ಡಾ. ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ ಪ್ರದಾನ

2 years ago

#Siddalingaiah #Literary #Award #Kasapa

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ಡಾ. ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಡಿಸೆಂಬರ್ ೦೮ ಶುಕ್ರವಾರ ಸಂಜೆ ೦೫.೦೦ ಗಂಟೆಗೆ ಚಾಮರಾಜಪೇಟೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಹಮ್ಮಿಕೊಂಡಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಣೆಯಲ್ಲಿ ತಿಳಿಸಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ, ಬೆಂಗಳೂರಿನ ಖ್ಯಾತ ಸಾಹಿತಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅವರು ಭಾಗವಹಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ರಮಾಕುಮಾರಿ ಸಿದ್ದಲಿಂಗಯ್ಯ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

೨೦೧೮ನೆಯ ಸಾಲಿನ ಡಾ. ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿಯನ್ನು ಕೋಲಾರದ ಕೋಟಿಗಾನಹಳ್ಳಿ ರಾಮಯ್ಯ ಅವರಗೆ, ೨೦೧೯ನೆ ಸಾಲಿನ ಪ್ರಶಸ್ತಿಯನ್ನು ಕಲಬುರಗಿಯ ಡಾ. ಎಚ್.ಟಿ. ಪೋತೆಯವರಿಗೆ, ೨೦೨೦ನೆಯ ಸಾಲಿನ ಪ್ರಶಸ್ತಿಯನ್ನು ವಿಜಯಪುರದ ಇಂದುಮತಿ ಲಮಾಣಿ ಅವರಿಗೆ, ೨೦೨೧ನೆಯ ಸಾಲಿನ ಪ್ರಶಸ್ತಿಯನ್ನು ಕೋಲಾರದ ಡಾ. ಕಾ.ವೆಂ. ಶ್ರೀನಿವಾಸಮೂರ್ತಿ ಅವರಿಗೆ, ೨೦೨೨ನೆಯ ಸಾಲಿನ ಪ್ರಶಸ್ತಿಯನ್ನು ಗದಗಿನ ಡಾ. ಅರ್ಜುನ ಗೊಳಸಂಗಿ ಅವರಿಗೆ ಹಾಗೂ ೨೦೨೩ನೆಯ ಸಾಲಿನ ಡಾ. ಸಿದ್ದಲಿಂಗಯ್ಯ ಸಾಹಿತ್ಯ ದತ್ತಿ ಪ್ರಶಸ್ತಿಯನ್ನು ಹಾಸನ ನಾಗರಾಜ್ ಹೆತ್ತೂರು ಅವರಿಗೆ ಪ್ರಸಸ್ತಿ ಪ್ರದಾನ ಮಾಡಲಾಗುವುದು.

Leave a Reply