ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ನೂತನ ಪದಾಧಿಕಾರಿಗಳು ಭಾಗಿ
ಬೆಂಗಳೂರು: ಚಾಮರಾಜಪೇಟೆಯ ಶ್ರೀಪಾದರಾಜಮಠದಲ್ಲಿ ಅಖಿಲ ಕರ್ನಾಟಕ ಮಾಧ್ವ ಮಹಾಸಭಾ ಅಭಿನಂದನಾ ಸಮಾರಂಭ ಮತ್ತು ವಸಂತೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
- ಭಾರತದ 72% IAS ಅಧಿಕಾರಿಗಳು, 90% ಹೈಕೋರ್ಟ್ ನ್ಯಾಯಮೂರ್ತಿಗಳು ಬ್ರಾಹ್ಮಣರೇ?
- ಪ್ರವಾಸಿ ಮಾರ್ಗದರ್ಶಿ ತರಬೇತಿಗೆ ಅರ್ಜಿ ಆಹ್ವಾನ
- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಂದ ‘ಫ್ರೀಡಂ ಹಬ್ಬ’ ಘೋಷಣೆ
- ರಾಜೀನಾಮೆ ಸಲ್ಲಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಬಿ.ಆರ್.ಪಾಟೀಲ್
- ಫೆಲೋಶಿಪ್ಗೆ ಅರ್ಜಿ ಆಹ್ವಾನ
ಶ್ರೀಪಾದರಾಜ ಮಠಾಧೀಶರಾದ ಶ್ರೀ ಸುಜಯನಿಧಿ ತೀರ್ಥ ಶ್ರೀಪಾದಂಗಳವರು, ಗೌರವಾಧ್ಯಕ್ಷ ಅರುಳು ಮಲ್ಲಿಗೆ ಪಾರ್ಥಸಾರಥಿ, ಅಧ್ಯಕ್ಷರಾದ ಮಾಲಿನಿ ಎನ್. ಅಭಿನಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಎಸ್.ರಘುನಾಥ್, ಹಿರಿಯ ಉಪಾಧ್ಯಕ್ಷ ಆರ್.ಲಕ್ಷ್ಮಿಕಾಂತ್, ಖಜಾಂಚಿ ಸುಬ್ಬನರಸಿಂಹ(ಸುಬ್ಬಣ್ಣ) ಅವರಿಗೆ ಅಭಿನಂದಿಸಿ, ಗೌರವಿಸಲಾಯಿತು.
ಶ್ರೀ ಸುಜಯನಿಧಿತೀರ್ಥ ಸ್ವಾಮೀಜಿ ಮಾತನಾಡಿ ಒಳ್ಳೆತನ, ಎಲ್ಲರ ವಿಶ್ವಾಸ ಮತ್ತು ದೇವರ ದಯೆ ಇರುವ ಕಾರಣದಿಂದ ರಘುನಾಥ್ ಅವರು ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಸೌಭಾಗ್ಯ ಲಭಿಸಿದೆ.
ಎಲ್ಲರು ಒಟ್ಟಾಗಿ ಸೇರಿ ಬ್ರಾಹ್ಮಣ ಸಮಾಜ ಅಭಿವೃದ್ದಿ ಮಾಡೋಣ. ವಿಪ್ರರ ಮಕ್ಕಳು ವಿದ್ಯೆ ಕಲಿಯಬೇಕು ಮತ್ತು ಸಂಪ್ರಾದಯ, ಸಂಸ್ಕಾರ ಮರೆಯಬಾರದು ಎಂದರು.
ಅರಳುಮಲ್ಲಿಗೆ ಪಾರ್ಥಸಾರಥಿ ಮಾತನಾಡಿ, ಸ್ವಾತಿಕ ಗುಣ, ತಾಳ್ಮೆ, ಯಶಸ್ಸು ಸಜ್ಜನರಾದ ರಘುನಾಥ್ ರವರದ್ದು. ಸಜ್ಜನರು ಅಧಿಕಾರ ಹಿಡಿದರೆ ಉತ್ತಮ ಆಡಳಿತ ನಿರೀಕ್ಷೆ ಮಾಡಬಹುದು.
ಬ್ರಾಹ್ಮಣ ಯುವ ಸಮುದಾಯ ಸಂಸ್ಕೃತಿ, ಸಂಪ್ರಾದಾಯ ಮರೆಯಬಾರದು ಎಂದರು.
ಕೆ.ವಿ.ರಾಮಚಂದ್ರ, ಸುಧೀಂದ್ರರಾವ್, ಅಶ್ವತ್ಥನಾರಾಯಣ್, ಲಕ್ಷ್ಮೀಶ ಮೊದಲಾವರು ಭಾಗವಹಿಸಿದ್ದರು.



