ಬ್ರಾಹ್ಮಣ ಸಮುದಾಯದ ಹಿರಿಯ ಮುಖಂಡ ಆರ್.ಲಕ್ಷ್ಮಿಕಾಂತ್ ಅಭಿನಂದನಾ ಸಮಾರಂಭ
ಬೆಂಗಳೂರು: ಬಸವನಗುಡಿಯ ದ್ವಾರಕನಾಥ ಭವನದಲ್ಲಿ 75 ವರ್ಷ ಪೂರೈಸಿದ ಬ್ರಾಹ್ಮಣ ಸಮಾಜದ ಮುಖಂಡರು, ರಾಜಕೀಯ ಮುಖಂಡ ಲಕ್ಷ್ಮಿಕಾಂತ್ ಅವರಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು.
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
- ಸಂವಿಧಾನವೇ ನನಗೆ ಧರ್ಮ, ಜನರೇ ನನ್ನ ಪಾಲಿನ ದೇವರು: ಸಿದ್ದರಾಮಯ್ಯ
ಅಧ್ಯಾತ್ಮ ಚಿಂತಕರಾದ ವಿದ್ಯಾವಾಚಸ್ಪತಿ ಡಾ.ಪಾವಗಡ ಪ್ರಕಾಶ್ ರಾವ್, ವಿಶ್ವ ವಿಷ್ಣುನಾಮ ಫೌಂಡೇಷನ್ ಸಂಸ್ಥಾಪಕ ಡಾ.ಅರುಳುಮಲ್ಲಿಗೆ ಪಾರ್ಥಸಾರಥಿ ಮತ್ತು ಖ್ಯಾತ ಜ್ಯೋತಿಷಿ ದ್ವಾರಕನಾಥಗುರೂಜಿ ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ, ಅಭಿನಂದನಾ ಸಮಿತಿ ಅಧ್ಯಕ್ಷ ಎಸ್.ರಘುನಾಥ್, ವಿಪ್ರ ಮುಖಂಡ ಅಭಿನಂದನೆ ಸ್ವೀಕರಿಸುತ್ತಿರುವ ಲಕ್ಷ್ಮಿಕಾಂತ್, ಶಾಸಕ ಸಿ.ಕೆ.ರಾಮಮೂರ್ತಿ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ ಹಾಗೂ ಚಲನಚಿತ್ರರಂಗ ಶ್ರೀನಾಥ್ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.
ಅಶೋಕ ಹಾರನಹಳ್ಳಿ ಮಾತನಾಡಿ, ಮನುಷ್ಯರ ಜೀವನ ಪ್ರತಿವರ್ಷ ಒಂದೊಂದು ಮೈಲುಗಲ್ಲು ಸಾಧಿಸುತ್ತಾನೆ. ಬ್ರಾಹ್ಮಣ ಸಂಘದಲ್ಲಿ ಹಲವಾರು ಸಮಸ್ಯೆಗಳು ಇತ್ತು. ಅದನ್ನ ಪರಿಹರಿಸುತ್ತ ಮುಂದೆ ಸಾಗುತ್ತಿದ್ದೇವೆ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಬ್ರಾಹ್ಮಣ ಸಮುದಾಯ ಸಂಘಟನೆ ಮತ್ತು ಎಲ್ಲರು ಒಂದೇ ಧ್ವನಿಯಲ್ಲಿ ಮಾತನಾಡಲು ಸಂಘಟಿಸಲಾಗುತ್ತಿದೆ ಎಂದರು.
ಜನವರಿ 2025ರಲ್ಲಿ ಬ್ರಾಹ್ಮಣ ಸಮುದಾಯದ ಬೃಹತ್ ಸಮಾವೇಶವನ್ನು ಅರಮನೆ ಮೈದಾನ ತ್ರಿಪುರವಾಸಿನಿ ಹಮ್ಮಿಕೊಳ್ಳಲಾಗಿದೆ. ಸಂಘಟನೆಯಲ್ಲಿ ಕೆಲಸ ಮಾಡುವುದು ಕಷ್ಟ, ಎಲ್ಲರನ್ನು ಸಂಘಟಿಸಿ ಮುಂದೆ ಸಾಗಲು ದೈವಕೃಪೆ ಇರಬೇಕು ಎಂದರು.
ಜೀವನದಲ್ಲಿ ಬಂದ ಸಮಸ್ಯೆ, ಏನು ಒಲಿದಿದೆ ಅದರಲ್ಲಿ ಸಮಾಧಾನವಾಗಿ ಇರಬೇಕು, ಬ್ರಾಹ್ಮಣರು ಎಂದೂ ಯಾವುದಕ್ಕೆ ಒತ್ತಾಯಿಸುವುದಿಲ್ಲ. ಅಂತರರಾಷ್ಟ್ರೀಯ ಕನ್ನಡ ಬ್ರಾಹ್ಮಣರನ್ನು ಅಮೇರಿಕಾ ಮತ್ತು ಯುನೈಟೆಡ್ ಕಿಂಗಡಮ್ ನಲ್ಲಿ ಸಂಘಟನೆ ಮಾಡಲಾಗುತ್ತಿದೆ ಎಂದರು.
100 ಕೋಟಿ ಸಂಗ್ರಹ ಮಾಡಿ ಬ್ರಾಹ್ಮಣರು ನಡೆಸುವ ಕೈಗಾರಿಕೆಗಳಿಗೆ ಸಹಾಯ, ಸಾಲ ನೀಡುವಂತೆ ಕ್ರಮ ಮತ್ತು ಸಂಘವನ್ನು ಸಮರ್ಥ ಸಂಘಟನೆ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.
