ಭಾರತದ ಸಂವಿಧಾನದ 75 ವರ್ಷದ ದಿನಾಚರಣೆಯ ಸಂದರ್ಭದಲ್ಲಿ ಸಂವಿಧಾನದ 10 ಹಲವಾರು ವಿಶೇಷತೆಗಳನ್ನ ನಾವು ಗಮನಿಸಬೇಕಾಗಿದೆ. ವಿಶ್ವದಲ್ಲಿಯೇ ಅತ್ಯಂತ ದೊಡ್ಡದಾದಂತಹ ಪುಸ್ತಕದ ರೂಪದಲ್ಲಿರುವ ಸಂವಿಧಾನ ನಮ್ಮದಾಗಿರುತ್ತದೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಭಾರತದ ಸಂವಿಧಾನ ಸಮಿತಿಯನ್ನು 1946ರ ಡಿಸೆಂಬರ್ 9ರಂದು ರಚಿಸಲಾಯಿತು. ಆಗಸ್ಟ್ 29 1947ರಲ್ಲಿ ಸಂವಿಧಾನದ ರಚನಾ ಸಮಿತಿಯನ್ನು ಡಾ ಬಿ ಆರ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚಿಸಲಾಯಿತು. ಇದರಲ್ಲಿ ಕರ್ನಾಟಕದ ವಿ ಎನ್ ರಾವ್ ರವರು ಸಲಹೆಗಾರರಾಗಿರುತ್ತಾರೆ. ಜೊತೆಗೆ ಆರು ಜನರು ಸದಸ್ಯರಿದ್ದರು. ಅವರಲ್ಲಿ ಗೋಪಾಲಸ್ವಾಮಿ ಅಯ್ಯಂಗಾರ್, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಸೈಯದ್ ಮಹಮದ್ ಉಲ್ಲ, ಕೆಎಂ ಮುನ್ಸಿ, ಮಿಟ್ಟಲ್ ಮತ್ತು ಕೇತನ್ ರವರು ಸದಸ್ಯರಾಗಿದ್ದರು. ನಂತರದಲ್ಲಿ ಡಿ,ಪಿ,ಕೇತನ್, ರವರು 1948ರಲ್ಲಿ ನಿಧನರಾದ ಕಾರಣದಿಂದ ಪಿ ಟಿ ಕೃಷ್ಣಮಚಾರಿ ಇವರನ್ನು ನೇಮಿಸಲಾಯಿತು. ಅದೇ ರೀತಿಯಲ್ಲಿ ಅನಾರೋಗ್ಯದ ಕಾರಣದಿಂದ ಕೆಎಂ ಮುನ್ಸಿ, ಅವರ ಬದಲಿಗೆ ಮಾಧವ ರಾವ್ ಇವರನ್ನು ಸದಸ್ಯರನ್ನಾಗಿ ನೇಮಿಸಲಾಯಿತು.
ಎರಡು ವರ್ಷ 11 ತಿಂಗಳು 18 ತಿಂಗಳು ಅವಧಿಯಲ್ಲಿ 1,17,369 ಪದಗಳನ್ನು ಒಳಗೊಂಡ ನೂರಾರು ಪುಟಗಳ ಸಂವಿಧಾನವನ್ನು ರಚಿಸಲಾಯಿತು. ಇದರಲ್ಲಿ 25 ಭಾಗಗಳಿದ್ದು 470 ಆರ್ಟಿಕಲ್ ಗಳನ್ನು ಒಳಗೊಂಡಿರುತ್ತದೆ. ಸಂವಿಧಾನ ಸಮಿತಿಯು ಒಟ್ಟು 11 ಅವಧಿಗೆ ಸಭೆ ನಡೆಸಿರುತ್ತದೆ. ಇದರಲ್ಲಿ ಒಟ್ಟು 299 ಮಂದಿ ಸದಸ್ಯರಿದ್ದರು.
