ಯಾದಗಿರಿ: ಭಾರತದ ಇತಿಹಾಸದಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಒಬ್ಬ ಮಹಾನ್ ನಾಯಕ. ಅವರು ಕೇವಲ ನಾಯಕರಾಗಿರಲಿಲ್ಲ, ಬದಲಾಗಿ ತಮ್ಮ ಜೀವನದುದ್ದಕ್ಕೂ ಸಮಾನತೆ, ನ್ಯಾಯ ಮತ್ತು ಮಾನವ ಹಕ್ಕುಗಳಿಗಾಗಿ ಹೋರಾಡಿದ ಮಹಾನ್ ವ್ಯಕ್ತಿ ಎಂದು ಪತ್ರಕರ್ತ ಡಿ.ಸಿ ಪಾಟೀಲ್ ಹೇಳಿದರು.
ಸುರಪುರ ತಾಲೂಕಿನ ಮಾಲಗತ್ತಿಯಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ 135ನೇ ಜಯಂತಿ ನಿಮಿತ್ತ ಆಯೋಜಿಸಲಾಗಿದ್ದ ಮಹಾನಾಯಕ ಪ್ರಿಮಿಯರ್ ಲೀಗ್ -2 ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ನಮ್ಮ ಭಾಗ ಶಿಕ್ಷಣ ಕ್ಷೇತ್ರದಲ್ಲಿ ಮುಂದೆ ಬರಬೇಕಾದರೆ ಕೇವಲ ಶಿಕ್ಷಕರ ಮೇಲೆ ಭಾರ ಹಾಕಿ ಕೂತರೆ ಸಾಲದು ಸಾರ್ವಜನಿಕರು ಇದರ ಬಗ್ಗೆ ನಿಗಾ ವಹಿಸಬೇಕು. ಮಕ್ಕಳು ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಿದರೆ ಆರೋಗ್ಯ ಉತ್ತಮವಾಗಿರಲಿದೆ ಎಂದರು.
ಮುಖ್ಯೋಪಾಧ್ಯಾಯ ಬಸವರಾಜ ಮಲ್ಲೆ ಮಾತನಾಡಿ, ಬಾಬಾ ಸಾಹೇಬರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದರು .ಅವರ ಮಾರ್ಗದಲ್ಲಿ ನಡೆಯಬೇಕಾದರೆ ತಾವು ಶಿಕ್ಷಣವಂತರಾಗಬೇಕು ಎಂದರು.
ಡಿಎಸ್.ಎಸ್. ಜಿಲ್ಲಾ ಸಂಚಾಲಕ ಶ್ರೀನಿವಾಸ ನಾಯಕ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಎಂದರೆ ಕೇವಲ ಆಡಂಬರದ ಆಚರಣೆಯಲ್ಲ ಅವರು ಜ್ಞಾನದ ಸಾಗರ ಎಂದರು.
ತಮಗಾಗಿರುವ ಕಷ್ಟ ಕಾರ್ಪಣ್ಯಗಳು ನನ್ನ ಮುಂದಿನ ಪೀಳಿಗೆಗೆ ಬರಬಾರದು ಎಂದು ತಿಳಿದು ಸಂವಿಧನಾದಲ್ಲಿ ಹಲವು ಹಕ್ಕು ಮತ್ತು ಕರ್ತವ್ಯಗಳನ್ನು ಸೇರಿಸಿ ಈಡಿ ವಿಶ್ವಕ್ಕೆ ಮಾದರಿಯಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಣ್ಣಕ್ಕೆಪ್ಪ ಸಾಹುಕಾರ, ಭೀಮಣ್ಣ ದೊರೆ, ಮಹಾರಾಯ ಸಾಹುಕಾರ, ಮಡಿವಾಳಪ್ಪ ಕಟ್ಟಿಮನಿ, ಆರ್.ಎಸ್ ಮಾಲಗತ್ತಿ, ಹುಸೇನ್ ಪಟೇಲ್, ಪರಶುರಾಮ ಗಡ್ಡದ, ಮುತ್ತುರಾಜ ಬಡಿಗೆರ, ಗೊಲ್ಲಾಳಪ್ಪ ದೊರೆ, ರಾಜು ದೊಡ್ಮನಿ, ಮಂಜು ತುಂಬಗಿ, ಹಳ್ಳೆಪ್ಪ ಕವಾಲ್ದಾರ, ಕಾಶಿಪತಿ ಕಂಬಾರ, ಎಂ.ಎಸ್ ಮಳ್ಳಿ, ಶ್ರೀಶೈಲ್ ಮ್ಯಾಗೇರಿ, ಭೀಮರಾಯ ಬಡಿಗೆರ, ರಾಜು ಸಾಹುಕಾರ, ರುದ್ರಯ್ಯ ಸ್ವಾಮಿ, ಅಬ್ದುಲ್ ಪಟೇಲ್ ಅಬ್ಬಾಸಲಿ ಮಕ್ಕಾಂದಾರ ಬಾಬು ಕಂಬಾರ, ಮಲ್ಲಪ್ಪ ಬಡಿಗೆರ, ಮಲ್ಲು ಸಜ್ಜನ ಮೊದಲಾದವರು ಉಪಸ್ಥಿತರಿದ್ದರು.




