‘ಜೆನ್ ಜಿ’ ಹೆಸರಲ್ಲಿ ಪೋಸ್ಟ್ ಹಾಕಿ ತಗ್ಲಾಕೊಂಡ ಚಕ್ರವರ್ತಿ ಸೂಲಿಬೆಲೆ!

1 day ago

ಕಾಲೇಜಿಗೆ ಭಾಷಣಕ್ಕೆ ಹೋದ ಸೂಲಿಬೆಲೆಗೆ ಫೇಸ್ಬುಕ್ನಲ್ಲಿ ಬೆವರಿಳಿಸಿದ ನೆಟ್ಟಿಗರು

ಬಾಡಿಗೆ ಭಾಷಣಕಾರ, ಹೆಂಗ್ ಪುಂಗ್ ಲೀ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರದಲ್ಲಿರುವ ಆರ್ ಎಸ್ ಎಸ್, ಬಿಜೆಪಿ ಮತ್ತು ಮೋದಿ ಬೆಂಬಲಿಗ ಚಕ್ರವರ್ತಿ ಸೂಲಿಬೆಲೆ ಅವರ ಫೇಸ್ ಬುಕ್ ಕಾಮೆಂಟ್ ಮತ್ತು ಅದಕ್ಕೆ ಬಂದಿರುವ ಪ್ರತಿಕ್ರಿಯೆಗಳು.


ಬೆಂಗಳೂರು: ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಹುಬ್ಬಳ್ಳಿಯ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲು ಹೋಗಿ, ನೆಟ್ಟಿಗರ ತೀವ್ರ ಆಕ್ರೋಶ ಹಾಗೂ ಟ್ರೋಲ್ಗೆ ತುತ್ತಾಗಿದ್ದಾರೆ.
“ಎಡಪಂಥೀಯರು ಜೆನ್ ಜಿ (Gen Z) ಯುವಕರನ್ನು ಭಾರತ ವಿರೋಧಿಗಳು ಎಂದು ಬಿಂಬಿಸಲು ಯತ್ನಿಸುತ್ತಿದ್ದಾರೆ” ಎಂದು ಬರೆದುಕೊಂಡು ಹುಬ್ಬಳ್ಳಿಯ ಗ್ಲೋಬಲ್ ಕಾಲೇಜಿನ ಕಾರ್ಯಕ್ರಮದ ಫೋಟೋಗಳನ್ನು ಸೂಲಿಬೆಲೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಆದರೆ, ಈ ಪೋಸ್ಟ್ ಬೀಳುತ್ತಿದ್ದಂತೆಯೇ ಕಮೆಂಟ್ ಬಾಕ್ಸ್ನಲ್ಲಿ ನೆಟ್ಟಿಗರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದು, ಭಾರಿ ವಾಕ್ಸಮರಕ್ಕೆ ಕಾರಣವಾಗಿದೆ.

ಕಮೆಂಟ್ ಬಾಕ್ಸ್ನಲ್ಲಿ ಆಕ್ರೋಶದ ಮಹಾಪೂರ:
‘ಜೆನ್ ಜಿ’ಯನ್ನು ದೇಶದ್ರೋಹಿ ಎಂದಿದ್ದು ಯಾರು?: ಸೂಲಿಬೆಲೆಯ ಪೋಸ್ಟ್ಗೆ ನೇರವಾಗಿ ತಿರುಗೇಟು ನೀಡಿರುವ ಹಲವು ಬಳಕೆದಾರರು, “ಜೆನ್ ಜಿ ಯುವಕರನ್ನು ದೇಶದ್ರೋಹಿಗಳು ಎಂದು ಕರೆಯುತ್ತಿರುವುದು ನಿಮ್ಮದೇ ಪಕ್ಷ ಮತ್ತು ಬೆಂಬಲಿಗ ಗುಂಪುಗಳು ಹೊರತು ಬೇರಾರೂ ಅಲ್ಲ” ಎಂದು ನೆನಪಿಸಿದ್ದಾರೆ.
ವಿದ್ಯಾರ್ಥಿಗಳಲ್ಲಿ ದ್ವೇಷ ಬಿತ್ತಬೇಡಿ ಎಂಬ ಎಚ್ಚರಿಕೆ: “ಕಾಲೇಜು ವಿದ್ಯಾರ್ಥಿಗಳ ಮನಸ್ಸಿನಲ್ಲಿ ರಾಜಕೀಯ ದ್ವೇಷ ಮತ್ತು ತಾರತಮ್ಯದ ವಿಷಬೀಜ ಬಿತ್ತುವುದನ್ನು ನಿಲ್ಲಿಸಿ. ಇತಿಹಾಸ, ಮಾನವತೆ, ಸಂವಿಧಾನ ಮತ್ತು ವಿಜ್ಞಾನವನ್ನು ಮಕ್ಕಳಿಗೆ ಕಲಿಸಬೇಕೇ ಹೊರತು ಸುಳ್ಳುಗಳನ್ನಲ್ಲ” ಎಂದು ವಾಟಾಳ್ ಬಸವರಾಜು ಸೇರಿದಂತೆ ಹಲವರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.


