ಜಂಬೂಸವಾರಿ ಆನೆಗಳಿಗೆ ಬೀಳ್ಕೊಡುಗೆ

5 years ago

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಮುಗಿದ ಹಿನ್ನೆಲೆಯಲ್ಲಿ ಇಂದು ಅಭಿಮನ್ಯು ನೇತೃತ್ವದ ಗಜ ಪಡೆಯನ್ನು ಬೀಳ್ಕೊಡಲಾಯಿತು. ಅರಮನೆ ಆವರಣದಲ್ಲಿ ಡಿಸಿಎಫ್ಗಳಾದ ಕರಿಕಾಳನ್, ಕಮಲಾ ಹಾಗೂ ಇನ್ನಿತರ ಅಧಿಕಾರಿಗಳ ಸಮ್ಮುಖದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ದಸರಾ ಪ್ರಾರಂಭಕ್ಕೆ ಒಂದು ವಾರ ಮುನ್ನ ಅರಮನೆ ಆವರಣಕ್ಕೆ ಆಗಮಿಸಿದ್ದ ಗಜಪಡೆ ರಾಜೋಪಚಾರವನ್ನು ಸ್ವೀಕರಿಸಿತ್ತು. ಮಾವುತರು, ಕಾವಾಡಿಗರೊಂದಿಗೆ ಆತ್ಮೀಯವಾಗಿ ಲಾರಿಗಳ ಮೂಲಕ ಗಜಪಡೆಯನ್ನು ಬೀಳ್ಕೊಡಲಾಯಿತು.

Leave a Reply