ಮುತ್ತಣ್ಣ ನೆನಪಿನಲ್ಲಿ ನೋಟ್ ಬುಕ್ ಮತ್ತು ಪೆನ್ಸಿಲ್ ವಿತರಣೆ

2 years ago

ಇಂದು ನಮ್ಮ ನಿಡಗುಂದಿಯಲ್ಲಿ ಹತ್ತಾರು ವರ್ಷ ಪ್ರೌಢ ಶಾಲಾ ಶಿಕ್ಷಕರಾಗಿದ್ದು ಕೊರೊನಾ ಮಹಾಮಾರಿಗೆ ಬಲಿಯಾದ ಕ್ರಿಯಾಶೀಲ ಶಿಕ್ಷಕರಾಗಿದ್ದ ಮುತ್ತಣ್ಣ ಕೋಟಿಯವರ ಜನ್ಮದಿನ. ನಮ್ಮ ಶಾಲೆ ಮಕ್ಕಳ ಬಗ್ಗೆ ಅಪಾರ ಅಭಿಮಾನ ಇಟ್ಟುಕೊಂಡು ನಮ್ಮ ಶಾಲೆಗೂ ಆಗಾಗ ಬರುತ್ತಿದ್ದ ಮಾನವೀಯ ಜೀವ ಮುತ್ತಣ್ಣ ಸರ್.

ಅವರ ನೆನಪಿನಲ್ಲಿ ಇಂದು ನಮ್ಮ ಶಾಲೆಯ ಮಕ್ಕಳಿಗೆ ಮುತ್ತಣ್ಣ ಸರ್ ರ ಜನ್ಮದಿನದ ಪ್ರಯುಕ್ತ ಅವರ ಪ್ರೀತಿಯ ಶಿಷ್ಯ ಸಾವಂತ ನಾಯಿಕ ನೋಟ್ ಬುಕ್ ಮತ್ತು ಪೆನ್ ಪೆನ್ಸಿಲ್ ಗಳನ್ನ ವಿತರಿಸಿದರು.

ಸಾವಂತ ನಾಯಿಕ ಕೃಷಿಕ. ತನ್ನ ದುಡಿಮೆಯ ದುಡ್ಡಿನಲ್ಲಿ ನಮ್ಮ ಶಾಲೆಯ ಎಲ್ಲ ಮಕ್ಕಳಿಗೆ ನೋಟ್ ಬುಕ್, ಪೆನ್ ಪೆನ್ಸಿಲ್ ಕೊಡಿಸಿದ್ದಾನೆ. ತನ್ನ ಪ್ರೀತಿಯ ಗುರುಗಳ ನೆನಪಿನಲ್ಲಿ.

ಇಂಥ ಶಿಷ್ಯನನ್ನ ಪಡೆದ ಮುತ್ತಣ್ಣ ಸರ್ ಕೂಡ ಧನ್ಯರು. ಹಾಗೆಯೇ ಅಂಥ ಅಪರೂಪದ ಗುರುಗಳ ಮನುಷ್ಯಪ್ರೇಮವನ್ನ ಮುಂದುವರೆಸಿಕೊಂಡು ಹೋಗುತ್ತಿರುವ ಸಾವಂತ ನಾಯಿಕ ಕೂಡ ಅಭಿನಂದನಾರ್ಹರು.

  • ವೀರಣ್ಣ ಮಡಿವಾಳರ, ಕವಿಗಳು ಮತ್ತು ಶಿಕ್ಷಕರು

Leave a Reply