ಜನಸಾಮಾನ್ಯರ ಸಂಕಷ್ಟವನ್ನು ಯಾವಾಗ ಪ್ರಶ್ನಿಸುತ್ತೀರಿ?: “ಪೆಟ್ರೋಲ್, ಡೀಸೆಲ್, ಸಿಲಿಂಡರ್ ಹಾಗೂ ದಿನಸಿ ಸಾಮಗ್ರಿಗಳ ಬೆಲೆ ಗಗನಕ್ಕೇರಿ ಬಡ ಮತ್ತು ಮಧ್ಯಮ ವರ್ಗದ ಜನ ಕಂಗಾಲಾಗಿದ್ದಾರೆ. ಯುವಜನತೆಗೆ ಉದ್ಯೋಗವಿಲ್ಲ. ಈ ವಾಸ್ತವ ಸಮಸ್ಯೆಗಳನ್ನು ಎಂದಾದರೂ ನೀವು ಅಧಿಕಾರದಲ್ಲಿರುವವರ ಮುಂದೆ ಧೈರ್ಯವಾಗಿ ಪ್ರಶ್ನಿಸಿದ್ದೀರಾ?” ಎಂದು ಶಶಿಧರ್ ಬಿ.ಎಂ ಸೇರಿದಂತೆ ಹಲವು ನೆಟ್ಟಿಗರು ನೇರ ಪ್ರಶ್ನೆಗಳನ್ನು ಎಸೆದಿದ್ದಾರೆ.


ಹೊಟ್ಟೆಪಾಡಿನ ದೇಶಭಕ್ತಿ ಬೇಡ: ದೇಶಭಕ್ತಿಯ ಹೆಸರಿನಲ್ಲಿ ಕೇವಲ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದನ್ನು ವಿದ್ಯಾರ್ಥಿಗಳು ನಂಬುವುದಿಲ್ಲ; ಯುವ ಸಮುದಾಯಕ್ಕೆ ನಿಮ್ಮ ಅಜೆಂಡಾಗಳ ಸ್ಪಷ್ಟ ಅರಿವಿದೆ ಎಂದು ಹಲವರು ಕಾಮೆಂಟ್ ಮೂಲಕ ಎಚ್ಚರಿಸಿದ್ದಾರೆ.
ವಿಡಿಯೋ ಲಿಂಕ್ಗಳ ಸಮರ ಹಾಗೂ ವೈಯಕ್ತಿಕ ನಿಂದನೆ: ಶಶಿಧರ್ ಬಿ.ಎಂ ಎಂಬುವವರು “ಚುನಾವಣೆ ಕಳ್ಳನ ವಿರುದ್ಧ ಮುಂಬೈ” ಹಾಗೂ “ಇಸ್ಕರು ಮತ್ತು ಜುಮ್ಲಾ ವ್ಯಾಪಾರಿಗಳು ತಮ್ಮ ಹಿರಿಯರ ಮಾತು ಕೇಳಿ” ಎಂದು ವಿಡಿಯೋ ಲಿಂಕ್ಗಳನ್ನು ಹಂಚಿಕೊಂಡು ಕೇಂದ್ರ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದಕ್ಕೆ ಪ್ರತಿಯಾಗಿ ಸೂಲಿಬೆಲೆ ಬೆಂಬಲಿಗ ಗಣೇಶ್ ಶೆಣೈ ಎಂಬುವವರು ಪ್ರಶ್ನಿಸಿದವರ ಹೆಸರನ್ನೇ ಬಳಸಿಕೊಂಡು ಏಕವಚನದಲ್ಲಿ ವೈಯಕ್ತಿಕ ನಿಂದನೆಗೆ ಇಳಿದಿರುವುದು ಕಮೆಂಟ್ ಸೆಕ್ಷನ್ನ ಕಾವು ಎಷ್ಟು ಹೆಚ್ಚಿದೆ ಎಂಬುದನ್ನು ತೋರಿಸಿದೆ.

ಕೆಲವೇ ಕೆಲವು ಬೆಂಬಲಿಗರು ಜೈಕಾರ ಹಾಕಿದರೂ, ಒಟ್ಟಾರೆಯಾಗಿ ಕಮೆಂಟ್ ಬಾಕ್ಸ್ ಮಾತ್ರ ಸೂಲಿಬೆಲೆಯವರ ಭಾಷಣದ ಶೈಲಿ ಮತ್ತು ನಿಲುವನ್ನು ತೀವ್ರವಾಗಿ ಪ್ರಶ್ನಿಸುವ ರಣರಂಗವಾಗಿ ಬದಲಾಗಿದೆ. ಯುವಜನತೆಯ ಹೆಸರಿನಲ್ಲಿ ರಾಜಕೀಯ ಪ್ರಚಾರ ನಡೆಸಲು ಹೊರಟ ಸೂಲಿಬೆಲೆಗೆ ಸಾಮಾಜಿಕ ಜಾಲತಾಣದಲ್ಲೇ ಜನ ಕನ್ನಡಿ ತೋರಿಸಿದಂತಾಗಿದೆ.

Leave a Reply