ಬೆಂಗಳೂರು: ರಾಜ್ಯಮಟ್ಟದ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ 2021ನೇ ಸಾಲಿನ ಕ್ರೀಡಾಕೂಟವನ್ನು ಕರ್ನಾಟಕ ರಾಜ್ಯ ಅಂಗವಿಕರ ಕ್ರೀಡಾ ಸಂಸ್ಥೆಯ ವತಿಯಿಂದ ಇದೇ ತಿಂಗಳ 27ರಂದು ಸೈಫಿಂಚ್ ಸ್ಪೋರ್ಟ್ಸ್ ಸೆಂಟರ್, ಜೆ.ಪಿ.ನಗರ, ಬೆಂಗಳೂರು ಇಲ್ಲಿ ಆಯೋಜಿಸಲಾಗಿದೆ. ಈ ಕುರಿತು ಕರ್ನಾಟಕ ರಾಜ್ಯ ಅಂಗವಿಕಲರ ಕ್ರೀಡಾ ಸಂಸ್ಥೆ ವತಿಯಿಂದ ಪ್ರೆಸ್ ಕ್ಲಬ್ ಆವರಣದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾಹಿತಿ ನೀಡಲಾಯಿತು.
ಈ ಕ್ರೀಡಾಕೂಟವು ಹಲವಾರು ವಿಶೇಷತೆಗಳಿಂದ ಕೂಡಿದ್ದು 4ನೇ ರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ಗೆ ಆಟಗಾರರನ್ನು ಆಯ್ಕೆ ಮಾಡಲಾಗುವುದು. ಕ್ರೀಡಾಕೂಟಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಟಗಾರರು ಆಗಮಿಸಲಿದ್ದು, ಅವರಿಗೆ ಪ್ರೋತ್ಸಾಹ ನೀಡಿ, ಉತ್ತೇಜನ ನೀಡುವ ಉದ್ದೇಶವನ್ನು ಹೊಂದಿದ್ದೇವೆ. ಅಲ್ಲದೆ ಕೆ.ಎನ್.ಗ್ರೂಪ್ ಸಂಸ್ಥೆಯ ವತಿಯಿಂದ ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸುವುದು, ಪಂದ್ಯಾವಳಿಯ ಒಂದು ಭಾಗವಾಗಿದೆ ಎಂದು ಮಾಹಿತಿ ನೀಡಿದರು.
ಅಂಗವಿಕಲರಿಗೆ ಅನುಕಂಪಬೇಡ ಅವಕಾಶಕೊಡಿ ಎಂಬ ಉದ್ದೇಶದಿಂದ ಕರ್ನಾಟಕದ ಗ್ರಾಮೀಣ ಪ್ರದೇಶದ 150ಕ್ಕೂ ಹೆಚ್ಚು ಬಾಲಕ, ಬಾಲಕಿಯರು, ಪುರುಷರು, ಮಹಿಳೆಯರು ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ಯಾರಾ ಬ್ಯಾಡ್ಮಿಂಟನ್ ಕ್ರೀಡಾ ಕೂಟವು ವರ್ಗಗಳಾಗಿ ಪಂದ್ಯಗಳನ್ನು ಆಯೋಜಿಸಲಾಗಿದೆ. ಯಾವುದೇ ಪ್ರವೇಶ ಶುಲ್ಕವನ್ನು ತೆಗೆದುಕೊಳ್ಳದೆ ಹಲವು ಸೌಕರ್ಯಗಳನ್ನು ಒದಗಿಸಲಾಗಿದೆ ಎಂದರು.
ಕ್ರೀಡಾಕೂಟದ ಬಗ್ಗೆ ವಿವರಣೆಯನ್ನು ಕರ್ನಾಟಕ ಅಂಗವಿಕಲರ ಸಂಸ್ಥೆಯ ಪದಾಧಿಕಾರಿಗಳಾದ ಎಂ. ಮಹದೇವ್ ಅರ್ಜುನ ಪ್ರಶಸ್ತಿ ಪುರಸ್ಕೃತರು ಹಾಗೂ ಸದರಿ ಸಂಸ್ಥೆಯ ಅಧ್ಯಕ್ಷ, ಕೆ. ಗೋಪಿನಾಥ್, ಪ್ರಧಾನ ಕಾರ್ಯದರ್ಶಿ ಮಾದೇಶ್‌ಚಂದ್ರ, ಜಂಟಿ ಕಾರ್ಯದರ್ಶಿ ಎಂ.ಆರ್. ಮಹೇಶ್ ಗೌಡ, ಉಪಾಧ್ಯಕ್ಷರು ಹಾಗೂ ಮುಖ್ಯಕಾರ್ಯ ನಿರ್ವಹಣಾಧಿಕಾರಿಗಳುಗಳು ಪತ್ರಿಕಾಗೋಷ್ಟಿಯಲ್ಲಿ ಪಾಲ್ಗೊಂಡಿದ್ದರು.
ಹೆಚ್ಚಿನ ಮಾಹಿತಿಗಾಗಿ ಮಾದೇಶ್, ಪ್ರಧಾನ ಕಾರ್ಯದರ್ಶಿ, ಮೊಬೈಲ್ ನಂಬರ್: 9482155361 ಸಂಪರ್ಕಿಸಬಹುದು.
