ಕರಾವಳಿಯ ಕಂಬಳ, ತುಳುನಾಡಿನ ಟ್ಯಾಬ್ಲೋ ಮೈಸೂರು ದಸರಾದ ಭಾಗವಾಗಿವೆ: ಡಿ ಕೆ ಶಿವಕುಮಾರ್

5 hours ago

ಮಂಗಳೂರು: ಕರಾವಳಿಯ ಕಂಬಳ, ತುಳುನಾಡಿನ ಟ್ಯಾಬ್ಲೋ ಈ ಬಾರಿಯ ಮೈಸೂರು ದಸರಾದ ಭಾಗವಾಗಿವೆ ಎಂದು ಸಿಎಂ ಡಿ ಕೆ ಶಿವಕುಮಾರ್ ಹೇಳಿದರು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ದಸರಾ ಸಂದರ್ಭದಲ್ಲಿ ಕುದ್ರೋಳಿಗೆ ಆಗಮಿಸುವಂತೆ ಬಹಳ ವರ್ಷಗಳಿಂದ ಜನಾರ್ದನ ಪೂಜಾರಿ ಅವರು ಆಹ್ವಾನ ನೀಡುತ್ತಲೇ ಇದ್ದರು. ಕಳೆದ ವರ್ಷ ಹಬ್ಬದ ಮಧ್ಯೆ ಬಂದಿದ್ದೆ. ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಸಮಾಜಗಳು, ಸಮುದಾಯಗಳನ್ನು ಒಗ್ಗೂಡಿಸುವ ಕೆಲಸವಾಗುತ್ತಿದೆ. ನವರಾತ್ರಿಯಲ್ಲಿ ನವದುರ್ಗೆಯರಿಗೆ ಪ್ರಾರ್ಥಿಸಿ, ಸಾಂಸ್ಕೃತಿಕ ಬದುಕನ್ನು ಬಿಂಬಿಸಲಾಗುತ್ತಿದೆ ಎಂದರು.

ನಮ್ಮ ನಾಡ ಹಬ್ಬ ದಸರಾವನ್ನು ಮೈಸೂರಿನಲ್ಲಿ ಸರ್ಕಾರದ ಪರವಾಗಿ ಆಚರಿಸುತ್ತಿದ್ದೇವೆ. ಅ.21ರಂದು ವಿಜಯದಶಮಿಯಂದು ಕಾರ್ಯಕ್ರಮ ನಡೆಯಲಿದ್ದು, ತುಳುನಾಡಿನ ಪ್ರತಿನಿಧಿಗಳು ಕೂಡ ಆಗಮಿಸುತ್ತಿದ್ದಾರೆ. ಅನೇಕ ಹೊಸ ಕಾರ್ಯಕ್ರಮಗಳನ್ನು ಪರಿಚಯಿಸಲಾಗಿದ್ದು, ಪಥ ಸಂಚಲನದಲ್ಲಿ ನಮ್ಮ ಸೇನಾಪಡೆಗಳ ತಂಡಗಳು ಭಾಗವಹಿಸುತ್ತಿವೆ. ಈ ಬಾರಿ ಹೊಸ ಆನೆ ತಾಯಿ ಚಾಮುಂಡೇಶ್ವರಿ ಅಂಬಾರಿ ಹೊತ್ತು ಹೆಜ್ಜೆ ಹಾಕಲಿದೆ ಎಂದರು.

ಕಂಬಳವನ್ನು ಮೈಸೂರಿಗೆ ತೆಗೆದುಕೊಂಡು ಹೋಗಲಾಗುವುದು ಎಂದು ಹೇಳಿದ್ದೆ. ವಿಜಯನಗರ ಕಾಲದಲ್ಲಿ ದಸರಾ ಸಂದರ್ಭದಲ್ಲಿ ಕೋಣಗಳನ್ನು ಕರೆದುಕೊಂಡು ಬರುತ್ತಿದ್ದರು ಎಂಬ ಇತಿಹಾಸ ತಿಳಿದಿದ್ದೇನೆ.  ಇದು ನಿಮ್ಮ ಹಬ್ಬ, ರಾಜ್ಯದ ಹಬ್ಬ ಎಂದರು.

Leave a Reply