ದಾವಣಗೆರೆ: ಪ್ರಯಾಣಿಕರ ಹಿತದೃಷ್ಟಿಯಿಂದ ನವಂಬರ್ 3 ರಿಂದ ದಾವಣಗೆರೆಯಿಂದ ಶ್ರೀಶೈಲಕ್ಕೆ ದಾವಣಗೆರೆ ವಿಭಾಗದಿಂದ ಪ್ರತಿನಿತ್ಯ ಹವಾನಿಯಂತ್ರಿತ ರಹಿತ ಸ್ಲೀಪರ್ ಪಲ್ಲಕ್ಕಿ ಸಾರಿಗೆ ಸೌಕರ್ಯವನ್ನು ಒದಗಿಸಲಾಗಿದೆ.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ದಾವಣಗೆರೆಯಿಂದ – ಹರಿಹರ – ಹರಪನಹಳ್ಳಿ –ಹೊಸಪೇಟೆ – ಬಳ್ಳಾರಿ – ಶ್ರೀಶೈಲಕ್ಕೆ ಸಂಜೆ 5.15ಕ್ಕೆ ಹೊರಟು ಬೆಳಿಗ್ಗೆ 6.30ಕ್ಕೆ ತಲುಪುತ್ತದೆ. ಪ್ರಯಾಣ ದರ ರೂ.1216/-. ಶ್ರೀಶೈಲ – ಬಳ್ಳಾರಿ – ಹೊಸಪೇಟೆ – ಹರಪನಹಳ್ಳಿ – ಹರಿಹರ – ದಾವಣಗೆರೆಗೆ ಸಂಜೆ 5.15ಕ್ಕೆ ಹೊರಟು ಬೆಳಿಗ್ಗೆ 6.30ಕ್ಕೆ ದಾವಣಗೆರೆ ತಲುಪುತ್ತದೆ. ಪ್ರಯಾಣ ದರ ರೂ.1216/-.
ಮುಂಗಡ ಬುಕ್ಕಿಂಗ್ ಕೌಂಟರ್ ಗಳಲ್ಲಿ ಮತ್ತು ksrtc.in ನಲ್ಲಿ ಬುಕ್ಕಿಂಗ್ ಮಾಡಲು ಸೌಕರ್ಯ ಕಲ್ಪಿಸಲಾಗಿದೆ. ಪ್ರಯಾಣಿಕರು ಸಾರಿಗೆ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದು.