ಹಂಗಾಮಿಯಾಗಿ ಸಂವಿಧಾನ ಸಮಿತಿಗೆ ಸಚ್ಚಿದಾನಂದ ಸಿನ್ಹಾರವರು ಅಧ್ಯಕ್ಷರಾಗಿದ್ದರು. ತದನಂತರ ಬಾಬು ರಾಜೇಂದ್ರ ಪ್ರಸಾದ್ ರವರು ಸಂವಿಧಾನ ಸಮಿತಿಯ ಅಧ್ಯಕ್ಷರಾದರು.
ಕರ್ನಾಟಕದಿಂದ ಸಂವಿಧಾನ ಸಮಿತಿಯಲ್ಲಿ ಅನೇಕರಿದ್ದು ಅತ್ಯುತ್ತಮವಾದ ಸಲಹೆಗಳನ್ನ ನೀಡಿರುತ್ತಾರೆ. ಇವರುಗಳಲ್ಲಿ ಕೆ ಸಿ ರೆಡ್ಡಿ, ಕೆಂಗಲ್ ಹನುಮಂತಯ್ಯ, ಟಿ ಸಿದ್ದಲಿಂಗಯ್ಯ, ವಿ ಎನ್ ರಾವ್, ಸಿದ್ದವೀರಯ್ಯ ನಿಜಲಿಂಗಪ್ಪ, ಗುರುರೆಡ್ಡಿ, ಟಿ ಚನ್ನಯ್ಯಇವರುಗಳಾಗಿರುತ್ತಾರೆ.
ಭಾರತದ ಸಂವಿಧಾನವನ್ನ 1949ರ ನವಂಬರ್ 26ರಂದು ಅಂಗೀಕರಿಸಲಾಯಿತು. 1950ರ ಜನವರಿ 26 ರಿಂದ ಭಾರತದ ಸಂವಿಧಾನ ಜಾರಿಗೆ ಬಂದಿರುತ್ತದೆ .
ಭಾರತದ ಸಂವಿಧಾನವನ್ನ ರಚಿಸುವಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪಾತ್ರ ಅತ್ಯಂತ ಮಹತ್ವದ್ದು. ಅವರಿಗಿದ್ದಂತಹ ಅಪಾರವಾದ ಪಾಂಡಿತ್ಯ, ಜ್ಞಾನ, ವಿದ್ಯೆಯ ಪ್ರಭಾವದಿಂದ ಪ್ರಪಂಚದಲ್ಲಿಯೇ ಅತ್ಯುತ್ತವಾದ ಸಂವಿಧಾನವನ್ನು ರಚಿಸಿಕೊಟ್ಟಿರುತ್ತಾರೆ.
ಸಂವಿಧಾನದ ಕಾರಣದಿಂದ ದೇಶದಲ್ಲಿ ಅನೇಕ ಸಾಮಾಜಿಕ ಪಿಡುಗುಗಳು ಕೊನೆಗಾಣಲು ಸಾಧ್ಯವಾಯಿತು. ಸಮಾಜದಲ್ಲಿ ಸಮಾನತೆ ಉಂಟಾಗಲು ಕಾರಣವಾಯಿತು. ಪ್ರಜಾಪ್ರಭುತ್ವಕ್ಕೆ ಭಾರತದ ಸಂವಿಧಾನ ಕಳಶಪ್ರಾಯವಾಗಿದೆ. ಭಾರತದ ಸಂವಿಧಾನದಿಂದ ಭಾರತೀಯರ ಬದುಕು ರೂಪಗೊಂಡಿದೆ.
ಸಂವಿಧಾನ ರಚಿಸಿಕೊಟ್ಟು ಮತದಾನದ ಹಕ್ಕು, ಧಾರ್ಮಿಕ ಹಕ್ಕು, ಮಾತನಾಡುವ ಹಕ್ಕು, ವಿದ್ಯೆಯ ಹಕ್ಕು, ಎಲ್ಲ ಸೌಲಭ್ಯ ಸೌಕರ್ಯಗಳನ್ನು ಪಡೆಯುವ ಹಕ್ಕು, ಇವುಗಳನ್ನ ನೀಡಿರುವ ನಮ್ಮ ಸಂವಿಧಾನಕ್ಕೆ ನಮ್ಮ ನಮನಗಳು.
– ಕೆ ಎಸ್ ನಾಗರಾಜ್, ಬೆಂಗಳೂರು




