ಶಾಲೆ ಮಕ್ಕಳಿಗೆ ದಸರಾ ಹಬ್ಬದ ಮಹತ್ವ, ಶ್ರೀರಾಮನ ಜೀವನ ಚರಿತ್ರೆ ಗೊಂಬೆಗಳ ಮೂಲಕ ಅರಿವು
ಬೆಂಗಳೂರು: ನಗರದ ಶಂಕರಮಠದ ಕಿರ್ಲೋಸ್ಕರ್ ಕಾಲೋನಿಯಲ್ಲಿ ದಸರಾ ಮಹೋತ್ಸವ ಅಂಗವಾಗಿ ಬಾಲಕೃಷ್ಣ ಬಿ.ಆರ್.ಗೀತಾ, ಉಷಾ ಅನುಷಾ ರವರ ಕುಟುಂಬದವರು ಮನೆಯಲ್ಲಿ ಸಂಪೂರ್ಣ ರಾಮಾಯಣ ಮತ್ತು ದಸರಾ ಜಂಬು ಸವಾರಿ ವಿಶೇಷತೆ ಸಾರುವ ಗೊಂಬೆಗಳನ್ನು ಮನೆಯಲ್ಲಿ ಕುಳ್ಳಿರಿಸಿದ್ದರು.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಆಡಳಿತ ಪಕ್ಷದ ನಾಯಕ ಎಮ್.ಶಿವರಾಜು ಅವರಿಂದ, ಸಪ್ತಗಿರಿ ಪಬ್ಲಿಕ್ ಶಾಲೆಯ ಮಕ್ಕಳಿಗೆ ದಸರಾ ಗೊಂಬೆಗಳ ಆಚರಣೆ ಹಾಗೂ ರಾಮಾಯಣ ಕಥೆಯನ್ನು ಮಕ್ಕಳಿಗೆ ಅರಿವು ಮೂಡಿಸಲು ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಎಮ್.ಶಿವರಾಜು ಮಾತನಾಡಿ, ದಸರಾ ಮಹೋತ್ಸವ 10 ದಿನಗಳ ನಾಡಹಬ್ಬವಾಗಿ ಅಚರಿಸಲಾಗುತ್ತದೆ. ದಸರಾ ಹಬ್ಬದ ವಿಶೇಷತೆ ಹಾಗೂ ಗೊಂಬೆಗಳ ಮೂಲಕ ನಾಡಿನ ಇತಿಹಾಸ, ಸಂಸ್ಕೃತಿ ಸಂಪ್ರಾದಯಗಳನ್ನು ಮಕ್ಕಳಿಗೆ ತಿಳಿಸಲು ಶಾಲೆ ಮಕ್ಕಳಿಗೆ ಗೊಂಬೆಗಳ ಪ್ರದರ್ಶನ ನೋಡಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಆರ್.ಗೀತಾ ಮಾತನಾಡಿ, ಸಂಪೂರ್ಣ ರಾಮಯಾಣದ ಗೊಂಬೆ ಪ್ರದರ್ಶನ ದಸರಾ ಹಬ್ಬದ ಪ್ರಯುಕ್ತ ನಮ್ಮ ಮನೆಯಲ್ಲಿ ಪ್ರದರ್ಶನ ಇಡಲಾಗಿದೆ. ಪುತ್ರಕಾಮೇಷ್ಟಿ ಯಾಗದಿಂದ ಅಕ್ಷರಭ್ಯಾಸ, ತಾಟಕಿ ಸಂಹಾರ, ಅಹಲ್ಯ ಶಾಪ, ಸೀತರಾಮ ಕಲ್ಯಾಣ, ಹಿಡಿದು ಸ್ವಯಂವರ, ಪಟ್ಟಾಭೀಷಕ, ಹಾಗೂ ಅಯೋಧ್ಯೆ ಶ್ರೀರಾಮಮಂದಿರ ವರಗೆ ಗೊಂಬೆಗಳ ಇಡಲಾಗಿದೆ. ಗೊಂಬೆಗಳ ಮೂಲಕ ರಾಮಾಯಣದ ಕಥೆ ಸಾರಲಾಗುತ್ತಿದೆ. ಇಂದಿನ ಮಕ್ಕಳು ತಿಳಿಯಬೇಕು. ಶ್ರೀರಾಮನ ಆದರ್ಶ ಗುಣಗಳ್ಳನ್ನು ಅಳವಡಿಸಿಕೊಳ್ಳಬೇಕು ಎಂದರು.









