ಗೊಂಬೆ ಅಲಂಕಾರ ಮಾಡಿದ ಮಾಜಿ ಮೇಯರ್ ಪದ್ಮಾವತಿ

5 years ago

ಬೆಂಗಳೂರು: ಮಾಜಿ ಮೇಯರ್ ಜಿ.ಪದ್ಮಾವತಿ ತಮ್ಮ ನಿವಾಸದಲ್ಲಿ ದಸರಾ ಹಬ್ಬದ ಪ್ರಯುಕ್ತ ಗೊಂಬೆಗಳ ಅಲಂಕಾರ ಮಾಡಿದರು. ಈ ವೇಳೆ ಪ್ರತಿಕ್ರಿಯಿಸಿದ ಅವರು, ಕಳೆದ 40 ವರ್ಷಗಳಿಂದ ಪಾರಂಪಾರಿಕ ದಸರಾ ಹಬ್ಬದ ಪ್ರಯುಕ್ತ ನಮ್ಮ ಮನೆಯಲ್ಲಿ ಗೊಂಬೆಗಳ ಹಬ್ಬವನ್ನು ಅಚರಿಸಿಕೊಂಡು ಬರುತ್ತಿದ್ದೇವೆ ಎಂದರು.

ನಮ್ಮ ನಾಡಿನ ಸಂಪ್ರದಾಯ, ಸಂಸ್ಕೃತಿಯನ್ನು ಮರೆಯಬಾರದು ಮತ್ತು ಮುಂದಿನ ಪೀಳಿಗೆಗೆ ಶಾಶ್ವತವಾಗಿ ಉಳಿಯುವಂತಹ ಕೆಲಸ  ಮಾಡಬೇಕು. ಮನೆಯಲ್ಲಿ ದಸರಾ ಹಬ್ಬದ ದಿನ ವೆಂಕಟೇಶ್ವರ ದೇವರು ಮತ್ತು ರಾಜ, ಪಟ್ಟದರಾಣಿ ಮತ್ತು ಮೈಸೂರಿನ ಅಂಬಾರಿ ಮತ್ತು ಕುದುರೆ ಸಾರೋಟ್, ವಾದ್ಯಗೋಷ್ಟಿ ತಂಡ ಮೈಸೂರಿನಲ್ಲಿ ದಸರಾ ಜರುಗುವ ಸಾಂಸ್ಕೃತಿಕ ವೈಭವ ಸಾರುವ ಗೊಂಬೆಗಳನ್ನು ಕೂರಿಸಲಾಗಿದೆ. ಬೆಳಗ್ಗೆ ಮಹಿಳೆಯರಿಂದ ದೇವರನಾಮ, ಲಲಿತಾ ಸಹಸ್ತ್ರನಾಮ ಹಮ್ಮಿಕೊಳ್ಳಲಾಗಿದೆ ಎಂದರು.

ಕಳೆದ 20 ತಿಂಗಳಿಂದ ಕೊರೋನ ಮಹಾಮಾರಿಯಿಂದ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ತಾಯಿ ಚಾಮುಂಡೇಶ್ವರಿ ಆಶೀರ್ವಾದ, ಕೃಪೆಯಿಂದ ಬಂದಿರುವ ಸಂಕಷ್ಟಗಳು ದೂರವಾಗಲಿ, ನಾಡಿನಲ್ಲಿ ಸುಖಶಾಂತಿ ಲಭಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

Leave a Reply