10 ಕೋಟಿ ವೆಚ್ಚದಲ್ಲಿ ಶ್ರೀ ರಾಮಮಂದಿರ ಆಟದ ಮೈದಾನ ನವೀಕರಣ

3 years ago

ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಶ್ರೀರಾಮ ಮಂದಿರ ವಾರ್ಡ್ ನಲ್ಲಿ ಶ್ರೀರಾಮಮಂದಿರ ಆಟದ ಮೈದಾನವನ್ನು 10 ಕೋಟಿ ವೆಚ್ಚದಲ್ಲಿ ನವೀಕರಣ ಕಾಮಗಾರಿ ಅಂತಿಮ ಹಂತದಲ್ಲಿ ಇದ್ದು ಸ್ಥಳಕ್ಕೆ ಮಾಜಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್  ಭೇಟಿ ಪ್ರಗತಿ ಪರಿಶೀಲನೆ ಮಾಡಿದರು.

ಇದೇ ವೇಳೆ ಮಾತಾಡಿದ ಎಸ್.ಸುರೇಶ್ ಕುಮಾರ್, ಬೆಂಗಳೂರಿನ ಶ್ರೀ ರಾಮಮಂದಿರ ಆಟದ ಮೈದಾನ ರಾಮಲೀಲಾ ಮೈದಾನದಷ್ಟೆ ಪ್ರಸಿದ್ದಿ ಇದೆ.
ರಾಷ್ಟದ ಮಹಾನ್ ನಾಯಕರುಗಳು ಶ್ರೀ ರಾಮ ಮಂದಿರ ಆಟದ ಮೈದಾನಕ್ಕೆ ಭೇಟಿ ನೀಡಿದ್ದಾರೆ.
ಶ್ರೀ ರಾಮಮಂದಿರ ಆಟದ ಮೈದಾನವನ್ನು ನವೀಕರಣ ಕಾಮಗಾರಿ ಭರದಿಂದ ಸಾಗಿದೆ ಎಂದರು.

ಜನರು ಕುಳಿತುಕೊಳ್ಳುಲು ಗ್ಯಾಲರಿಯಲ್ಲಿ ಸುವ್ಯವಸ್ಥಿತ ಆಸನ ವ್ಯವಸ್ಥೆ, ಟೆನ್ ಸಿಲ್ ರೂಫ್, ರಕ್ಷಣಾ ಬೇಲಿ, ಹೊನಲು ಬೆಳಕು ವ್ಯವಸ್ಥೆಯನ್ನ ಮತ್ತು ಮುಖ್ಯದ್ವಾರ ಹಾಗೂ ವೇದಿಕೆ ಮೇಲ್ಚಾವಣಿಯನ್ನ 10 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಎಂದರು.

ಆಟದ ಮೈದಾನದ ನವೀಕರಣ ಕಾಮಗಾರಿಯು ಅಂತಿಮ ಹಂತದಲ್ಲಿ ಇದ್ದು ಈ ತಿಂಗಳ ಅಂತ್ಯಕ್ಕೆ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಎಸ್.ಬೊಮ್ಮಾಯಿರವರ ಅಮೃತಹಸ್ತದಿಂದ ಸಾರ್ವಜನಿಕರಿಗೆ ಆಟದ ಮೈದಾನವನ್ನು ಲೋಕರ್ಪಣೆ ಮಾಡಲಾಗುವುದು ಎಂದರು.

ಪ್ರೇಕ್ಷಕರು ಕುಳಿತುಕೊಳ್ಳುವ ಗ್ಯಾಲರಿಗೆ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ ಮಹನೀಯರುಗಳ ಹೆಸರುಗಳ ಇಡಲಾಗಿದೆ. ಮಾಜಿ ಪ್ರಧಾನಿ ವಾಜಪೇಯಿ ಮತ್ತು ಅನೇಕ ರಾಷ್ಟ್ರ ನಾಯಕರುಗಳು ಈ ಆಟದ ಮೈದಾನದಲ್ಲಿ ಬಹಿರಂಗ ಸಭೆ ಮಾಡಿದ ಇತಿಹಾಸವಿದೆ ಎಂದರು.

ಕ್ರೀಡಾ ಚಟುವಟಿಕೆಗಳು ಪ್ರತಿಯೊಬ್ಬರಿಗೂ ಮುಖ್ಯ ಮಾನಸಿಕ, ದೈಹಿಕವಾಗಿ ಸದೃಢವಾಗಲು ಜನರಿಗೆ ಸಹಕಾರಿಯಾಗಲು 10 ಕೋಟಿ ವೆಚ್ಚದಲ್ಲಿ ನವೀಕರಣ ಕಾರ್ಯ ಮಾಡಲಾಗಿದೆ ಎಂದರು.

ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಶ್ರೀರಾಮಮಂದಿರ ಜೊತೆಯಲ್ಲಿ ಇನ್ನು ಐದು ಕ್ರೀಡಾಂಗಣ ನವೀಕರಣ ಕಾರ್ಯ ಮುಗಿಯುವ ಹಂತದಲ್ಲಿದೆ ಯುವ ಕ್ರೀಡಾಪಟುಗಳು, ಮಕ್ಕಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ರಾಜಾಜಿನಗರದ ರಾಘವೇಂದ್ರರಾವ್, ಬಿ.ಎನ್.ಶ್ರೀನಿವಾಸ್, ಯಶಸ್ ನಾಯಕ್, ಕಿರಣ್, ಸತೀಶ್ ಭಗವಾನ್, ಟಿ.ಎನ್.ರಮೇಶ್
ಕೃಷ್ಣಮೂರ್ತಿ ಮತ್ತು ಇಂಜಿನಿಯರ್ ಗಂಗಾಧರ್ ಮೊದಲಾದವರು ಉಪಸ್ಥಿತರಿದ್ದರು.

Leave a Reply