ದಾವಣಗೆರೆ ಗೋದಾಮಿನಲ್ಲಿ ಕಳಪೆ ಅಕ್ಕಿ ಕುರಿತು ಸ್ಪಷ್ಟೀಕರಣ 

5 months ago

ದಾವಣಗೆರೆ: ಇತ್ತೀಚೆಗೆ ಲೋಕಾಯುಕ್ತ ದಾಳಿಯಲ್ಲಿ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ ದಾವಣಗೆರೆ ಗೋದಾಮಿನಲ್ಲಿ ಸಿಕ್ಕ ಕಳಪೆ ಅಕ್ಕಿಯು ಅನ್ನಭಾಗ್ಯ ಅಕ್ಕಿಯಾಗಲಿ ಅಥವಾ ಮಧ್ಯಾಹ್ನದ ಬಿಸಿಯೂಟ ಯೊಜನೆಯ ಅಕ್ಕಿಯಾಗಲಿ ಆಗಿಲ್ಲ. ಇದು 2 ವರ್ಷಗಳ ಹಿಂದೆಯೆ ಎಂ.ಎಸ್.ಪಿ ಯೋಜನೆಯಡಿ ಪೂರೈಕೆಯಾಗಿ, ತಿರಸ್ಕೃತಗೊಂಡ ಅಕ್ಕಿಯಾಗಿದ್ದು, ಈ ಅಕ್ಕಿಯನ್ನು ನಮ್ಮ ಇಲಾಖೆಯ ಯಾವುದೇ ಯೋಜನೆಗಳಿಗೆ ಬಳಸಲು ಅವಕಾಶವಿಲ್ಲ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಮಧುಸೂದನ್ ಸ್ಪಷ್ಟೀಕರಣ ನೀಡಿದ್ದಾರೆ.

Leave a Reply