ರಾಜ್ಯ ವಿಧಾನಮಂಡಲದ ಸದಸ್ಯತ್ವಕ್ಕೆ ಅರ್ಹತೆ

5 months ago

173. ರಾಜ್ಯ ವಿಧಾನಮಂಡಲದ ಸದಸ್ಯತ್ವಕ್ಕೆ ಅರ್ಹತೆ:- ಯಾರೇ ವ್ಯಕ್ತಿಯು,-

(ಎ) (1963ನೆಯ ಇಸವಿಯ ಸಂವಿಧಾನ (ಹದಿನಾರನೆಯ ತಿದ್ದುಪಡಿ) ಅಧಿನಿಯಮದ 4ನೆಯ ಪ್ರಕರಣದ ಮೂಲಕ (ಎ) ಖಂಡಕ್ಕೆ ಬದಲಾಗಿ ಪ್ರತ್ಯಾಯೋಜಿಸಲಾಗಿದೆ.) ಭಾರತದ ನಾಗರಿಕನಾಗಿರುವ ಹೊರತು ಮತ್ತು ಚುನಾವಣಾ ಆಯೋಗವು ಆ ಬಗ್ಗೆ ಅಧಿಕೃತಗೊಳಿಸಿರುವ ಯಾರೇ ವ್ಯಕ್ತಿಯ ಮುಂದೆ ಮೂರನೆಯ ಅನುಸೂಚಿಯಲ್ಲಿ ಆ ಉದ್ದೇಶಕ್ಕಾಗಿ ಕೊಟ್ಟಿರುವ ನಮೂನೆಯಲ್ಲಿ ಪ್ರಮಾಣ ಅಥವಾ ಪ್ರತಿಜ್ಞೆ ಮಾಡಿ ಅದಕ್ಕೆ ರುಜು ಮಾಡಿರುವ ಹೊರತು;

(ಬಿ) ವಿಧಾನಸಭೆಯ ಸ್ಥಾನದ ಸಂದರ್ಭದಲ್ಲಿ ಇಪ್ಪತ್ತೈದು ವರ್ಷಗಳಿಗಿಂತ ಕಡಿಮೆಯಿಲ್ಲದಷ್ಟು ವಯಸ್ಸಿನವನಾಗಿರುವ ಹೊರತು ಮತ್ತು ವಿಧಾನಪರಿಷತ್ತಿನ ಸ್ಥಾನದ ಸಂದರ್ಭದಲ್ಲಿ ಮೂವತ್ತು ವರ್ಷಗಳಿಗಿಂತ ಕಡಿಮೆಯಿಲ್ಲದಷ್ಟು ವಯಸ್ಸಿನವನಾಗಿರುವ ಹೊರತು; ಮತ್ತು

(ಸಿ) ಸಂಸತ್ತು ಮಾಡಿದ ಯಾವುದೇ ಕಾನೂನಿನ ಮೂಲಕ ಅಥವಾ ಅದರ ಮೇರೆಗೆ ನಿಯಮಿಸಬಹುದಾದಂಥ ಇತರ ಅರ್ಹತೆಗಳನ್ನು ಹೊಂದಿದ್ದ ಹೊರತು – ರಾಜ್ಯದ ವಿಧಾನಮಂಡಲದಲ್ಲಿನ ಒಂದು ಸ್ಥಾನವನ್ನು ಭರ್ತಿ ಮಾಡುವುದಕ್ಕಾಗಿ ಆಯ್ಕೆಯಾಗಲು ಅರ್ಹನಾಗಿರತಕ್ಕದ್ದಲ್ಲ.

Source: The Constitution Of India (AS ON 14th JANUARY 2019), Government Of India, Ministry of Law and Justice, Legislative Department, Karnataka Official Language (Legislative) Commission and Directorate of Translations, Government of Karnataka, Page No. 68

Leave a Reply