತೃಪ್ತಿಪಟ್ಟಿತು.  ಪ್ರಥಮ ಸ್ಥಾನ ಪಡೆದಿವರಿಗೆ 40 ಸಾವಿರ, ದ್ವೀತಿಯ ಸ್ಥಾನ 20 ಸಾವಿರ ಮತ್ತು ತೃತೀಯ ಸ್ಥಾನ ಪಡೆದ ತಂಡಕ್ಕೆ 10 ಸಾವಿರ ನಗದು ಪುರಸ್ಕಾರ ನೀಡಲಾಯಿತು. ಉತ್ತಮ ಆಟಗಾರ ರೋಹನ್ ಮತ್ತು ಉತ್ತಮ ಪಾಸರ್ ಜಸ್ ವಿನ್ ಮತ್ತು ಉತ್ತಮ ದಾಳಿಕಾರ ಹೇಮಂತ್ ಅವರಿಗೆ ಪ್ರಶಸ್ತಿ ನೀಡಲಾಯಿತು.

Leave a Reply