ಶಾಸಕ ಸಿ.ಕೆ.ರಾಮಮೂರ್ತಿ ಮತಾನಾಡಿ, ನನ್ನ ಮಾರ್ಗದರ್ಶಕರಾದ ಲಕ್ಷ್ಮಿಕಾಂತ್ ರವರು ಕಳೆದ 30 ವರ್ಷಗಳಿಂದ ಬ್ರಾಹ್ಮಣ ಸಮುದಾಯ ಸಂಘಟನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಬ್ರಾಹ್ಮಣ ಜನಾಂಗ ಎಲ್ಲ ಜಾತಿ ಸಮುದಾಯದ ಪ್ರೀತಿಗಳಿಸಿದ್ದಾರೆ. ಸರ್ವೆ ಜನಾಃ ಸುಖಿನೊ ಭವಂತು ಎಂಬಂತೆ ಜೀವನ ಸಾಗಿಸುತ್ತಾರೆ ಎಂದರು.
ವಿಪ್ರ ಮುಖಂಡ ಲಕ್ಷ್ಮಿಕಾಂತ್ ಮಾತನಾಡಿ,ವಿಶ್ವದ ಜನರ ಹಿತ ಬಯಸುವುದು ಮತ್ತು ಎಲ್ಲರ ಜೊತೆಯಲ್ಲಿ ಸ್ನೇಹಮಯಿ ಸಹೋದರತ್ವ ಬಾಳುವುದು ಬ್ರಾಹ್ಮಣ ಜನಾಂಗದವರ ಗುಣವಾಗಿದೆ. ಬ್ರಾಹ್ಮಣರು ಆರ್ಥಿಕವಾಗಿ ಹಿಂದುಳಿದಿದ್ದಾರೆ, ಅವರನ್ನ ಸಮಾಜದ ಮುಖ್ಯವಾಹಿನಿಗೆ ತರಲು ಸಂಘಟಿರಾಗಬೇಕು ಎಂದರು.
ಎಸ್.ರಘುನಾಥ್ ಮಾತನಾಡಿ, ಬ್ರಾಹ್ಮಣ ಸಮುದಾಯ ಸಂಘಟನೆಯಲ್ಲಿ ಆರ್.ಲಕ್ಷ್ಮಿಕಾಂತ್ ರವರ ಕೊಡುಗೆ ಅಪಾರ. ಬ್ರಾಹ್ಮಣರು ಶಿಕ್ಷಣ, ಆರೋಗ್ಯ ರಾಜಕೀಯ, ಕಲೆ ಸಾಹಿತ್ಯ ಎಲ್ಲ ರಂಗದಲ್ಲಿ ಮುಂದೆ ಬರಬೇಕಾದರೆ ಬ್ರಾಹ್ಮಣರು ಸಂಘಟಿತರಾದರೆ ಮಾತ್ರ ಸಾಧಿಸಬಹುದು. ಮುಂದಿನ ತಿಂಗಳು ರಾಜ್ಯ ಮಟ್ಟದ ಬ್ರಾಹ್ಮಣ ಸಮಾಜ ಸಮಾವೇಶ ನಡೆಯುತ್ತಿದೆ ಎಲ್ಲರು ಭಾಗವಹಿಸಿಬೇಕು ಎಂದು ಕರೆ ನೀಡಿದರು.
ಚಲನಚಿತ್ರ ನಟ ಶ್ರೀನಾಥ್ ಮಾತನಾಡಿ, ಬ್ರಾಹ್ಮಣ ಸಮಾಜದ ಲಕ್ಷ್ಮಿಕಾಂತ್ ರವರು ಎಲ್ಲರ ಪ್ರೀತಿಪಾತ್ರರಾಗಿದ್ದಾರೆ. ನಗುನಗುತ ಎಲ್ಲ ಕೆಲಸವನ್ನು ಮಾಡುತ್ತಿದ್ದರು. ಸಮಾಜದ ಎಲ್ಲರ ಏಳಿಗೆಗಾಗಿ ಶ್ರಮಿಸಿದರು ಎಂದರು.
ಮುಡಾ ಮಾಜಿ ಅಧ್ಯಕ್ಷ ಹೆಚ್.ವಿ.ರಾಜೀವ್, ವಿಪ್ರ ಸಮಾಜದ ಮುಖಂಡರುಗಳಾದ ಎಂ.ಆರ್.ವಿ.ಪ್ರಸಾದ್, ನರಸಿಂಹನ್, ಡಿ.ಟಿ.ಪ್ರಕಾಶ್, ಬಿ.ಎಸ್.ರವಿಶಂಕರ್, ಯು.ವಿ.ಶ್ರೀನಿವಾಸ್ ಮೂರ್ತಿ, ಬಲ್ಲಾಳ್ ರಾವ್, ಕೃಷ್ಣಾನಂದ , ಕೆ.ಪಿ.ಪುತ್ತುರಾಯ, ಹೆಚ್.ಸಿ.ಕೃಷ್ಣ, ಎಂ.ಆರ್.ಶಿವಶಂಕರ್, ಪ್ರಹ್ಲಾದ್ ಬಾಬು, ನಾಗರಾಜ್, ಮಲ್ಲಾರ್ ರಾವ್, ರಘುರಾವ್ ವಾಜಪೇಯಿ, ಜಿ.ಕೆ.ಕುಲಕರ್ಣಿ, ಜೆ.ಹೆಚ್.ಆನಿಲ್ ಕುಮಾರ್ ,ರಾಮ್ ಪ್ರಸಾದ್ ಹರಿಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.




