ನಾಟಕ ಕಲಿಕಾ ಶಿಬಿರ: ಆಸಕ್ತರಿಂದ ಅರ್ಜಿ ಆಹ್ವಾನ

2 years ago

ಜನವರಿ 6ರಂದು ಸಂದರ್ಶನ ಆಯೋಜನೆ

ಧಾರವಾಡ: ಧಾರವಾಡ ರಂಗಾಯಣ ತನ್ನ ರಂಗ ಚಟುವಟಿಕೆಯನ್ನು ವಿಸ್ತರಿಸುವ ಉದ್ದೇಶದಿಂದ ನುರಿತ ರಂಗ ನಿರ್ದೇಶಕರಿಂದ ರಂಗ ಕಲಾವಿದರಿಗಾಗಿ ನಾಟಕ ಸಿದ್ಧತಾ ಶಿಬಿರವನ್ನು ಧಾರವಾಡ ರಂಗಾಯಣದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಶಿಬಿರದಲ್ಲಿ ಒಂದು ಹೊಸ ನಾಟಕವನ್ನು ಶಿಬಿರಾರ್ಥಿಗಳಿಂದ ಸಿದ್ಧಪಡಿಸಲಾಗುವುದು. ಸಿದ್ಧಗೊಂಡ ನಾಟಕದ ಪ್ರದರ್ಶನವನ್ನು ಕೇಂದ್ರ ಸ್ಥಾನದಲ್ಲಿ ಹಾಗೂ ವಿವಿಧ ಜಿಲ್ಲೆಗಳಲ್ಲಿ 05 ಪ್ರದರ್ಶನಗಳನ್ನು ಏರ್ಪಡಿಸಲಾಗುವುದು ಎಂದು ರಂಗಾಯಣ ಆಡಳಿತಾಧಿಕಾರಿ ಶಶಿಕಲಾ ಹುಡೇದ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಶಿಬಿರ ಜನವರಿ 11, 2024 ರಿಂದ 20 ದಿನಗಳವರೆಗೆ ಬೆಳಿಗ್ಗೆಯಿಂದ ಸಂಜೆಯವರೆಗೆ ಪೂರ್ಣಾವಧಿಯಾಗಿ ನಡೆಯುತ್ತದೆ. ಆಯ್ಕೆಯಾದ ಶಿಬಿರಾರ್ಥಿಗಳಿಗೆ ರೂ.10,000/-ಗಳ ಗೌರವ ಸಂಭಾವನೆ ಹಾಗೂ ಮಧ್ಯಾಹ್ನದ ಊಟ, ಒದಗಿಸಲಾಗುವುದು. 20 ರಿಂದ 40 ವರ್ಷದೊಳಗಿನ ವಯೋಮಾನದ ಕಲಾವಿದರು, ಕಲಾವಿದೆಯರು ಶಿಬಿರಾರ್ಥಿಗಳಾಗಬಹುದು. 15 ಜನ ಅಭ್ಯರ್ಥಿಗಳಿಗೆ ಮಾತ್ರ ಪ್ರವೇಶವಿದ್ದು, ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ಅನುಭವ, ಆಸಕ್ತಿ ಬದ್ಧತೆಯ ಆಧಾರದ ಮೇಲೆ ಸಂದರ್ಶನದ ಮೂಲಕ ಶಿಬಿರಾರ್ಥಿಗಳ ಅಂತಿಮ ಆಯ್ಕೆಯನ್ನು ಮಾಡಲಾಗುವುದು ಹಾಗೂ ಶಿಬಿರಾರ್ಥಿಗಳು ಕಡ್ಡಾಯವಾಗಿ 05 ಪ್ರದರ್ಶನಗಳಿಗೆ ಒಪ್ಪಿಗೆಯನ್ನು ಸೂಚಿಸಬೇಕು.

ಶಿಬಿರದಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳು ತಮ್ಮ ಇತ್ತಿಚಿನ ಭಾವಚಿತ್ರದೊಂದಿಗೆ ಹೆಸರು, ವಿಳಾಸ, ದೂರವಾಣಿ, ವಿದ್ಯಾರ್ಹತೆ, ರಂಗಭೂಮಿ ಅನುಭವ ವಿವರ, ಶಿಬಿರಾರ್ಥಿಯಾಗಿ ತರಬೇತಿ ಪಡೆಯುವ ಉದ್ದೇಶ ಇತ್ಯಾದಿ ವಿವರ ಹಾಗೂ ವಯಸ್ಸಿನ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಬೇಕು.

ಶಿಬಿರಾರ್ಥಿಗಳು ಕಡ್ಡಾಯವಾಗಿ ಶಿಬಿರದ ಚಟುವಟಿಕೆಗಳಲ್ಲಿ ಭಾಗವಹಿಸಲು ಸಿದ್ಧರಿರಬೇಕು. 20 ದಿನ ನಿರಂತರವಾಗಿ ನಡೆಯುವ ಈ ಶಿಬಿರದ ಮಧ್ಯದಲ್ಲಿ ಯಾವುದೇ ರಜೆ ಇರುವುದಿಲ್ಲ. ಹಾಗೂ ಶಿಬಿರದ ಮಧ್ಯದಲ್ಲಿ ಬಿಟ್ಟರೇ ಗೌರವ ಸಂಭಾವನೆಗೆ ಅರ್ಹರಿರುವುದಿಲ್ಲ.

ರಂಗಾಯಣದ ನಿಬಂಧನೆ ಹಾಗೂ ಷರತ್ತುಗಳಿಗೊಳಪಟ್ಟು, ಆಸಕ್ತರು ಸ್ವವಿವರದೊಂದಿಗೆ ಜನವರಿ 05 2024ರ ಒಳಗಾಗಿ ಆಡಳಿತಾಧಿಕಾರಿಗಳು, ರಂಗಾಯಣ ಪಂ.ಬಸವರಾಜ ಬಯಲು ರಂಗಮಂದಿರ, ಕಾಲೇಜು ರಸ್ತೆ, ಧಾರವಾಡ-580001 ಈ ವಿಳಾಸಕ್ಕೆ ಖುದ್ದಾಗಿ ಅಥವಾ ಅಂಚೆ ಮೂಲಕ ಅಥವಾ ಇ-ಮೇಲ್ dharwadrangayana@gmail.com ಮೂಲಕ ಕಳುಹಿಸಬಹುದು.

ಶಿಬಿರಾರ್ಥಿಗಳ ಆಯ್ಕೆಗಾಗಿ ಸಂದರ್ಶನವು ಜನವರಿ 6, 2024ರಂದು ಇರುತ್ತದೆ. ಸಂದರ್ಶನಕ್ಕೆ ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ರಂಗಾಯಣ ಕಚೇರಿ ಹಾಗೂ ದೂ.ಸಂ. 8296226696, 9986573449ಗೆ ಸಂಪರ್ಕಿಸಬಹುದು.

Leave a Reply